ತಂದೆ ಜೊತೆ ಜಗಳವಾಡಿಕೊಂಡು ಫೇಸ್ ಬುಕ್ ಗೆಳೆಯನ ನೋಡಲು ವಿಮಾನ ಹತ್ತಿದ ಬಳಿಕ ಆಗಿದ್ದಾದ್ದರು ಏನು ಗೊತ್ತಾ..?

0
226

ಫೇಸ್‍ಬುಕ್‍ ಗೆಳೆಯನಿಗೆ ಸರ್ಪ್ರೈಸ್ ನೀಡಲು ಬೆಂಗಳೂರಿನ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಭೋಪಾಲ್‍ಗೆ ತೆರಳಿರುವ ಪ್ರಸಂಗವೊಂದು ನಡೆದಿದೆ.

ಅಪ್ರಾಪ್ತ ಬಾಲಕಿ ತನ್ನ ತಂದೆ ಜೊತೆ ಜಗಳವಾಡಿಕೊಂಡು ಫೇಸ್ ಬುಕ್ ಗೆಳೆಯರ ನೋಡಲು ವಿಮಾನದಲ್ಲಿ ಭೋಪಾಲ್ ಗೆ ಹೋಗಿದ್ದು ಅಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಸದ್ಯ ಬೆಂಗಳೂರಿಗೆ ವಾಪಸ್ಸಾಗಿದ್ದಾಳೆ.

ಮೊದಲಿಗೆ ವಿದ್ಯಾರ್ಥಿನಿ ಹುಡುಗ ಮನೆ ಬಳಿ ಹೋಗಿದ್ದಾಳೆ. ತನ್ನ ಫೇಸ್‍ಬುಕ್‍ ಸ್ನೇಹಿತೆಯನ್ನು ಕಂಡ ಹುಡುಗ ಆಕೆಯನ್ನು ಹೋಟೆಲ್ ಒಂದರಲ್ಲಿ ಬುಕ್ ಮಾಡಿ ಇರಿಸಿದ್ದಾನೆ. ಆಕೆಗೆ ಬುದ್ದಿವಾದ ಹೇಳಿ ವಾಪಸ್ ಮನೆಗೆ ಹೋಗುವಂತೆ ಹೇಳಿದ್ದಾನೆ. ಈ ವೇಳೆ ಹುಡುಗಿ ಕಿರುಚಾಡಿ ಗಲಾಟೆ ಮಾಡಿದ್ದರಿಂದ ಪೊಲೀಸರು ಬಂದು ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸೇರಿಸಿದ್ದಾರೆ.

LEAVE A REPLY

Please enter your comment!
Please enter your name here