ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ತಂದೆ ಮಾಡಿದ್ದೇನು ಗೊತ್ತಾ ?

0
139

ಅಪಘಾತಗಳು ಮಾನವನ ಅನುಭವದ ಒಂದು ಸಾಮಾನ್ಯ ಲಕ್ಷಣವಾಗಿದೆ ಮತ್ತು ಪ್ರತಿವರ್ಷ ವಿಶ್ವಾದ್ಯಂತ ಹೆಚ್ಚಿನ ಸಂಖ್ಯೆಯ ಜನರಿಗೆ ಗಾಯ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ. ಅನೇಕ ಅಪಘಾತಗಳಿಂದ ತಮ್ಮ ಆಸ್ತಿಪಾಸ್ತಿಗೆ ಹಾನಿ ಅಥವಾ ನಷ್ಟವನ್ನು ಸಹ ಒಳಗೊಂಡಿರುತ್ತವೆ.

 

 

ಮನೆಯಲ್ಲಿ, ಆಸ್ಪತ್ರೆಯಲ್ಲಿ, ಕ್ರೀಡಾ ಮೈದಾನದಲ್ಲಿ ಅಥವಾ ಕೆಲಸದ ಸ್ಥಳ ಸೇರಿದಂತೆ ಎಲ್ಲಿಯಾದರೂ ಅಪಘಾತಗಳು ಸಂಭವಿಸಬಹುದು. ವಿಶ್ವಾದ್ಯಂತ, ಮೋಟಾರು ವಾಹನ ಅಪಘಾತಗಳು ಸಾವಿಗೆ ಪ್ರಮುಖ ಕಾರಣವಾಗಿದ್ದು, ವಾಹನ ಸುರಕ್ಷತೆಯ ಸುಧಾರಣೆಯ ಹೊರತಾಗಿಯೂ , ಮೋಟಾರು ವಾಹನಗಳ ಮಾಲೀಕತ್ವವನ್ನು ಹೆಚ್ಚಿಸುವುದರಿಂದ 2030 ರ ವೇಳೆಗೆ ಟ್ರಾಫಿಕ್ ಅಪಘಾತಗಳಿಂದ ಸಾವುಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ ಎಂದು ಪ್ರಕ್ಷೇಪಗಳು ಸೂಚಿಸಿವೆ. ಟ್ರಾಫಿಕ್ ಅಪಘಾತಗಳ ಕಾರಣಗಳ ಉದಾಹರಣೆಗಳೆಂದರೆ ವೇಗ, ಕುಡಿದು ವಾಹನ ಚಲಾಯಿಸುವುದು, ವಿಚಲಿತರಾದ ಚಾಲನೆ ಮತ್ತು ಅನಾನುಭವಿ ಚಾಲನೆ.

 

 

ಕೆಲವೊಮ್ಮೆ ಎಲ್ಲ ಸರಿಯಾಗಿದ್ದರೂ ನಮ್ಮ ಹಣೆಬರಹ ಸರಿಯಾಗಿರುವುದಿಲ್ಲ, ಎಷ್ಟೇ ಮುನ್ನೆಚ್ಚರಿಕೆ ವಹಿಸಿ ವಾಹನ ಚಲಾಯಿಸಿದರೂ ಮೃತ್ಯು ನಮ್ಮ ಬೆನ್ನತ್ತಿದ್ದರೆ ಸಾವು ಖಚಿತ ! ಈಗಿನ ಯುವ ಪೀಳಿಗೆಗಳು ಸರ್ಕಾರ ಎಷ್ಟೇ ಮುಂಜಾಗೃತಿಗೋಸ್ಕರ ಹೆಲ್ಮೆಟ್ ಧರಿಸಿ ಎಂದರು ಲೆಕ್ಕಿಸದೇ ವಾಹನ ಚಲಾಯಿಸಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.

 

 

ಇದೇ ರೀತಿ ಭೂಪಾಲ್ ನಲ್ಲಿ 25 ವರ್ಷದ ಲಕ್ಕಿ ದೀಕ್ಷಿತ್ ಎಂಬುವನು ನವೆಂಬರ್ 20ರಂದು ಅಪಘಾತಕ್ಕೊಳಗಾಗಿದ್ದು, ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಪರಿಣಾಮ ಅಪಘಾತದಿಂದ ಲಕ್ಕಿ ತಲೆಗೆ ಗಂಭೀರವಾಗಿ ಗಾಯಗೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಲಕ್ಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗನ ಸಾವಿನಿಂದ ಮನನೊಂದು ಅವರ ತಂದೆ ಮಧ್ಯಪ್ರದೇಶದ ದಾಮೋಹದಲ್ಲಿ ಯುವಕರಿಗೆ ಹೆಲ್ಮೆಟ್ ವಿತರಿಸಿ ರಸ್ತೆ ಜಾಗೃತಿ ಮೂಡಿಸುತ್ತಿದ್ದಾರೆ!

 

 

ಇದರ ಬಗ್ಗೆ ಮಾತನಾಡಿರುವ ತಂದೆ ಮಹೇಂದ್ರ ದೀಕ್ಷಿತ್, ನನ್ನ ಹಾಗೆ ಬೇರೆ ಪೋಷಕರು ತನ್ನ ಮಕ್ಕಳನ್ನು ಕಳೆದುಕೊಂಡು ದುಃಖ ಅನುಭವಿಸುವುದು ಇಷ್ಟವಿಲ್ಲ. ನನ್ನ ಮಗ ಹೆಲ್ಮೆಟ್ ಧರಿಸದ ಕಾರಣ ಅಪಘಾತದಲ್ಲಿ ಮೃತಪಟ್ಟಿದ್ದನು. ಅಪಘಾತದಲ್ಲಿ ಆತನಿಗೆ ಗಂಭೀರ ಗಾಯಗಳಾಗಿತ್ತು. ಹಾಗಾಗಿ ನಾನು 18 ವರ್ಷ ಮೇಲ್ಪಟ್ಟ ಯುವಕರಿಗೆ ಹೆಲ್ಮೆಟ್ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇನೆ. ನಮ್ಮ ರಕ್ಷಣೆಗಾಗಿ ನಾವು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂದು ಎಲ್ಲರಿಗೂ ಸಲಹೆ ನೀಡಿದ್ದಾರೆ. ಜೊತೆಗೆ ಹೆಲ್ಮೆಟ್ ಇಲ್ಲದೆ ನಿಮ್ಮ ಮಕ್ಕಳನ್ನು ಹೊರಗೆ ಕಳುಹಿಸಬೇಡಿ ಎಂದು ನಾನು ಎಲ್ಲಾ ತಂದೆ-ತಾಯಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here