ಹಯಗ್ರೀವ ಮಾಡುವ ವಿಧಾನ ಹೇಗೆ ಗೊತ್ತಾ.?

0
316

ಹಯಗ್ರೀವ ಹೆಚ್ಚಾಗಿ ಕರ್ನಾಟಕದ ಉಡುಪಿ ಪ್ರದೇಶದಲ್ಲಿ ಮಾಡುವ ಸಿಹಿತಿಂಡಿ. ಹಬ್ಬ ಹರಿದಿನಗಳಲ್ಲಿ ಈ ಸಿಹಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡಲು ಮಾಡುತ್ತಾರೆ.

ಬೇಕಾಗುವ ಸಾಮಗ್ರಿಗಳು

 

 

ಕಡ್ಲೆ ಬೇಳೆ – 2 ಕಪ್‌‌‌
ತೆಂಗಿನ ತುರಿ – 1ಕಪ್‌
ಬೆಲ್ಲ – 1 ಕಪ್‌‌‌‌
ತುಪ್ಪ – 1 ಕಪ್‌‌‌
ಏಲಕ್ಕಿ ಪುಡಿ – 1/2 ಸ್ಪೂನ್

ಗಸಗಸೆ – 1/4 ಕಪ್‌‌
ಗೋಡಂಬಿ – 1/4 ಕಪ್‌‌‌
ಬಾದಾಮಿ – 1/4ಕಪ್‌‌‌
ಒಣದ್ರಾಕ್ಷಿ – 1/4 ಕಪ್‌‌‌

 

ತಯಾರಿಸುವ ವಿಧಾನ

1. ಮೊದಲು ಕಡ್ಲೆಬೇಳೆಯನ್ನು ಕುಕ್ಕರ್‌ನಲ್ಲಿ ಸೀಟಿ ಬರಿಸಿ ಮೃದುವಾಗಿ ಬೇಯಿಸಿಕೊಳ್ಳಿ.

2. ಅಷ್ಟರಲ್ಲಿ ಮತ್ತೊಂದು ಸ್ಟೌವ್‌‌‌‌‌‌ನಲ್ಲಿ ತುಪ್ಪ ಬಿಸಿ ಮಾಡಿಕೊಂಡು ಬಾದಾಮಿ, ದ್ರಾಕ್ಷಿ, ಗೋಡಂಬಿಯನ್ನು ಕಡಿಮೆ ಉರಿಯಲ್ಲಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ.

3. ಒಂದು ಪ್ಯಾನ್‌‌‌‌‌‌‌ಗೆ ಬೆಲ್ಲ , ಸ್ವಲ್ಪ ನೀರು ಸೇರಿಸಿ ಅದು ಕರಗಿದಾಗ ಶೋಧಿಸಿಕೊಳ್ಳಿ. ಬೆಲ್ಲದ ಪಾಕಕ್ಕೆ ಬೇಯಿಸಿಕೊಂಡ ಕಡ್ಲೆ ಬೇಳೆ ಹಾಕಿ 10 ನಿಮಿಷ ಬೇಯಿಸಿಕೊಳ್ಳಿ.

 

 

4. ನಂತರ ಉರಿದುಕೊಂಡ ಗಸಗಸೆ, ತೆಂಗಿನ ತುರಿ, ಬಾದಾಮಿ, ಗೋಡಂಬಿ, ದ್ರಾಕ್ಷಿ ಹಾಕಿ. ಬೇಕಿದ್ದರೆ ಮತ್ತಷ್ಟು ತುಪ್ಪ ಸೇರಿಸಬಹುದು.

5. ತಯಾರಾದ ಹಯಗ್ರೀವವನ್ನು ಸರ್ವಿಂಗ್ ಪ್ಲೇಟ್‌ಗೆ ಹಾಕಿ ಏಲಕ್ಕಿ ಪುಡಿ ಸೇರಿಸಿ ಮತ್ತಷ್ಟು ಡ್ರೈ ಫ್ರೂಟ್ಸ್ ಗಳಿಂದ ಅಲಂಕರಿಸಿ

LEAVE A REPLY

Please enter your comment!
Please enter your name here