ಪ್ರತಿಭಟನೆ ನಿಯಂತ್ರಣಕ್ಕೆ ಚಾಮರಾಜ ನಗರ ಲೇಡಿ DYSP ಮಾಡಿದ್ದೇನು ಗೊತ್ತಾ…?!

0
36

ಹಿಂದೂ ಜಾಗರಣಾ ವೇದಿಕೆ, ಮತಾಂತರ ವಿರೋಧಿ ಹೋರಾಟ ಸಮಿತಿ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ನಗರ ಮಂಡಲ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮತಾಂತರ ವಿರೋಧಿ ಜಾಗೃತಿ ಜಾಥಾವನ್ನು ನಿಯಂತ್ರಿಸಲು ಚಾಮರಾಜನಗರ ಡಿವೈಎಸ್‍ಪಿ ಅವರು ರಾಷ್ಟಗೀತೆಯನ್ನು ಹಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ಮಾರಿಗುಡಿ ದೇವಸ್ಥಾನದಲ್ಲಿ ಸೇರಿದ್ದ ನೂರಾರು ಜನ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಿಂದುಗಳ ಮೇಲೆ ನಡೆಯುತ್ತಿರುವ ಮತಾಂತರವನ್ನು ನಿಲ್ಲಿಸುವಂತೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ ಮೂಲಕ ಜಾಥಾ ಕೈಗೊಂಡು ಶ್ರೀ ಭುವನೇಶ್ವರಿ ವೃತ್ತವನ್ನು ತಲುಪಿ ಅಲ್ಲಿ ಮಾನವ ಸರಪಳಿಯನ್ನು ರಚಿಸಿದ್ದರು ಮತಾಂತರೀಗಳ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ಅವರ ಆಕ್ರೋಶ ಹೊರ ಹಾಕಿದರು.


ಪ್ರತಿಭಟನೆಯ ನಂತರ ತಮ್ಮ ಜಾಥಾವನ್ನು ಮುಂದುವರೆಸಿದ ಪ್ರತಿಭಟನಾಕಾರರು ಬೈಕ್ ನಲ್ಲಿ ಮೈಕ್ ಕಟ್ಟಿಕೊಂಡು ಘೋಷಣೆ ಕೂಗುತ್ತಾ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಿಂದ ಹಿಂದೂಪರ ಘೋಷಣೆಯನ್ನು ಮೈಕ್‍ನಲ್ಲಿ ಕೂಗಿಕೊಂಡು ಜಿಲ್ಲಾಡಳಿತದ ಭವನ ತಲುಪಲು ಮುಂದಾದರು. ಈ ವೇಳೆಯಲ್ಲಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಮೈಕ್‍ನಲ್ಲಿ ಘೋಷಣೆ ಕೂಗುವುದರಿಂದ ಜಿಲ್ಲಾಡಳಿತದ ಕಾರ್ಯಗಳಿಗೆ ತೊಂದರೆಯಾಗುತ್ತದೆ ಅದಕ್ಕಾಗಿ ಶಾಂತ ರೀತಿಯಲ್ಲಿ ತೆರಳಿ ತಮ್ಮ ಮನವಿಯನ್ನು ನೀಡುವಂತೆ ಒತ್ತಾಯಿಸಿದರು. ಆದರೆ ಇದಕ್ಕೆ ವಿರೋದಿಸಿದ ಪ್ರತಿಭಟನಾಕಾರು ತಮ್ಮ ಮೈಕ್ ಕಟ್ಟಿದ್ದ ವಾಹನವನ್ನು ತಡೆಯುತ್ತಿದ್ದಂತೆ ಪೊಲೀಸರ ವಿರುದ್ಧ ಘೋಷಣೆ ಕೂಗುವುದರೊಂದಿಗೆ ತಮ್ಮ ಹಕ್ಕುಗಳಿಗೆ ಧಕ್ಕೆ ತರುತ್ತಿರುವುದಾಗಿ ಪ್ರತಿಭಟನೆಗೆ ಮುಂದಾದರು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಆರಂಭವಾಯಿತು.

ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಮಾತುಕತೆ ತೀವ್ರ ರೂಪವನ್ನು ಪಡೆದುಕೊಳ್ಳುತ್ತಿದೆ ಎಂಬ ಪರಿಸ್ಥಿತಿಯನ್ನು ಅರಿತ ಚಾಮರಾಜನಗರದ ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಪ್ರತಿಭಟನಾಕಾರರ ಬಳಿಯಿದ್ದ ಮೈಕನ್ನು ಕಿತ್ತುಕೊಂಡು ತಮ್ಮದೇ ಧ್ವನಿಯಲ್ಲಿ ರಾಷ್ರಗೀತೆಯನ್ನು ಹಾಡಲು ಆರಂಭಿಸಿದರು. ರಾಷ್ಟ್ರಗೀತೆಗೆ ಗೌರವ ನೀಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂಬುದನ್ನು ಅರಿತ ಪ್ರತಿಭಟನಾಕಾರರು ತಾವು ಕೂಗುತ್ತಿದ್ದ ಘೋಷಣೆಗಳು, ಕೂಗಾಟವನ್ನು ನಿಲ್ಲಿಸಿ ಸ್ವಲ್ಪ ಸಮಯದ ಕಾಲ ನಿಶಬ್ಧವಾಗಿದ್ದು ರಾಷ್ಟ್ರಗೀತೆ ಹಾಡುತ್ತಿದ್ದ ಡಿವೈಎಸ್‍ಪಿ ಪ್ರಿಯದರ್ಶಿನಿ ಅವರೊಂದಿಗೆ ರಾಷ್ಟ್ರಗೀತೆ ಹಾಡಿದರು.

ರಾಷ್ಟ್ರಗೀತೆ ಮುಗಿದ ನ0ತರ ಪರಿಸ್ಥಿತಿ ತಿಳಿಗೊಂಡು ಪ್ರತಿಭಟನಾಕಾರರು ಜಿಲ್ಲಾಡಳಿತ ಪ್ರವೇಶದ್ವಾರದ ಒಳಗೆ ಪ್ರವೇಶಿಸಿ ಜಿಲ್ಲಾಡಳಿದ ರಸ್ತೆಬದಿಯಲ್ಲಿಯೇ ಕೂತು ಮತಾಂತರಿಗಳು ಹಾಗೂ ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಕ್ರಮಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಪ್ರತಿಭಟನೆಯ ತೀವ್ರತೆಯನ್ನು ಕಡಿಮೆ ಮಾಡಲು ಚಾಮರಾಜನಗರ ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಕೈಗೊಂಡ ರಾಷ್ಟ್ರಗೀತೆ ಹಾಡುವ ಅಸ್ತ್ರ ಜಿಲ್ಲಾಡಳಿತದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದು ಕೆಲವರು ಅವರ ಚಾಕಚಕ್ಯತೆ ಹಾಗೂ ಮುಂದಾಲೋಚಿಕ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here