ಸಾಮಾಜಿಕ ಜಾಲತಾಣಗಳು ಎಷ್ಟು ಮುಖ್ಯ ಮತ್ತು ಯಾವ ಮಟ್ಟಿಗೆ ಪಾತ್ರ ನಿರ್ವಹಿಸುತ್ತದೆ ಎಂಬುದು ಈ ಭಿಕ್ಷುಕಿಯಿಂದ ಸಾಬೀತಾಗಿದೆ !
ಹೌದು ಕೋಲ್ಕತ್ತಾದ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿ ರಾನು ಮಂಡಲ್ ಅವರ ಭವಿಷ್ಯ ಬದಲಾಗಿದೆ .. ರೈಲು ಚಲಿಸುವಾಗ ಬೆಂಚ್ ಮೇಲೆ ಕುಳಿತು ಲತಾ ಮಂಗೇಶ್ಕರ್ ಅವರ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ಹಾಡನ್ನು ಹಾಡುತ್ತಿರುವುದನ್ನು ಓರ್ವ ವ್ಯಕ್ತಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಲು ಬಿಟ್ಟಿದ್ದ .. ಈ ವಿಡಿಯೋ ದೇಶಾದ್ಯಂತ ಸಖತ್ ವೈರಲ್ ಆಗಿತ್ತು ..ಈ ವಿಡಿಯೋವನ್ನು ನೋಡಿದ ಗಾಯಕಿಯರು ಮತ್ತು ಸಿನಿಮಾ ರಂಗದವರು ಬೆರಗಾಗಿದ್ದರು..

ಸದ್ಯ ಹಿಮೇಶ್ ರೇಶಮಿಯಾರ ಮುಂದಿನ ಚಿತ್ರವಾದ ‘ಹ್ಯಾಪಿ ಹಾರ್ಡಿ ಅಂಡ್ ಹೀರೋ’ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. .
ಹಿಮೇಶ್ ರೇಶಮಿಯಾ ಅವರ ಮುಂದೆ ರಾನು ಹಾಡುತ್ತಿರುವ ವಿಡಿಯೋ 2 ದಿನಗಳ ಹಿಂದೆ ವೈರಲ್ ಆಗಿತ್ತು.. ವಿಡಿಯೋ ನೋಡಿದ ಪ್ರತಿಯೊಬ್ಬರು ರಾನು ಕಂಠಕ್ಕೆ ಮಾರು ಹೋಗಿದ್ದಾರೆ..
ಈಗ ರಾನು ಅವರು ಹಿಮೇಶ್ ರೇಶಮಿಯಾರ ಚಿತ್ರದ ಹಾಡಿಗೆ ಎಷ್ಟು ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ತಿಳಿದರೆ ನೀವು ಬಹಳ ಅಚ್ಚರಿ ಪಡುತ್ತೀರಿ ..

ರಾನು ಅವರಿಗೆ ಹಿಮೇಶ್ ಆರ ರಿಂದ ಏಳು ಲಕ್ಷ ರೂಪಾಯಿ ನೀಡಿದ್ದಾರಂತೆ. ಆದರೆ ರಾನು ಇದನ್ನು ಸ್ವೀಕರಿಸಲು ನಿರಾಕರಿಸಿದ್ದಳಂತೆ. ಆದರೆ ರೇಶಮಿಯಾ ಒತ್ತಾಯ ಮಾಡಿ ಸಂಭಾವನೆ ನೀಡಿದ್ದಾರೆ ಎನ್ನಲಾಗುತ್ತಿದೆ. ನೀವು ಬಾಲಿವುಡ್ ನ ಸೂಪರ್ ಸ್ಟಾರ್ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ರೇಶಮಿಯಾ ರಾನು ಅವರಿಗೆ ಹೇಳಿದ್ದಾರೆ