ಟೈಗರ್ ಪ್ರಭಾಕರ್ ಅವರ ಮೂವರು ಹೆಂಡತಿಯರು ಯಾರು ಗೊತ್ತಾ.??

0
676

30 ಮಾರ್ಚ್ 1947 ರಂದು ಜನಿಸಿದ ಟೈಗರ್ ಪ್ರಭಾಕರ್ ಅವರು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ ಹೆಸರುವಾಸಿಯಾಗಿದ್ದಾರೆ. ಇದರ ಜೊತೆಗೆ ಕೆಲವು ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಟೈಗರ್ ಎಂಬ ಪದಕ್ಕೆ ಅರ್ಥವನ್ನು ನೀಡಿದ್ದಾರೆ. ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿಯೇ ಹೆಸರುವಾಸಿಯಾಗಿರುವ ಅವರು, ಸಣ್ಣ ಬಜೆಟ್ ಚಲನಚಿತ್ರಗಳಲ್ಲಿ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸಿದರು.

 

 

ಮಾನ್ಯತೆ ಪಡೆದ ನಂತರ ಅವರು ತಮಿಳು, ತೆಲುಗು, ಹಿಂದಿ, ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿ ಸಾಕಷ್ಟು ಹೆಸರನ್ನು ಗಳಿಸಿಕೊಂಡರು.. ಸುಮಾರು 450 ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಭಾಕರ್, ಚಿರಂಜೀವಿ ಅವರ ಅನೇಕ ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿನ ಅವರ ಸಹಜ ನಟನೆ ಅವರಿಗೆ “ಕನ್ನಡದಲ್ಲಿ ಪ್ರಭಾಕರ್” ಎಂಬ ಹೆಸರನ್ನು ತಂದುಕೊಟ್ಟಿತು.

 

 

ಕನ್ನಡ ಸಿನಿರಸಿಕರಂತೂ ಟೈಗರ್ ಪ್ರಭಾಕರ್ ಅವರ ಗತ್ತು, ಸ್ಟೈಲ್, ಡೈಲಾಗ್ ಮತ್ತು ಫೈಟಿಂಗ್ ಗಳನ್ನು ಇಂದಿಗೂ ಮರೆತಿಲ್ಲ. ಯಾವ ಫ್ಯಾಮಿಲಿ background ಇಲ್ಲದೆ ಸ್ವಂತ ಪರಿಶ್ರಮದಿಂದಲೇ ಮೇಲೆ ಬಂದವರು ಟೈಗರ್ ಪ್ರಭಾಕರ್.. ತಾನೂ ಹದಿನಾಲ್ಕು ವರುಷದವನಾಗಿದ್ದಾಗಲೇ ಇಬ್ಬರು ಬಾಕ್ಸರ್ ಗಳಿಗೆ ಮಣ್ಣು ಮುಕ್ಕಿಸಿ ಚಿತ್ರರಂಗಕ್ಕೆ ಸ್ಟಂಟ್ ಮ್ಯಾನ್ ಆಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಸ್ಟಂಟ್ ಸೀನ್ ಗಳನ್ನು ನಿರ್ದೇಶಿಸುತ್ತಿದ್ದರು..ತದನಂತರ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಭಾಕರ್ ಅವರ ನೂರನೇ ಚಿತ್ರ ಮುತ್ತೈದೆ ಬಾಗ್ಯ ಸಿನಿಮಾದಲ್ಲಿ ಪರಿಪೂರ್ಣ ನಾಯಕರಾದರು.

 

 

ಪ್ರಭಾಕರ್ ಅವರ ವೈವಾಹಿಕ ಜೀವನ ನೋಡುವುದಾದರೆ ಮೂರು ಬಾರಿ ವಿವಾಹವಾದರು.. ಮೊದಲು ವಿವಾಗವಾಗಿದ್ದು ಮೇರಿ ಅವರನ್ನು.. ಈ ಜೋಡಿಗಳು ಭಾರತಿ, ಗೀತಾ ಮತ್ತು ವಿನೋದ್ ಪ್ರಭಾಕರ್ ಎಂಬ ಮೂರು ಮಕ್ಕಳಿಗೆ ಜನ್ಮ ನೀಡಿದರು. ಕಾಲನಂತರ ಯಾವುದೋ ಕಾರಣಕ್ಕೆ ವಿಚ್ಛೇದನವನ್ನು ಪಡೆದುಕೊಂಡು ತನ್ನ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ ಜಯಮಾಲಾ ಅವರನ್ನು ವಿವಾಹವಾಗುತ್ತಾರೆ. ಹೀಗೆ ವಿವಾಹವಾದ ಬಳಿಕ ಹಲವು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ಸುಖಕರವಾಗಿ ನಡೆಸುತ್ತಿರುತ್ತಾರೆ. ಈ ಜೋಡಿಗೆ ಸೌಂದರ್ಯ ಎಂಬ ಮುದ್ದಾದ ಮಗಳು ಕೂಡ ಜನಿಸುತ್ತಾರೆ. ಆದರೆ ಇವರಿಬ್ಬರ ಜೀವನದಲ್ಲೂ ವೈಮನಸ್ಸು ಉಂಟಾಗಿ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ.

 

 

ನಂತರ ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಖ್ಯಾತಿ ಪಡೆದಿದ್ದ ಟೈಗರ್ ಪ್ರಭಾಕರ್ ಅವರು ಮಲಯಾಳಂ ಚಿತ್ರಗಳ ಖ್ಯಾತ ನಾಯಕಿ ಅಂಜು ಅವರನ್ನು ಮೂರನೇ ವಿವಾಹವಾಗುತ್ತಾರೆ. ಈ ಜೋಡಿಗೆ ಅರ್ಜುನ್ ಎಂಬ ಮಗ ಜನಿಸುತ್ತಾನೆ..ಆದರೆ ವಿವಾಹಕ್ಕೂ ಪ್ರಭಾಕರ್ ಅವರಿಗೂ ಆಗಿ ಬರುವುದಿಲ್ಲ ಅನಿಸುತ್ತದೆ. ಅಂಜು ಅವರನ್ನು ವಿವಾಹವಾದ ಒಂದೇ ವರ್ಷದಲ್ಲಿ ವಿಚ್ಛೇದನವನ್ನು ಪಡೆದುಕೊಂಡು ಒಂಟಿ ಜೀವನ ನಡೆಸುತ್ತಿರುತ್ತಾರೆ.

 

ನಂತರ 1980 ರ ದಶಕದ ಮಧ್ಯಭಾಗದಲ್ಲಿ ಪ್ರಭಾಕರ್ ಬೈಕು ಅಪಘಾತಕ್ಕೀಡಾಗಿದ್ದರು, ಇದರಿಂದ ಉಂಟಾದ ಗಾಯಗಳು ಅವರ ಆರೋಗ್ಯಕ್ಕೆ ಧಕ್ಕೆ ತಂದವು. ಇದನ್ನು ಅನುಸರಿಸಿ, 2000ದ ದಶಕದ ಆರಂಭದಲ್ಲಿ, ಅವರು ಅನೇಕ ಅಂಗಗಳ ಅಪಸಾಮಾನ್ಯ ರೋಗಲಕ್ಷಣದಿಂದ ಬಳಲುತ್ತಿದ್ದರು . ಈ ಅನಾರೋಗ್ಯದ ಕಾರಣ, ಅವರು ಮಾರ್ಚ್ 25, 2001 ರಂದು ರಾತ್ರಿ 9: 45 ಕ್ಕೆ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ನಿಧನರಾಗುತ್ತಾರೆ.

 

 

ಚಲನಚಿತ್ರ ಕಂಡಲ್ಲಿ ಸ್ವಾರ್ಥಿ ಮತ್ತು ಹೃದಯವಂತ ಎಂದರೆ ಟೈಗರ್ ಪ್ರಭಾಕರ್ ..ಅವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬುದು ದುಃಖಕರ ಸಂಗತಿ..

LEAVE A REPLY

Please enter your comment!
Please enter your name here