ಬೇರೊಬ್ಬರ ಪತಿಯನ್ನು ವಿವಾಹವಾದ ಜಯಪ್ರದ ಅವರ ಸ್ಥಿತಿ ಹೇಗಿದೆ ಗೊತ್ತಾ?

0
894

ಒಂದು ಕಾಲದಲ್ಲಿ ಇಡೀ ಭಾರತದ ಕ್ರಶ್ ಆಗಿದ್ದವರು ನಟಿ ಜಯಪ್ರದ. ಮೂಲತಃ ಆಂದ್ರಪ್ರದೇಶದ ತೆಲುಗು ಕುಟುಂಬದವರಾದ ಅವರು ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ, ಮರಾಠಿ, ಬಂಗಾಳಿ, ಮಲೆಯಾಳಂ ಚಿತ್ರರಂಗದಲ್ಲಿ ಅಭಿನಯಿಸಿ ಚಲನಚಿತ್ರೋದ್ಯಮ ಕಂಡ ಸುಂದರ ನಟಿಮಣಿಯರಲ್ಲಿ ಇವರು ಕೂಡ ಒಬ್ಬಾರಾಗಿದ್ದಾರೆ.

 

 

1970 ರಿಂದ 90 ರ ದಶಕದ ವರೆಗೆ ಹಿಂದಿ ಮತ್ತು ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ನಟಿ ಜಯಪ್ರದ..ಯಾವುದೇ ನಿರ್ಮಾಪಕ ಮತ್ತು ನಿರ್ದೇಶಕರ ಮೊದಲ ಆಯ್ಕೆ ಜಯಪ್ರದಾ ಆಗಿತ್ತು ಯಾಕೆಂದರೆ ಹೊಂದಿಕೊಂಡು ಹೋಗುವಂತಹ ಗುಣ ಅವರಲ್ಲಿ ಎದ್ದು ಕಾಣುತ್ತಿತ್ತು.. 80 ರ ದಶಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬುವ ಹೆಗ್ಗಳಿಕೆಗೆ ಜಯಪ್ರದಾ ಪಾತ್ರರಾಗಿದ್ದವರು.

 

 

ಅದೇಕೋ ಏನೋ ಭಾರತ ಚಿತ್ರರಂಗದಲ್ಲಿ ದಶಕಗಳ ಕಾಲ ಆಳಿದ ನಟಿಯರ ವೈವಾಹಿಕ ಜೀವನ ಮಾತ್ರ ಸುಂದರವಾಗಿರುವುದಿಲ್ಲ. ತೆರೆಯ ಮೇಲೆ ಜನರನ್ನು ಮನರಂಜಿಸುವವರು, ತೆರೆಯ ಹಿಂದೆ ತಮ್ಮ ದಾಂಪತ್ಯ ಜೀವನದಿಂದ ಕಣ್ಣೀರಿಡುತ್ತಿರುತ್ತಾರೆ..ಅದೇ ರೀತಿ ವಿಜಯ್ ವೈವಾಹಿಕ ಜೀವನವು ಭಾರಿ ವಿವಾದವನ್ನು ಸೃಷ್ಟಿಸಿತ್ತು.

 

 

ಜಯಪ್ರದ ಹದಿಹರೆಯದವರಾಗಿದ್ದಾಗ, ತನ್ನ ಶಾಲೆಯ ವಾರ್ಷಿಕ ಸಮಾರಂಭದಲ್ಲಿ ನೃತ್ಯವನ್ನು ಪ್ರದರ್ಶಿಸಿದರು.. ನೃತ್ಯವನ್ನು ನೋಡಿದ ತೆಲುಗಿನ ನಿರ್ದೇಶಕರೊಬ್ಬರು ಮರುಳಾಗಿ ಚಿತ್ರದಲ್ಲಿ ಅವಕಾಶವನ್ನು ನೀಡಿದ್ದರು.. ಇದಾದ ಬಳಿಕ ಹಿಂತಿರುಗಿ ನೋಡದ ಅವರು ಯಶಸ್ಸಿನ ಮೇಲೆ ಯಶಸ್ಸನ್ನು ಪಡೆದುಕೊಂಡು ಪ್ರಶಸ್ತಿಗಳ ಸರಮಾಲೆಯನ್ನೇ ಮುಡಿಗೇರಿಸಿಕೊಂಡರು. ತೆಲುಗು ಸೇರಿದಂತೆ ಸಪ್ತ ಭಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

 

 

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕಾರಣದಿಂದ ಇನ್ಕಮ್ ಟ್ಯಾಕ್ಸ್ ವಿಚಾರಕ್ಕೆ ಸಿಲುಕಿದರು. ಇದರಿಂದ ಹೇಗೆ ಪಾರಾಗುವುದು ಎಂದು ಯೋಚಿಸುತ್ತಿದ್ದ ಅವರಿಗೆ ನಿರ್ದೇಶಕ ಶ್ರೀಕಾಂತ್ ಅವರು ಪರಿಚಯವಾಗುತ್ತಾರೆ. ದಿನಗಳು ಉರುಳಿದಂತೆ ಜಯಪ್ರದ ಮತ್ತು ಶ್ರೀಕಾಂತ್ ಅವರು ಆತ್ಮೀಯ ಸ್ನೇಹಿತರಾಗುತ್ತಾರೆ, ನಂತರ ಸ್ನೇಹ ಪ್ರೇಮವಾಗಿ ತಿರುಗುತ್ತದೆ.

 

 

ವಿಪರ್ಯಾಸವೇನೆಂದರೆ ಶ್ರೀಕಾಂತ್ ಅವರಿಗೆ ಅದಾಗಲೇ ವಿವಾಹವಾಗಿ ಮೂವರು ಮಕ್ಕಳಿದ್ದರು. ಆದರೆ ಇದ್ಯಾವುದನ್ನು ಲೆಕ್ಕಿಸದ ನಟಿ ಜಯಪ್ರದಾ ಶ್ರೀಕಾಂತ್ ಅವರನ್ನು ಗಾಢವಾಗಿ ಪ್ರೇಮಿಸಲು ಮುಂದಾಗುತ್ತಾರೆ. ಈ ವಿಚಾರ ಭಾರತಾದ್ಯಂತ ದೊಡ್ಡ ಸುದ್ದಿಯಾಗುತ್ತದೆ. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಜಯಪ್ರದಾ ಅವರ ಬಗ್ಗೆ ಟೀಕೆಗಳು, ಅಸಮಾಧಾನಗಳು ವ್ಯಕ್ತವಾಗುತ್ತಿರುತ್ತವೆ. ಈ ಕಾರಣ 1985 ರಲ್ಲಿ ಏಕಾಏಕಿ ಶ್ರೀಕಾಂತ್ ಅವರನ್ನು ವಿವಾಹವಾಗಿ ಬಿಡುತ್ತಾರೆ.

 

 

ಜಯಪ್ರದಾ ಅವರೇನೊ ಶ್ರೀಕಾಂತ್ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ. ಆದರೆ ದೊಡ್ಡ ಸಮಸ್ಯೆಯೇನೆಂದರೆ ಶ್ರೀಕಾಂತ್ ತಮ್ಮ ಮೊದಲ ಪತ್ನಿಗೆ ಇನ್ನೂ ವಿಚ್ಛೇದನ ನೀಡಿರಲಿಲ್ಲ. ಈ ವಿಚಾರ ದೇಶಾದ್ಯಂತ ಜಯಪ್ರದಾ ಅವರ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡಿಕೊಳ್ಳಲು ಕಾರಣವಾಯಿತು ಮತ್ತು ಅವರ ವೈವಾಹಿಕ ಜೀವನದಲ್ಲಿ ಕಪ್ಪು ಮಚ್ಚೆಯಾಗಿ ಉಳಿದು ಬಿಟ್ಟಿತ್ತು. ಇದಾದ ಬಳಿಕ ಅವರಿಗೆ ಸಿನಿಮಾದಲ್ಲಿ ಅವಕಾಶವೂ ಕೂಡ ಬಹಳ ಕಡಿಮೆಯಾಯಿತು.

 

 

ಶ್ರೀಕಾಂತ್ ಅವರು ತಮ್ಮ ಮೊದಲ ಪತ್ನಿಗೆ ವಿಚ್ಛೇದನವನ್ನು ನೀಡದ ಕಾರಣ ಜಯಪ್ರದಾ ಅವರು ತಮ್ಮ ಪತಿಯ ಮನೆಗೆ ಹೋಗಿ ಸುಖಕರ ಜೀವನವನ್ನು ನಡೆಸಲು ಸಾಧ್ಯವಾಗಲಿಲ್ಲ.ಇತ್ತ ಶ್ರೀಕಾಂತ್ ವಿಚ್ಛೇದನ ನೀಡಲೇ ಇಲ್ಲ. ಹೀಗೆ ಪ್ರೇಮದಿಂದ ತೆಗೆದುಕೊಂಡ ಒಂದು ನಿರ್ಧಾರದಿಂದ ಜಯಪ್ರದಾ ಅವರ ಜೀವನವೇ ಅಲ್ಲೋಲ ಕಲ್ಲೋಲವಾಗಿ ಬಿಟ್ಟಿತು.

 

 

ಇನ್ನು ಜಯಪ್ರದಾ ಅವರಿಗೆ ಮಕ್ಕಳು ಕೂಡ ಜನಿಸಲಿಲ್ಲ. ಇತ್ತ ಸಿನಿಮಾ ಅವಕಾಶವಿಲ್ಲದೆ, ಪತಿಯ ಜೊತೆ ಜೀವನ ನಡೆಸಲು ಆಗದೆ, ಮಕ್ಕಳಿಗೆ ಜನ್ಮ ನೀಡಲು ಸಾಧ್ಯವಾಗದೆ, ಏಕಾಂಗಿ ಜೀವನವನ್ನು ನಡೆಸುತ್ತಿದ್ದ ಅವರು ಕೊನೆಗೆ ಕಾನೂನಿನ ತೊಡಕುಗಳಿಂದಾಗಿ ತಂಗಿಯ ಮಗನನ್ನು ದತ್ತು ಪಡೆದುಕೊಂಡು ಆತನನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಸಾಂಸಾರಿಕ ಜೀವನದಲ್ಲಿ ನೊಂದು ಬಂದಿರುವ ಜಯಪ್ರದಾ ಅವರು, ಇನ್ನು ಮುಂದೆಯಾದರೂ ಮಗನ ಜೊತೆ ನೆಮ್ಮದಿಯ ಜೀವನವನ್ನು ನಡೆಸಲಿ ಎಂದು ಶುಭ ಹಾರೈಸೋಣ.

LEAVE A REPLY

Please enter your comment!
Please enter your name here