17 ಅನರ್ಹ ಶಾಸಕರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಸುಪ್ರೀಂ ನೀಡುವ ಮಹತ್ವ ಆದೇಶ ಬರುವವರೆಗೂ ಚುನಾವಣೆಯನ್ನು ಮೂಂದೂಡಿ ಹಾಗೂ ಉಪಚುನಾವಣೆಯನ್ನು ಕೂಡ ಮೂಂದಡಬೇಕು ಎಂದು ಅನರ್ಹ ಶಾಸಕರು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಒಂದು ರೀತಿಯಲ್ಲಿ ಅತೃಪ್ತ ಶಾಸಕರು ತಮ್ಮ ಆಳಲನ್ನು ಯಾರಿಗೂ ಹೇಳದಂತ ಪರಿಸ್ಥಿತಿಯಲ್ಲಿ ಇದ್ದಾರೆ ಎಂದೇ ಹೇಳಬಹುದು. ಇತ್ತ ಸುಪ್ರೀಂ ಕೋರ್ಟ್ನಿಂದ ಬರಬೇಕಿದ್ದ ತೀರ್ಪು ತಡವಾಗುತ್ತಿದೆ. ಅತ್ತ ಈಗಾಗಲೇ ಕ್ಯಾಬಿನೆಟ್ ಕೂಡ ರಚನೆಯಾಗಿದೆ ಮುಂದೆ ಇನ್ನೇನು ಆಗಲಿದೆ ಎಂಬ ಭೀತಿ ಅನರ್ಹ ಶಾಸಕರಿಗೆ ಎದುರಾಗಿದೆ.

ಅನರ್ಹ ಶಾಸಕರು ಮನವಿ ಮಾಡಲು ಮುಖ್ಯ ಕಾರಣ ಅರ್ಜಿ ವಿಚಾರಣೆ ಸುಪ್ರೀಂನಲ್ಲಿ ಇದೆ. ಉಪಚುನಾವಣೆ ಘೋಷಣೆ ಆಗುವುದರ ಒಳಗೆ ವಿಚಾರಣಗೆ ಬರದೆ ಇದ್ದಲ್ಲಿ, ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಹಾಗಾಗಿ ಆನರ್ಹ ಶಾಸಕರಿಗೆ ಅತಂಕ ಶುರುವಾಗಿದ್ದು, ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಪತ್ರದಲ್ಲಿ `ಯಾವುದೇ ಕಾರಣಕ್ಕೂ ಸುಪ್ರೀಂನಿಂದ ತೀರ್ಪು ಬರುವವರೆಗೂ ಚುನಾವಣೆಯನ್ನು ನಡೆಸಬಾರದು, ಸ್ಪೀಕರ್ ನಡೆಯ ವಿರುದ್ದ ನಮಗೆ ಅಸಮಾಧಾನವಿದೆ. ನಮಗೆ ನಿರ್ದಿಷ್ಟ ಸಮಯ ನೀಡಿಲ್ಲ, ಏಕಪಕ್ಷವಾಗಿ ನಿರ್ಧಾರ ತೆಗದುಕೊಂಡು ನಮ್ಮನ್ನು ಅನರ್ಹರಾಗಿ ಮಾಡಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.