ಬಿಗ್ ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಉಳಿಸಲು ಡಿ ಬಾಸ್ ಫ್ಯಾನ್ಸ್ ಮಾಡಿದ್ದೇನು ಗೊತ್ತಾ ?

0
271

ಕಿರುತರೆಯ ಬಹುದೊಡ್ಡ ರಿಯಾಲಿಟಿ ಶೋ ಎಂದೇ ಹೆಸರಾದ ಬಿಗ್ ಬಾಸ್ ಯಾರಿಗೆ ತಾನೇ ಗೊತ್ತಿರೋಲ್ಲ ಹೇಳಿ. ಅದರಲ್ಲೂ ಈ ಬಾರಿಯ ಬಿಗ್ ಬಾಸ್ ನಲ್ಲಿ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಪ್ರೇಕ್ಷಕರನ್ನು ಗೆದ್ದ ಕುರಿ ಪ್ರತಾಪ್ರನ್ನು ಬಿಗ್ ಬಾಸ್ ಸೀಸನ್-7ರ ಮನೆಯಲ್ಲಿ ಉಳಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹೊಸ ಯೋಜನೆ ಹಾಕಿಕೊಂಡಿದ್ದಾರೆ.

 

ಈಗಾಗಲೇ ಮಜಾ ಟಾಕೀಸ್ನಲ್ಲಿ ಕುರಿ ಪ್ರತಾಪ್ ಎಲ್ಲರನ್ನು ನಕ್ಕು ನಲಿಸಿ ಸಂತಸಗೊಳಿಸಿದ್ದಾರೆ. ಅದೇ ತೆರನಾಗಿ ಸದ್ಯ ಬಿಗ್ ಬಾಸ್ ಸೀಸನ್-7ರ ಹಾಸ್ಯ ಪ್ರತಿಭೆಯಾಗಿರುವ ಕುರಿ ಪ್ರತಾಪ್ ಅವರಿಗೆ ಹೆಚ್ಚು ವೋಟ್ ಮಾಡಿ ಎಂದು ಡಿ ಬಾಸ್ ಅಭಿಮಾನಿಗಳು ಜನರಿಗೆ ಮನವಿ ಮಾಡಿದ್ದಾರೆ.

 

 

ಕುರಿ ಪ್ರತಾಪ್ ತುಂಬಾ ಮುಗ್ಧ. ಅವರು ಅಷ್ಟು ಬೇಗ ಅಗ್ರೆಸ್ಸೀವ್ ಆಗೋಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಬಿಗ್ ಬಾಸ್ ಶೋನಲ್ಲಿ ಎಲ್ಲರನ್ನು ನಕ್ಕು ನಲಿಸಿ, ಮನರಂಜನೆ ನೀಡುತ್ತಿರುವವರ ಸಾಲಿನಲ್ಲಿ ಅವರಿದ್ದಾರೆ. ಮೊದಲ ಮೂರು-ನಾಲ್ಕು ವಾರಗಳಲ್ಲಿ ಕುರಿ ಪ್ರತಾಪ್ ಅವರು ನಾಮಿನೇಷನ್ ಲಿಸ್ಟ್ ಗೆ ಬಂದೇ ಇರಲಿಲ್ಲ. ಇತ್ತೀಚೆಗಷ್ಟೇ ಅವರು ಕೂಡ ನಾಮಿನೇಟ್ ಲಿಸ್ಟ್ ನಲ್ಲಿ ಅವರ ಹೆಸರು ಸೇರಿಕೊಂಡಿದೆ. ಅದರೆ ಜನರು ವೋಟ್ ಮಾಡಿ ಅವರನ್ನು ಸೇವ್ ಮಾಡಿದ್ದಾರೆ.

 

 

ಬಿಗ್ ಬಾಸ್ ಮನೆಯೊಳಗೆ ಒಳಗೊಂದು ಹೊರಗೊಂದು ಇಟ್ಟುಕೊಳ್ಳದೆ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಕುರಿ ಪ್ರತಾಪ್ ಅವರಲ್ಲಿ ಇದೆ. ಹೀಗಾಗಿ ನಾಮಿನೇಟ್ ಆದರೂ ಅವರು ಸೇವ್ ಆಗುತ್ತಾ ಬಂದಿದ್ದಾರೆ. ಈಗಾಗಲೇ ಬಿಬಿ ಮನೆಯಲ್ಲಿ ಕುರಿ ಪ್ರತಾಪ್ ಅವರ ಅಭಿಮಾನಿಗಳು ಅವರನ್ನು ಉಳಿಸಲು ತುಂಬಾನೇವೋಟ್ ಮಾಡುತ್ತಿದ್ದಾರೆ. ಹಾಗೆಯೇ ಜೊತೆಯಲ್ಲಿರುವವರಿಗೂ ವೋಟ್ ಮಾಡಿ ಎಂದು ಮಾಹಿತಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ದರ್ಶನ್ ಅವರ ಸಿನಿಮಾದ ಬ್ಯಾನರನ್ನೇ ಪ್ರತಾಪ್ ಅವರನ್ನು ಉಳಿಕೊಳ್ಳಲು ಅಭಿಮಾನಿಗಳು ಬಳಸಿ ವೋಟ್ ಮಾಡಿಕೊಂಡಿದ್ದು ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

 

 

‘ಒಡೆಯ’ ಸಿನಿಮಾ ರಿಲೀಸ್ ವೇಳೆ ದರ್ಶನ್ ಅಭಿಮಾನಿಗಳು ಥಿಯೇಟರ್ ಮುಂದೆ ಡಿ ಬಾಸ್ ಜೊತೆ ಕೆಲ ಅಭಿಮಾಗಳ ಫೋಟೋ ಬ್ಯಾನರ್ವೊಂದರಲ್ಲಿ ‘ವೋಟ್ ಫಾರ್ ಕುರಿ’ ಎಂದು ಬರೆದು ಕುರಿ ಪ್ರತಾಪ್ ಫೋಟೋವನ್ನು ಕೂಡ ಹಾಕಿದ್ದು ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

LEAVE A REPLY

Please enter your comment!
Please enter your name here