ಮತ್ತೆ `ಶಿಕ್ಷಕರ ವರ್ಗಾವಣೆ’ ಪ್ರಕಿಯೆ ಪ್ರಾರಂಭಿಸಲು ಕಾರಣ ಏನು ಗೊತ್ತಾ..?

0
163

ಹಲವಾರು ಕಾರಣಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಹಿಂದೆ ಶಿಕ್ಷಣ ಇಲಾಖೆ ವರ್ಗಾವಣೆ ವಿಚಾರ ಕುರಿತು ಧ್ವನಿ ಏರಿಸಿತ್ತು. ಜೊತೆಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹಲವು ನ್ಯೂನತೆಗಳನ್ನು ಗಮನಿಸಿ ಸಿಎಂ ಯಡಿಯೂರಪ್ಪನವರ ಗಮನಕ್ಕೆ ತಂದಿದ್ದ ಪರಿಣಾಮ, ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಶಿಕ್ಷಕರ ವರ್ಗಾವಣೆ ಕುರಿತು ಮತ್ತೆ ಪ್ರಕ್ರಿಯೆ ಆರಂಭಿಸಲು ಸಿಎಂ ಬಳಿ ಪ್ರಸ್ತಾಪಿಸಿದಾಗ ಪುನಃ ಪ್ರಾರಂಭಿಸಲು ಅವಕಾಶ ಕಲ್ಪಿಸಿ ಕೊಟ್ಟದ್ದರು ಎನ್ನಲಾಗಿತು. ಆದರೆ ಉತ್ತರ ಕರ್ನಾಟಕದಲ್ಲಿ ಉಂಟಾದ ಭಾರಿ ಪ್ರವಾಹದಿಂದ ಸಿಎಂ ಯಡಿಯೂರಪ್ಪನವರ ಭೇಟಿ ಮೂಂದಡಲಾಗಿತ್ತು.

ಪ್ರಾಥಮಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ.ಪಿ.ಮಾದೇಗೌಡ ಅವರು ಮಾಧ್ಯಮಕ್ಕೆ ತಿಳಿಸಿದ ಹಾಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಭೆಯಲ್ಲಿ ಮತ್ತೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕಾಗಿದೆ ಎಂಬ ವಿಚಾರವನ್ನು ಪ್ರಸ್ತಾಪನೆ ಮಾಡಿದೆವು. ಆ ಬಳಿಕ ಯಡಿಯೂರಪ್ಪನವರು ಇದಕ್ಕೆ ಒಪ್ಪಿಗೆ ಸೂಚಿಸದ್ದಾರೆ. ಹಾಗಾಗಿ ಶುಕ್ರವಾರದಿಂದ ವರ್ಗಾವಣೆ ಪ್ರಕಿಯೆ ಎಲ್ಲಡೆ ಪ್ರಾರಂಭಗೊಂಡಿದೆ. ವೇಳಾಪಟ್ಟಿಯ ಕ್ರಮದಂತೆ ಕೌನ್ಸ್‍ಲಿಂಗ್ ಪ್ರಕ್ರಿಯೆ ಕೂಡ ನಡೆಯಲಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here