ಹುಚ್ಚ ವೆಂಕಟ್ ಈಗ ಹೇಗಿದ್ದಾರೆ ಗೊತ್ತಾ?

0
227

ಕೊಳಕು ಬಟ್ಟೆ,ಕಾಲಲ್ಲಿ ಚಪ್ಪಲಿ ಇಲ್ಲ,ತಾನು ಎಲ್ಲಿದ್ದಿನಿ ಎಂಬ ಅರಿವೆ ಇಲ್ಲದೆ ಚೆನೈನ ಬೀದಿ ಬೀದಿಗಳಲ್ಲಿ ಅಲೆದಾಡುತ್ತಿರುವ ಹುಚ್ಚ ವೆಂಕಟ್! ಒಂದು ಸಮಯದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗಿಯಾಗಿ ಖ್ಯಾತಿಗಳಿಸಿ ನಂತರ ಚುನಾವಣೆಯಲ್ಲಿ ಸ್ಪರ್ದಿಸಿ ಸದಾ ಪ್ರಚಾರದಲ್ಲಿ ಇರುತ್ತಿದ್ದ ಹುಚ್ಚ ವೆಂಕಟ್,ಈಗ ಎಲ್ಲಿದ್ದಾರೆ, ಎನ್ ಮಾಡ್ತಿದ್ದಾರೆ ಎನ್ನುವುದಯ ಯಾರಿಗು ಗೊತ್ತಿರಲಿಲ್ಲ. ಆಗಾಗ ಕಿರಿಕ್ ಮಾಡಿಕೊಂಡು,ಬೆಂಗಳೂರಿನ ಬೀದಿಗಳಲ್ಲಿ ಹೊಡೆದಾಟಕ್ಕಿಳಿಯುತ್ತಿದ್ದ ಹುಚ್ಚ ವೆಂಕಟ್,ಸದಾ ಸುದ್ದಿಯಲ್ಲಿ ಇರುತ್ತಿದ್ದರು!

ಹೇಗೊ ತಮ್ಮ ಜೀವನವನ್ನು ಸಾಗಿಸಿಕೊಂಡು ಹೋಗುತ್ತಿದ್ದ ಹುಚ್ಚ ವೆಂಕಟ್,ಕೆಲವು ತಿಂಗಳುಗಳಿಂದ ಸದ್ದು,ಸುದ್ದಿ ಇರಲಿಲ್ಲ.. ಆದ್ರಿಗ ಮಾಸಿದ ಬಟ್ಟೆ,ಚಪ್ಪಲಿ ಇಲ್ಲದೆ ಒಡಾಡುತ್ತಿದ್ದ ವೆಂಕಟ್ ರಾಂದವ ಚಿತ್ರ ತಂಡದ ಕಣ್ಣಿಗೆ ಬಿದ್ದಿದ್ದರು. ಯು.ಎಷ್.ಒ ವಿಚಾರವಾಗಿ ಚೆನೈ ಗೆ ತೆರಳಿದ್ದ ರಾಂದವ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಹುಚ್ಚ ವೆಂಕಟ್ ಕಾಣಿಸಿಕೊಂಡಿದ್ದರು.

ಇನ್ನು ವೆಂಕಟ್ ರವರನ್ನು ಮಾತನಾಡಿಸಲು ಹೋದರೆ,ಮಾತನಾಡದೆ ಪರಿಚಯ ಇಲ್ಲದಂತೆ ಹೋಗಿದ್ದಾರೆ. ಇನ್ನು ವೆಂಕಟ್ ಅಲೆದಾಡುತ್ತಿರುವ ವೀಡಿಯೊ ಮಾಡಿ ನಟ ಭುವನ್ ಪೊನ್ನಣ್ಣ ಗೆ ಕಳುಹಿಸಿಕೊಟ್ಟಿದ್ದರು. ಇದನ್ನು ನೋಡಿದ ಭುವನ್ ಮನಕರಗಿ ಸಾಮಾಜಿಕ ಜಾಲತಾಣದಲ್ಲಿ,ದಯವಟ್ಟು ಈ ವಿಷಯ ವೆಂಕಟ್ ಕುಟುಂಬದವರಿಗೆ ಮುಟ್ಟಲಿ,ಹಾಗು ಆದಷ್ಟು ಬೇಗ ಅವರನ್ನು ಕರೆತರುವಂತೆ ಮಾಡಲಿ ಎಂದು ಮನವಿಯನ್ನು ಮಾಡಿಕೊಂಡ್ಡಿದ್ದರು.

ರಾಂದವ ಚಿತ್ರತಂಡ ಕೊನೆಗು ಹುಚ್ಚ ವೆಂಕಟ್ ರವರನ್ನು ರಕ್ಷಿಸಿ ಕರೆದುಕೊಂಡು ಹೋಗಿದ್ದಾರೆ! ಚೆನೈನ ಪಡಪಳಿನಿನಲ್ಲಿ ಅಲೆದಾಡುತ್ತಿದ್ದ ವೆಂಕಟ್ ರವರನ್ನ ಕರೆದುಕೊಡು ಹೋಗಿ ಸದ್ಯಕ್ಕೆ ವಸತಿ ವ್ಯವಸ್ತಯನ್ನ ಮಾಡಿಕೊಟ್ಟಿದ್ದಾರೆ! ನೋಡಿದ್ರೆ ಗುರ್ ಎನ್ನುತ್ತಿದ್ದ ಹುಚ್ಚ ವೆಂಕಟ್ ರವರನ್ನ ರಾಂದವ ಚಿತ್ರತಂಡ ಭಯದಿಂದಲೆ ಮಾತಾನಾಡಿಸಿದ್ದಾರೆ! ತದನಂತರ ಕರೆದುಕೊಡು ಹೋಗಿ ಊಟ ಕೊಡಿಸಿದ್ದಾರೆ! ಸದ್ಯ ಚನೈನಲ್ಲಿರುವ ವೆಂಕಟ್ ರವರನ್ನ ಬೆಂಗಳೂರಿಗೆ ಕರೆದುಕೊಂಡು ಬಂದು ಒಳ್ಳೆಯ ತಜ್ಞರ ಬಳಿ ತೋರಿಸ ಬೇಕು,ಯಾರದರು ಸಹಯಾ ಮಾಡಿ ಎಂದು ಚಿತ್ರತಂಡ ಕೇಳಿಕೊಂಡಿದೆ!

LEAVE A REPLY

Please enter your comment!
Please enter your name here