ಹೈಕೋರ್ಟ್‍ಗೆ ಡಿಕೆಶಿ ಸಲ್ಲಿಸಿದ್ದ `ಸಮನ್ಸ್ ರದ್ದು ಅರ್ಜಿ’ ವಜಾಗೊಳಿಸಲು ಪ್ರಮುಖ ಕಾರಣ ಏನು ಗೊತ್ತಾ.?

0
271

ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ಹೈಕೋರ್ಟ್‍ಗೆ ಸಮನ್ಸ್ ರದ್ದು ಕೋರಿ ಸಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಡಿಕೆಶಿಗೆ ತೊಂದರೆಯನ್ನು ಉಂಟುಮಾಡಿದೆ. ಈ ಹಿಂದೆ ದೆಹಲಿಯಲ್ಲಿ ಇದ್ದ ನಿವಾಸಗಳಲ್ಲಿ ಸಿಕ್ಕಿದ್ದ 8.50 ಕೋಟಿ ರೂಪಾಯಿ ಹಾಗೂ ನಗದು ಪತ್ತೆಯಾಗಿದ್ದ ಪ್ರಕರಣ ಕುರಿತು ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಅವರ ಜೊತೆ ಇದ್ದ ಕೆಲವರ ವಿರುದ್ದ ಇ.ಡಿ ಕೇಸ್ ದಾಖಲಿಸಿಕೊಂಡಿತ್ತು. ಈ ಪ್ರಕರಣ ಕುರಿತು ಡಿಕೆಶಿ ಹಾಗೂ ಸಚಿನ್ ನಾರಾಯಣ್ ಸೇರಿದಂತೆ ಇತರರು ಸಮನ್ಸ್ ಹಾಗೂ ಮೂಲ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ಮಹತ್ವದ ತೀರ್ಪಿನೊಂದಿಗೆ ಅರ್ಜಿ ವಜಾಗೊಳಿಸಿ ಡಿಕೆಶಿಗೆ ಶಾಕ್ ನೀಡಿದೆ.

ಶಾಸಕ ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಣ್ ಸೇರಿದಂತೆ ಇನ್ನು ಕೆಲವರು ಹೈಕೋರ್ಟ್‍ಗೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರಾದ ಅರವಿಂದ ಕುಮಾರ್ ಅವರು ಡಿಕ್ಟೇಷನ್ ಮೂಲಕ ತೀರ್ಪನ್ನು ನೀಡಿ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಮೂಲಕ ಆರೋಪಿಗಳು ಈಗ ಪ್ರಕರಣ ಕುರಿತು ನಡೆಯುವ ವಿಚಾರಣೆಗೆ ಹಾಜರಾಗಬೇಕಾಗಿದೆ. ಇದೊಂದು ದೊಡ್ಡ ಮಟ್ಟದ ಪ್ರಕರಣ, ಸಿಕ್ಕಿರುವ ಹಣಕ್ಕೆ ಯಾವುದೇ ರೀತೀಯ ಸೂಕ್ತ ದಾಖಲೆಗಳಿಲ್ಲ.

ದೆಹಲಿಯಲ್ಲಿ ಇರುವ ಅವರ ಆಪ್ತರ ಮನೆಗಳಲ್ಲಿ ಹೆಚ್ಚುವರಿ ಹಣ ಪತ್ತೆಯಾಗಿದೆ ಜೊತೆಗೆ ಇದರ ಬಗ್ಗೆ ಸ್ಪಷ್ಟ ವಿರಣೆಗಳು ಅವರ ಬಳಿ ಇಲ್ಲ. ಈ ಕುರಿತು ಇ.ಡಿ ಸಮನ್ಸ್ ಜಾರಿಗೊಳಿಸಿತ್ತು. ಅದರ ಪ್ರಕಾರ ಡಿಕೆಶಿ ಹಾಗೂ ಇನ್ನಿತರು ಸಲ್ಲಿಸದ್ದ ಸಮನ್ಸ್ ರದ್ದು ಅರ್ಜಿ ಇಂದು ವಜಾವಾಗಿದೆ.

LEAVE A REPLY

Please enter your comment!
Please enter your name here