ಮಂಗಳಮುಖಿಯರು ಕೂಡ ಮದುವೆಯಾಗುತ್ತಾರೆ..! ಯಾರನ್ನ ಗೊತ್ತಾ?

0
362

ಮಂಗಳಮುಖಿ ಎಂದರೆ ಗಂಡು ಅಲ್ಲದ ಹೆಣ್ಣು ಅಲ್ಲದ ಒಂದು ವ್ಯಕ್ತಿಯ ಮನಸ್ಥಿತಿ.! ತೃತಿಯಲಿಂಗ ಎಂದೇ ಹೇಳಲಾಗುತ್ತದೆ. ಮಂಗಳಮುಖಿ ಎನ್ನುವ ಪರಿಭಾಷೆಗಳು ಇತ್ತೀಚಿಗೆ
ಅಧಿಕೃತವಾಗಿ ಹೆಚ್ಚಾಗಿ ಬಳಕೆಯಾಗುತ್ತಿವೆ. ಈ ಮಂಗಳಮುಖಿ ಪದ ಬರುವ ಮುಂಚೆ ಅವರನ್ನು ನಪುಂಸಕ, ಚಕ್ಕ, ಹಿಜ್ರಾ, ಕೋಜಾ, ದ್ವಿಲಿಂಗ, ಶಿಖಂಡಿ ಹೀಗೆ ಮುಂತಾದ ಪದಗಳನ್ನು ಬಳಸಿ ಅವರನ್ನು ಕರೆಯಲಾಗುತ್ತಿತ್ತು.

ಇನ್ನು ಮಂಗಳಮುಖಿಯರು ಹುಟ್ಟಿದಾಗ ಪುರುಷ ಎಂದೇ ಗುರುತಿಸಿಕೊಳ್ಳುತ್ತಾರೆ ಮತ್ತು ದೈಹಿಕ ಸ್ವರೂಪ ಕೂಡ ಹಾಗೆ ಇರುತ್ತದೆ. ಆದರೆ ಅಂದಾಜು ಹದಿಮೂರರ ಹರೆಯದ ನಂತರ ಭಾವನೆಗಳಲ್ಲಿ ಆರಂಭವಾಗಿ ಬಿಡುತ್ತದೆ. ನಂತರ ಶಾಲೆಯಲ್ಲಿ ಬಾಲಕ ಸಹಪಾಠಿಯತ್ತ ಲೈಂಗಿಕ ಆಕರ್ಷಣೆಗೆ ಒಳಗಾಗಬಹುದು, ಶಾಲಾ ವಾರ್ಷಿಕೋತ್ಸವದ ನಾಟಕದಲ್ಲಿ ಸ್ತ್ರೀ ಪಾತ್ರವೇ ಬೇಕು ಎಂದು ರಚ್ಷೆ ಹಿಡಿಯಬಹುದು, ತನ್ನಲೇಕೆ ಇಂಥ ಭಾವನೆಗಳು ಬರುತ್ತವೆ ? ಇತರ ಬಾಲಕರಲ್ಲಿ ಕೂಡ ಇಂತಹದ್ದೇ ಸ್ವಭಾವ ಇದೆಯಾ ಎಂದು ಹುಡುಕುತ್ತಾರೆ. ನಂತರ ಇಪ್ಪತ್ತರ ಹೊತ್ತಿಗೆ ತಾನು ದೈಹಿಕವಾಗಿ ಪುರುಷನಾಗಿದ್ದರೂ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಹೆಣ್ಣು ಎಂಬುದು ಖಚಿತವಾಗಿ ಬಿಡುತ್ತದೆ.

 

ತಮಗೆಲ್ಲರಿಗೂ ತಿಳಿದಿರುವ ಹಾಗೆ ವಿವಾಹ ಎಂಬುದು ಪ್ರತಿಯೊಬ್ಬ ಜೀವಿಯ ಅತಿ ಮುಖ್ಯವಾಧ ಘಟ್ಟ. ಆದರೆ ಮಂಗಳಮುಖಿಯರ ಜೀವನದಲ್ಲಿ ವಿವಾಹ ಎಂಬುದು ತೀರದ ಕೋರಿಕೆ ಎಂದೇ ಹಲವರು ತಿಳಿದು ಕೊಂಡಿರುತ್ತಾರೆ. ಆದರೆ ಅವರಿಗೂ ಕೂಡ ವಿವಾಹವಾಗುತ್ತದೆ. ನಮ್ಮ ಈ ಕೆಟ್ಟ ಸಾಮಾಜ ಅವರನ್ನು ಬೇರೆ ದೃಷ್ಠಿಕೋನದಿಂದ ನೋಡುತ್ತಿರುತ್ತಾರೆ, ಅವಮಾನಿಸುತ್ತಿರುತ್ತಾರೆ. ಅವರಿಗೆ ಬೇಜರಾಗುವ ಪದಗಳನ್ನು ಬಳಸಿ ಹಿಯಾಳಿಸುತ್ತಿರುತ್ತಾರೆ..

ವರ್ಷದ 365 ದಿನಗಳ ಕಾಲ ಅವಮಾನಗಳನ್ನು ಅನುಭವಿಸುವ ಇವರು, ವರ್ಷದ 18 ದಿನಗಳು ಮಾತ್ರ ಬಹಳ ಖುಷಿಯಾಗಿರುತ್ತಾರೆ. ಆ 18 ದಿನಗಳಲ್ಲೂ 3 ದಿನಗಳು ಇವರಿಗೆ ಬಹಳ ಮುಖ್ಯ, ಆ ಮೂರು ದಿನಗಳಲ್ಲಿ ಅವರಿಗೆ ತುಂಬಾ ಶ್ರೇಷ್ಠ ಮತ್ತು ಮುಖ್ಯ ಯಾಕೆಂದರೆ ಆ ಮೂರು ದಿನಗಳಲ್ಲಿ ಅವರಿಗೆ ಇಷ್ಟವಾದ ದೇವರನ್ನು ವಿವಾಹವಾಗಿ ಬಹಳ ಸಂತಸದಿಂದಿರುತ್ತಾರೆ.

 

ತಮಿಳುನಾಡು ರಾಜ್ಯದ ವಿಲ್ಲುಪುರಂ ಜಿಲ್ಲೆಯಲ್ಲಿಯ ಉಲಂದೂರು ಪೇಟೆ ತಾಲೂಕಿನ ಕೂವಗಂ ಗ್ರಾಮದ ಕೋತಂಡವರ್ ದೇವಾಲಯ ಇದೆ. ಈ ದೇವರು ಮಂಗಳಮುಖಿಯರ ಆರಾಧ್ಯ ದೇವರು ಮತ್ತು ಇದು ಅವರಿಗೆ ಪವಿತ್ರವಾದ ಸ್ಥಳ. ಏಪ್ರೀಲ್ ಮತ್ತು ಮೇ ಚೈತ್ರ ಮಾಸದಲ್ಲಿ ಬರುವ ಈ ಉತ್ಸವ ನಡೆಯುತ್ತದೆ. ಈ ಉತ್ಸವಕ್ಕೆ ಬಹಳಷ್ಟು ಜನ ಮಂಗಳಮುಖಿಯರು ಬರುತ್ತಾರೆ, ನಂತರ ದೇವರ ಸನ್ನಿದಾನದಲ್ಲಿ, ಕೋತವಂಡರ್ ದೇವರ ಎದುರು, ಪೋರೊಹಿತರ ಕೈಯಲ್ಲಿ ತಾಳಿಯನ್ನು ಕಟ್ಟಿಸಿಕೊಂಡು, ದೇವರನ್ನೇ ಮದುವೆಯಾದೆ ಎಂದು ಸಂಭ್ರಮಿಸುತ್ತಾರೆ. ಹೀಗೆ ಮದುವೆ ಮಾಡಿಕೊಂಡರೆ ಕೋತವಂಡರ್ ದೇವರು ಸಾಯುತ್ತಾರೆ. ಮರುದಿನ ಮಂಗಳಮುಖಿರು ಅಳುತ್ತಾ ಬಳೆಗಳನ್ನು ಹೊಡೆದುಕೊಂಡು ಹೊಳೆಯಲ್ಲಿ ಸ್ನಾನ ಮಾಡುತ್ತಾರೆ.

 

ಇಲ್ಲಿ ನಡೆಯುವ ಉತ್ಸವಕ್ಕೆ 60 ದಿನಗಳ ಮುಂಚೇನೆ ಅವರಿಗೆ ಬೇಕಾದ ಬಟ್ಟೆಗಳು ಮತ್ತು ಅಲಂಕಾರ ವಸ್ತುಗಳನ್ನು ತೆಗೆದುಕೊಂಡಿರುತ್ತಾರೆ. ಇನ್ನು ಈ ಉತ್ಸವ ಪ್ರಾರಂಭವಾಗುವ 7 ದಿನಗಳ ಮುಂಚೇನೆ, ಎಲ್ಲಾ ಮಂಗಳಮುಖಿಯರು ವಿಲ್ಲುಪುರಂಗೆ ಬಂದು ತಂಗಿರುತ್ತಾರೆ. ನಂತರ ಅಲ್ಲಿ ನಡೆಯುವ ಬ್ಯೂಟಿ ಕಾಂಪಿಟೇಷನ್ ಮತ್ತು ಡ್ಯಾನ್ಸ್ ಕಾಂಪಿಟೇಷನ್ ಅಲ್ಲಿ ಭಾಗವಹಿಸಿ, 18 ದಿನಗಳು ನಡೆಯುವ ಈ ಉತ್ಸವದಲ್ಲಿ ಅಂದವಾಗಿ ರೆಡಿಯಾಗಿ ಬೀದಿ ಬೀದಿ ಸುತ್ತುತ್ತಾರೆ.

 

17 ದಿನದ ಉತ್ಸವದಲ್ಲಿ ಮದುವೆ ಹೆಣ್ಣಿನಂತೆ ತಯಾರಾಗಿ ಕೋತಂಡವರ್ ದೇವಾಲಕ್ಕೆ ತೆರಳಿ, ಪುರೋಹಿತನ ಕೈಯಲ್ಲಿ ತಾಳಿ ಕಟ್ಟಿಸಿಕೊಂಡು, ದೇವಾಲಯದಲ್ಲಿರುವ ಐರಾವತನನ್ನು ಮದುವೆಯಾಗಿದ್ದೇವೆ ಎಂದು ಸಂಭ್ರಮ ಆಚರಣೆ ಮಾಡುತ್ತಾರೆ. ನಂತರ ಆ ರಾತ್ರಿ ಪೂರ ದೇವಲಯದ ಮುಂದೆ ನೃತ್ಯವನ್ನು ಮಾಡುತ್ತಾ ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಾರೆ. ಇದಾದ ಮರುದಿನ ತನ್ನ ಪತಿ ಐರಾವತ ತೀರೋದ ಎಂದು ಕುಂಕುಮ ಅಳೆಸಿ, ಮಾಂಗಲ್ಯ ಬಳೆಗಳನ್ನು ತೆಗೆದು ರೋದಿಸಿ, ತಮ್ಮ ತಮ್ಮ ಊರಿಗೆ ಹೋಗಿ ಸೇರಿಬಿಡುತ್ತಾರೆ.

ಮಂಗಳಮುಖಿಯವರ ಈ ಉತ್ಸವದ ಆಚಾರಣೆಯನ್ನು ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.

LEAVE A REPLY

Please enter your comment!
Please enter your name here