ಡಾ.ರಾಜ್ ಕುಮಾರ್ ರವರ ದಾಖಲೆಗಳು ನಿಮಗೆ ತಿಳಿದಿದೆಯಾ?

0
215

ಡಾ.ರಾಜ್ ಕುಮಾರ್, ಕನ್ನಡಿಗರು ಆರಾಧಿಸುವ ಆರಾಧ್ಯ ದೈವ, ಡಾ ರಾಜ್ ಎನ್ನುವ ಹೆಸರೇ ಒಂದು ತೂಕ, ಅಪ್ಪಾಜಿ ಕನ್ನಡಿಗರ ಭಾವನೆಯಲ್ಲಿ ಬೆರೆತು ಹೋಗಿದ್ದಾರೆ! ‘ಆಡು ಮುಟ್ಟದ ಸೊಪ್ಪಿಲ್ಲ, ಅಣ್ಣಾವ್ರು ಮಾಡದ ಅಭಿನಯವಿಲ್ಲ’! ಎಷ್ಟೋ ಕಲಾವಿದರು ಅಪ್ಪಾಜಿಯವರ ಮೂರ್ತಿ ಅಥವಾ ಚಿತ್ರಕ್ಕೆ ಕೈಮುಗಿದು ಬಣ್ಣವನ್ನು ಹಚ್ಚುತ್ತಾರೆ! ಸಹನೆ ಮತ್ತು ಸರಳತೆಗೆ ಇನ್ನೊಂದು ಹೆಸರೇ ಡಾ. ರಾಜಕುಮಾರ್!
ಕನ್ನಡ ಚಿತ್ರರಂಗಕ್ಕೆ ಅಪ್ಪಾಜಿಯವರು ನೀಡಿರುವ ಕೊಡುಗೆಗಳು ಅಪಾರ. ಕನ್ನಡಿಗರಿಗೆ ಡಾ. ರಾಜ್ ಎಂಬುದು ಬರೀ ಹೆಸರಲ್ಲ, ಅದೊಂದು ಹೇಳಲಾಗದ ಭಾವನೆ!

ಒಂದೊಮ್ಮೆ ನಾವು ಅಪ್ಪಾಜಿಯವರ ಸಿನಿ ಕೆರಿಯರ್, ಅನ್ನು ತಿರುಗಿ ನೋಡಿದರೆ ಇದೊಂದು ಅಭೂತಪೂರ್ವವಾದದ್ದು!
ಈಗಿನ ಯುವ ಪೀಳಿಗೆಗಳಿಗೆ ಅಪ್ಪಾಜಿಯವರ ಕೆಲವೊಂದು ಸಿನಿಮಾದ ದಾಖಲೆಗಳು ಗೊತ್ತಿರುವುದಿಲ್ಲ, ಅದನ್ನು ಪರಿಚಯ ಮಾಡಿಸುತ್ತೇವೆ..!

ಅಭಿನಯಕ್ಕಾಗಿಯೇ ಅಥವಾ ಕಲಾ ದೇವತೆಗೆ ಸೇವೆ ಸಲ್ಲಿಸುವುದಕ್ಕಾಗಿಯೇ ಒಬ್ಬರು ಬದುಕು ನಡೆಸುತ್ತಿದ್ದರು ಎಂದರೆ, ಅವರು ಡಾ. ರಾಜ್ ಕುಮಾರ್ ಮಾತ್ರ!

*ಬಂಗಾರದ ಮನುಷ್ಯ ಇದೊಂದು ಸಾರ್ವಕಾಲಿಕ ದಾಖಲೆ ! ಈ ಸಿನಿಮಾವು ಬರೋಬ್ಬರಿ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಅಪ್ಪಾಜಿಯವರ ವೃತ್ತಿ ಜೀವನದಲ್ಲಿ ಈ ಚಿತ್ರವೂ ಮೈಲಿಗಲ್ಲಾಗಿ ಉಳಿದಿದೆ!

*ಇನ್ನು ಭಾರತ ಚಿತ್ರರಂಗದಲ್ಲಿ, ಇನ್ನೂರಕ್ಕು ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಏಕೈಕ ನಟ ಎಂದರೆ ಡಾ ರಾಜ್ ಕುಮಾರ್ !

  • ಅಣ್ಣಾವ್ರ ಮುರಿಯಲಾರದ ದಾಖಲೆ ಎಂದರೆ, ಅಣ್ಣಾವ್ರು ಅಭಿನಯಿಸಿರುವ ಶೇ 90% ರಷ್ಟು ಚಿತ್ರಗಳು ಬಾಕ್ಸ್ ಆಫೀಸ್ ಹಿಟ್ ಆಗಿವೆ

*ಪ್ಲೇಬ್ಯಾಕ್ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಏಕೈಕ ಸೂಪರ್ ಸ್ಟಾರ್ ಎಂದರೆ ಅವರು ಅಪ್ಪಾಜಿ ಮಾತ್ರ!

*ನಟನೆಗಾಗಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ನಟ ಡಾ. ರಾಜ್!

*50 ವರ್ಷಗಳ ಕಾಲ ಒಂದೇ ಭಾಷೆಯಲ್ಲಿ ನಟಿಸಿದ ಏಕೈಕ ನಾಯಕ ನಟ ಎಂದರೆ ಅದು ಡಾ. ರಾಜ್ ಕುಮಾರ್ ರವರು ಮಾತ್ರ!

  • ವಿಶ್ವಾದ್ಯಂತ 5 ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ಸಂಘವನ್ನೂ ಹೊಂದಿರುವ ಏಕೈಕ ನಟ, ಅಪ್ಪಾಜಿ

*ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಪ್ರತಿಮೆಗಳನ್ನು ಹೊಂದಿರುವ ಏಕೈಕ ನಟ ಡಾ. ರಾಜ್ ಕುಮಾರ್ !

*ಸಿನಿಮಾ ಎಂಬುದು ಒಂದು ಜವಾಬ್ದಾರಿ ಎಂದು ಇಡೀ ಜಗತ್ತಿಗೆ ಡಾಕ್ಟರ ರಾಜ್ ಕುಮಾರ್ ಅವರು ತೋರಿಸಿದ್ದಾರೆ.. ಇದಕ್ಕೆ ಕಾರಣ ಅವರು ಅಭಿನಯಿಸಿದ್ದ ಎಲ್ಲ ಸಿನಿಮಾಗಳಿಗೂ(208) ಯು – ಸರ್ಟಿಫಿಕೇಟ್ ಪಡೆದಿದ್ದಾರೆ..

*USA ಯಾ, ಕೆಂಟುಕಿ ಯಿಂದ ಪ್ರಶಸ್ತಿ ಪಡೆದ ಮೊದಲ ಮತ್ತು ಏಕೈಕ ಭಾರತೀಯ ರಂಗಭೂಮಿ ವ್ಯಕ್ತಿ ಡಾ. ರಾಜ್ ಕುಮಾರ್ !

*ಇನ್ನು ಅಪ್ಪಾಜಿಯವರು 1964 ರಲ್ಲಿ 14 ಸಿನಿಮಾ ಹಾಗೂ 1968 ರಲ್ಲಿ ಹದಿನಾಲ್ಕು ಸಿನಿಮಾಗಳು ಬಿಡುಗಡೆಯಾಗಿದ್ದವು !
ಹೀಗೆ ವರ್ಷಕ್ಕೆ ಹದಿನಾಲ್ಕು ಸಿನಿಮಾದಲ್ಲಿ ಅಭಿನಯಿಸಿರುವ ಭಾರತ ಚಿತ್ರರಂಗದ ಏಕೈಕ ನಟ !

*ಇನ್ನು ಡಾ. ರಾಜ್ ಕುಮಾರ್ ಅವರು ಅಭಿನಯಿಸಿರುವ 208 ಚಿತ್ರಗಳಲ್ಲೂ ಎಂದಿಗೂ ಕುಡಿಯುವ ಮತ್ತು ಧೂಮಪಾನ ಮಾಡುವ ಪಾತ್ರವನ್ನು ನಿರ್ವಹಿಸಿಲ್ಲ !

*ಇನ್ನು ಪ್ರಪಂಚದಲ್ಲಿ ಅತಿ ಹೆಚ್ಚು ಪೌರಾಣಿಕ ಪಾತ್ರವನ್ನು ನಿರ್ವಹಿಸಿದ ಏಕೈಕ ನಟ, ಅಪ್ಪಾಜಿ

ಕಲಾ ರಸಿಕರೆ,ಇಂದಿನ ಪೀಳಿಗೆಯ ನಟರು ಕೃಷ್ಣದೇವರಾಯ ಮಯೂರ ಅಥವಾ ಬಬ್ರುವಾಹನ ನಂತಹ ಪಾತ್ರಗಳನ್ನು ನಿರ್ವಹಿಸಲು ಸಾಧ್ಯವೇ ?

ಕೆಲವು ಕಲಾವಿದರನ್ನು ಯಾರೂ ಹುಟ್ಟು ಹಾಕುವುದಿಲ್ಲ.. ಅವರು ಹುಟ್ಟುತ್ತಲೇ ಕಲಾವಿದರಾಗುತ್ತಾರೆ.. ಅವರೇ ನಮ್ಮ ನಟಸಾರ್ವಭೌಮ ಡಾ. ರಾಜ್ ಕುಮಾರ್

LEAVE A REPLY

Please enter your comment!
Please enter your name here