ಜಗತ್ತೇ ಮೆಚ್ಚಿದ ಚಾರ್ಲಿ ಚಾಂಪ್ಲಿನ್ ಅವರ ವೈವಾಹಿಕ ಜೀವನ ಹೇಗಿತ್ತು ಗೊತ್ತಾ ?

0
489

ಚಾರ್ಲಿ ಚಾಂಪ್ಲಿನ್, ಈ ಹೆಸರನ್ನು ಕೇಳದೆ ಇರುವವರು ವಿಶ್ವದಲ್ಲಿ ಯಾರು ಇಲ್ಲಾ ಅನಿಸುತ್ತದೆ. ಹಾಸ್ಯ ಲೋಕದ ಸಾಮ್ರಾಟ/ದಿಗ್ಗಜ ಹುಟ್ಟಿದ್ದು, ಏಪ್ರಿಲ್ 16, 1889 ರಲ್ಲಿ. ಇಂಗ್ಲಾಂಡಿನಲ್ಲಿ ಮಹಾರಾಣಿ ವಿಕ್ಟೋರಿಯಾ ಕಾಲದಿಂದ, ಅವರು ನಿಧನರಾಗುವ ತನಕ(1977), ತಮ್ಮ 75 ವರ್ಷದ ಸುಧೀರ್ಘ ಬದುಕಲ್ಲಿ ಚಾಂಪ್ಲಿನ್ ತಮ್ಮ ಬಹುಪಾಲು ಸಮಯವನ್ನು ಸಿನಿಮಾಗಳಲ್ಲಿಯೇ ಕಳೆದ ಒರ್ವ ಪ್ರತಿಭಾವಂತ ನಟ!

 

 

ಚಾಂಪ್ಲಿನ್ ಕಾಲದಲ್ಲಿ ಚಲನಚಿತ್ರಗಳು ಇನ್ನು ಪ್ರವರ್ದಮಾನಕ್ಕೆ ಬಂದಿರಲಿಲ್ಲ. ಯಾರಿಗೂ ಸಹ ಸಿನಿಮಾಗಳ ಬಗ್ಗೆ ತಿಳಿದಿರಲಿಲ್ಲ. ಲಂಡನ್, ಪ್ಯಾರಿಸ್ ಹೀಗೆ ಮೊದಲಾದ ನಗರದಲ್ಲಿ, ಆಗರ್ಭ ಶ್ರೀಮಂತರ ಹತ್ತಿರ ಕೆಲವೊಂದು ಕ್ಯಾಮೆರಾಗಳಿದ್ದವು. ಆದರೆ ಆ ಕ್ಯಾಮೆರಗಳಲ್ಲಿ ಚಿತ್ರಗಳನ್ನು ತೆಗೆದಾಗ ಮಾತುಕಥೆಗಳನ್ನು ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಶಬ್ದವನ್ನು ಅಳವಡಿಸುವ ತಂತ್ರಜ್ಞಾನ ಯಾರಿಗೂ ತಿಳಿದಿರಲಿಲ್ಲ. ಅಂತಹ ಸಮಯದಲ್ಲಿ ಚಾಂಪ್ಲಿನ್ ತಮ್ಮ ಬಡತನದ ಮಧ್ಯೆಯೂ, ಚಿತ್ರ ತೆಗೆಯುವ ಸಾಹಸಕ್ಕೆ ಕೈ ಹಾಕಿದ್ದರು.

 

ದೊಗಳೆ ಪ್ಯಾಂಟ್, ತಲೆಯ ಮೇಲೋಂದು ಟೋಪಿ, ಬಿಗಿಯಾದ ಜಾಕೆಟ್,ಮುಖದ ಮೇಲೆ ಸಣ್ಣನೆಯ ಮೀಸೆ, ತಲೆಯ ತುಂಬ ಕಪ್ಪು, ಗುಂಗುರು ಕೂದಲೂ ಬಿಟ್ಟುಕೊಂಡು, ಮೊದಲು ಮೂಕಿ ಚಿತ್ರವನ್ನು ನಿರ್ಮಿಸಿ ನಂತರ ಟಾಕಿ ಚಿತ್ರಗಳನ್ನು ನಿರ್ಮಿಸಿ ಅವುಗಳಲ್ಲಿ ಅಭಿನಯಿಸಿ ವಿಶ್ವದ ಗಮನ ಸೆಳೆದರು. ಅದು 1930 ಮತ್ತು 40ರ ದಶಕ, ಮೂಕಿ ಸನಿ ಯುಗ ಅಂತಾನೇ ಹೇಳಬಹುದು, ಚಾಂಪ್ಲಿನ್ ನಗುತ್ತಲೇ ಅಳಿಸುತ್ತಿದ್ದ, ಅಳುತ್ತಲೇ ನಗಿಸಿಕೊಂಡು, ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದರು. ಅಲ್ಲದೇ ಕಿಂಗ್ ಆಫ್ ಕಾಮಿಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದರು ಅವರ ವೈವಾಹಿಕ ಜೀವನ ಮಾತ್ರ ಸದಾ ವಿವಾದದಿಂದಲೆ ಕೂಡಿತ್ತು.

 

 

ದೊಡ್ಡ ಪರದೆಯ ಹಿಂದೆ ಚಾಂಪ್ಲಿನ್ ಎಷ್ಟು ಚತುರರಾಗಿದ್ದರೋ, ಪರೆದೆಯ ಹಿಂದೇ ಕೂಡ ಅಷ್ಟೇ ಚತುರರಾಗಿ ಮೆರದಿದ್ದರು. ತನ್ನ ಹಾಸ್ಯ ಅಭಿನಯದ ಮೂಲಕ ಖ್ಯಾತಿಗಳಿಸಿದ್ದ ಅವರು, ವೈವಾಹಿಕ ಜೀವನದಿಂದ ಕುಖ್ಯಾತಿ ಗಳಿಸಿದ್ದರು. ಮಹಿಳಾ ಅಭಿಮಾನಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ ಚಾರ್ಲಿ, ಅನೇಕ ಹೆಣ್ಣುಮಕ್ಕಳ ಹೃದಯವನ್ನು ಕದ್ದಿದ್ದರು. 5 ಅಡಿ 4 ಇಂಚು ಅಡಿ ಸರಳ ದೇಹಾಕಾರವನ್ನು ಹೊಂದಿದ್ದ ಚಾಂಪ್ಲಿನ್, ತಮ್ಮ ಅಭಿನಯ ಹಾಗೂ ಗ್ಲಾಮರ್ ಗೆ ಹಲವು ಹೆಣ್ಣುಮಕ್ಕಳು ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿದ್ದರು. ಅದರಲ್ಲೂ 18ನೇ ವಯ್ಯಸ್ಸಿನ ಕೆಳಗಿರುವ ಹುಡುಗಿಯರಂತು ಬೇಗನೆ ಅವರಿಗೆ ಮರುಳಾಗುತ್ತಿದ್ದರು. ಆದರೆ ಚಾರ್ಲಿ ಹುಡುಗಿಯರನ್ನು ಇಷ್ಟ ಪಡುತ್ತಿದ್ದರೇ ಹೊರೆತು ನಂಬುತ್ತಿರಲಿಲ್ಲ.

 

 

ಸಿನಿಮಾದಲ್ಲಿ ನಾಯಕಿಯ ಪ್ರೀತಿಗೆ ಹಂಬಲಿಸುತ್ತಿದ್ದ ಚಾರ್ಲಿ ಚಾಂಪ್ಲಿನ್, ನಿಜ ಜೀವನದಲ್ಲಿ ಹಾಗೆ ಇರಲಿಲ್ಲ. ಮೂರು ವಿವಾಹವಾಗಿದ್ದ ಅವರು, 11 ಮಕ್ಕಳನ್ನು ಹೊಂದಿದ್ದರು. ಅಲ್ಲದೇ ಅವರ ವೈವಾಹಿಕ ಸದಾ ವಿವಾದದಿಂದಲೇ ಕೂಡಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಅವರ ಎರಡನೇ ಹೆಂಡತಿ ಬಹಿರಂಗವಾಗಿ ಚಾರ್ಲಿ ಒಬ್ಬ ಸೆಕ್ಸ್ ಮಿಷಿನ್ ಎಂದು ಹೇಳಿದ್ದರು. ಜೊತೆಗೆ ಅನೇಕ ಸಂಭಂದಗಳನ್ನು ಹೊಂದಿದ್ದು, ಅದರಲ್ಲಿ ಮೂರು ವಿವಾಹವನ್ನು ಮಾತ್ರ ಘೋಷಿಸಿದ್ದರು. ಆಗಿನ ಕಾಲದಲ್ಲಿ ನಟನ ಬಗ್ಗೆ ಮತ್ತು ಸೆಕ್ಸ್ ವಿಚಾರಗಳು ದೊಡ್ಡ ಮಟ್ಟದ ಸುದ್ಧಿಯಾಗುತ್ತಿತ್ತು, ಮತ್ತು ಈ ವಿಚಾರಗಳು ಚಾಂಪ್ಲಿನ್ ಅವರ ಕೆಲಸದ ಮೇಲೆ ತುಂಬಾ ಪರಿಣಾಮಗಳು ಬೀರಿತ್ತು.!

 

 

ಈ ವಿಚಾರಗಳಿಂದ ಅವರ ಸಿನಿಮಾ ದಿ ಸರ್ಕಸ್ 2 ವರ್ಷಗಳ ಕಾಲ ಮುಂದೂಡಲ್ಪಟ್ಟಿತು. ಒಂದು ಸಂದರ್ಶದನದಲ್ಲಿ ನಾನು ಹಲವಾರು ಯುವತಿಯರ ಜೊತೆ ದೇಹ ಸಂಪರ್ಕವನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದರು. ಅವರ ಮೊಟ್ಟ ಮೊದಲ ಸಿನಿಮಾ ಮೇಕಿಂಗ್ ಎ ಲೀವಿಂಗ್, ಫೆಬ್ರವರಿ 2, 1914 ರಲ್ಲಿ ತೆರೆಕಂಡ ಈ ಸಿನಿಮಾ, ಅವರ ಬದುಕಿಗೆ ಹೊಸ ತಿರುವನ್ನು ನೀಡಿತು. ಅಲ್ಲಿಂದ ಹಿಂದೆ ತಿರುಗಿ ನೋಡದಾ ಈ ಅಸಾಧ್ಯ ಪ್ರತಿಭೆ, ಪ್ರಪಂಚವೇ ನಿರ್ಭಯವಾಗುವಂತೆ ಎತ್ತರಕ್ಕೆ ಬೆಳೆದರು. ತಮ್ಮ ಹಾಸ್ಯದ ಅಭಿನಯದಿಂದ ಪ್ರಪಂಚದ ಹಾಗು-ಹೋಗುಗಳನ್ನು ತೆರೆಯ ಮೇಲೆ ತಂದಂತಹ ಅದ್ಭುತ ಕಲಾವಿದ ಈ ಚಾರ್ಲಿ ಚಾಂಪ್ಲಿನ್.

 

 

ಜಾರ್ಜ್ ಅವರು ಹೇಳುವ ಪ್ರಕಾರ ಚಿತ್ರರಂಗದಿಂದ ಹೊರ ಬಂದ ಏಕೈಕ ಜೀನಿಯಸ್ ಎಂದರೆ ಚಾರ್ಲಿ ಅವರು ಒಬ್ಬರೇ.. ಇಡೀ ಜಗತ್ತೇ ಮರೆಯಲಾಗದ ಮಾಣಿಕ್ಯ, ಈ ಚಾರ್ಲಿ. ಆದರೆ ಅದೇಕೋ ಏನೋ ಸದಾ ವೈವಾಹಿಕ ವಿಚಾರದಲ್ಲಿ ದೊಡ್ಡ ಮಟ್ಟದ ಸುದ್ಧಿಯಲ್ಲಿರುತ್ತಿದ್ದರು. ಇದರಿಂದ ದೂರ ಹೋಗಬೇಕು ಅಂತಾನೆ, ಅಮೆರಿಕಾ ಬಿಟ್ಟು ಸ್ವಿಜರ್ ಲ್ಯಾಂಡ್ ನಲ್ಲಿ ನೆಲೆಯೂರುತ್ತಾರೆ. ಮತ್ತು 1977 ಕ್ರಿಸ್‍ಮಸ್ ದಿನದಂದು ನಿಧನರಾಗುತ್ತಾರೆ.

LEAVE A REPLY

Please enter your comment!
Please enter your name here