ಹೆಣವನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗುವ ಹಿನ್ನೆಲೆ ಏನು ಗೊತ್ತೇ ?

0
370

ಸಾಮಾನ್ಯವಾಗಿ ವ್ಯಕ್ತ ಸಾವಿಗೀಡಾದರೆ ಮನೆಯಲ್ಲಿ ಎಲ್ಲರೂ ದುಃಖಿತರಾಗುತ್ತಾರೆ. ಅಲ್ಲದೇ ಮನೆಯ ಮುಂದೆ ಬೆಂಕಿಯನ್ನು ಸಹ ಹಚ್ಚಿ ತಮ್ಮ ಮನೆಯಲ್ಲಿ ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯನ್ನು ಎಲ್ಲರಿಗೂ ತಿಳಿಸುತ್ತಾರೆ. ಇದಾದ ಬಳಿಕ ವ್ಯಕ್ತಿಯ ಚಟ್ಟ ಕಟ್ಟುವ ಕಾರ್ಯ ಹಾಗೆ ಮೆರವಣಿಗೆ ಎಲ್ಲವೂ ನಡೆಯುತ್ತದೆ. ಹಾಗೆಯೇ ಸತ್ತ ವ್ಯಕ್ತಿಯ ಮೆರವಣಿಗೆ ಏಕೆ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಇಲ್ಲಿದೆ ಸಂಪೂರ್ಣ ಮಾಹಿತಿ.

 

 

ಜನರಿಗೆ ವ್ಯಕ್ತಿ ನಿಮ್ಮ ಮನೆಯವನೇ ಮಾತ್ರ ಅಲ್ಲ ಸಮಾಜಕ್ಕೂ ಸಹ ಸಂಬಂಧಿಸಿದವನು. ನೀನು ಬದುಕಿದಾಗಲೇ ಅಲ್ಲ ಸತ್ತ ಮೇಲೂ ನಿನಗೆ ಹತ್ತು ಜನ ಬೇಕು. ಇಲ್ಲದಿದ್ದರೆ ನಿನಗೆ ಮೆರವಣಿಗೆಯೇ ಇಲ್ಲ. ಅನಾಥ ಹೆಣದಂತೆ ಹೋಗಬೇಕಾಗುತ್ತದೆಯೆಂಬ ನಗ್ನ ಸತ್ಯದ ಕಾರಣಕ್ಕಾಗಿಯೇ ಮೆರವಣಿಗೆ ಮಾಡುತ್ತಾರೆ.

 

 

ಹೆಣವನ್ನು ಮೆರವಣಿಗೆ ಮಾಡುವಾಗ ಚಿಲ್ಲರೆ ನಾಣ್ಯಗಳನ್ನು ಚೆಲ್ಲುತ್ತಾ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ಸಂಪ್ರದಾಯವೂ ಕೆಲವರಲ್ಲಿದೆ . ಇದರ ಅರ್ಥವೇನೆಂದರೆ ‘ ಸುಡುಗಾಡಿಗೆ ಹೋಗುತ್ತಿರುವ ಈ ಹೆಣವು , ಜೀವವಿರುವಾಗ ದಾನ ಮಾಡದೇ ಧರ್ಮವೆನ್ನದೇ ತಾನು ತಿನ್ನದೆ ಹಣವನ್ನು ಕೂಡಿಟ್ಟಿದ್ದಾನೆ . ಕೂಡಿಟ್ಟ ಹಣದಲ್ಲಿ ಒಂದು ರೂಪಾಯಿಯನ್ನಾದರೂ ಜೊತೆಗೆ ತೆಗೆದುಕೊಂಡು ಹೋಗುತ್ತಿಲ್ಲ . ಅದಕ್ಕೇ ನಾವು ಇವನ ಹಣವನ್ನು ಬೀದಿಗೆ ಚೆಲ್ಲುತ್ತಿದ್ದೇವೆ , ನೋಡಿರಿ ಎಂಬ ಭಾವಪೂರ್ಣತೆ ಅಡಗಿದೆ .

 

 

ಇನ್ನೊಂದು ವಿಷಯವೇನೆಂದರೆ ಇಷ್ಟು ವರ್ಷಗಳು ನಮ್ಮೊಂದಿಗೆಯಿದ್ದು ಸುಖಭೋಗಗಳಲ್ಲಿ ಭಾಗಿಯಾಗಿದ್ದ ಮನುಷ್ಯ ಜೀವ ಕಳೆದುಕೊಂಡು ಹೆಣವಾಗಿ ಸ್ಮಶಾನಭೂಮಿಗೆ ಶಾಶ್ವತವಾಗಿ ಹೋಗುತ್ತಿದ್ದಾನೆಂದರೆ ಕೊನೆಯ ಬಾರಿ ಅವನನ್ನು ನೋಡುವುದು ಬೇಡವೇ?

 

 

ಈ ಕಾರಣದಿಂದಲೂ ಮೆರವಣಿಗೆ ಮಾಡಿ ಮಣ್ಣು ಮಾಡುತ್ತಾರೆ . ಈ ಬದುಕು ಮೂರು ದಿನಗಳ ಜಾತೆ , ಎಲ್ಲರೂ ಎಂದೋ ಒಂದು ದಿನ ಮಸಣಕ್ಕೆ ಸೇರಲೇಬೇಕು . ಸಾವಿನ ಅರ್ಥವನ್ನು ಎಲ್ಲರೂ ಗಮನಿಸಬೇಕೆಂದು ಹೆಣವನ್ನು ಮೆರವಣಿಗೆ ಮಾಡುತ್ತಾರೆ .

LEAVE A REPLY

Please enter your comment!
Please enter your name here