ಫಿನಾಲೆಗೂ ಮೊದಲೆ ಪ್ರಿಯಾಂಕಾ ಮತ್ತು ಕಿಶನ್ ಜೋಡಿ ಗೆದ್ದಿದ್ದೆಷ್ಟು ಗೊತ್ತಾ ?

0
294

ಸದ್ಯ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಹತ್ತನೇ ವಾರವನ್ನು ಮುಗಿಸಿದ್ದು,ಈ ವಾರ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ ಅಂತಾನೇ ಹೇಳಬಹುದು. ಕಳೆದ ವಾರ ರಾಜು ತಾಳಿಕೋಟೆ ಅವರ ಎಲಿಮಿನೇಷನ್ನಿಂದ ಭಾವುಕರಾಗಿದ್ದ ಮನೆಯ ಸದಸ್ಯರು, ಲಕ್ಷುರಿ ಬಜೆಟ್ಗಾಗಿ ಬಿಗ್ ಬಾಸ್ ನೀಡಿದ ಜೋಡಿ ಟಾಸ್ಕ್ ನಿಂದ ಕೊಂಚ ರಿಲ್ಯಾಕ್ಸ್ ನಲ್ಲಿದ್ದಾರೆ. ವಿಶೇಷವೆನೆಂದರೆ ಫಿನಾಲೆಗೆ ಇನ್ನೂ ಮೂವತ್ತು ದಿನಗಳಿರುವ ಮುಂಚೆನೇ ಪ್ರಿಯಾಂಕಾ ಹಾಗೂ ಕಿಶನ್ ಜೋಡಿ, ಒಂದು ದೊಡ್ಡ ಮೊತ್ತವನ್ನು ಗೆದ್ದಿದ್ದಾರೆ. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಹೌದು ಈ ವಾರ ಲಗ್ಸುರಿ ಬಜೆಟ್ ಗಾಗಿ ಬಿಗ್ ಬಾಸ್, ಚಂದನ್ ಆಚಾರ್-ದೀಪಿಕಾ ದಾಸ್, ಕಿಶನ್-ಪ್ರಿಯಾಂಕ, ಕುರಿ-ಚಂದನ, ಹರೀಶ್-ಭೂಮಿ ಮತ್ತು ಶೈನ್ – ಚೈತ್ರಾ ಕೋಟೂರ್ ಅವರನ್ನು ಜೋಡಿಯನ್ನಾಗಿ ಮಾಡಿ ವಿಭಿನ್ನವಾದ ಟಾಸ್ಕ್ಗಳನ್ನು ನೀಡಿ ಪ್ರೇಕ್ಷಕರಿಗೆ ಉತ್ತಮವಾದ ಮನರಂಜನೆಯನ್ನು ನೀಡಿಸಿದರು. ಹೀಗೆ ಜೋಡಿಯನ್ನಾಗಿ ಮಾಡಿದ ಕೆಲವೇ ನಿಮಿಷದಲ್ಲಿ ಶೈನ್ ಮತ್ತು ಚೈತ್ರಾ ಕೊಟ್ಟವರು ಪತಿ ಪತ್ನಿಯಂತೆ ಅಭಿನಯಿಸಿದ್ದು ಪ್ರೇಕ್ಷಕರಿಗೆ ಬಹಳ ಇಷ್ಟವಾಯಿತು. ಸತತ ಐದು ದಿನದಿಂದ ಜೋಡಿಯಾಗಿದ್ದ ಮನೆಯ ಸದಸ್ಯರು ಒಬ್ಬರನ್ನೊಬ್ಬರು ಅರಿತು ಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಈ ವಾರ ಬಿಗ್ ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ಜೊತೆ ಮತ್ತೊಂದು ವಿಶೇಷವಾದ ಟಾಸ್ಕ್ ನೀಡಿದ್ದರು ಅದೇನೆಂದರೆ ಈ ವಾರದ ಬೆಸ್ಟ್ ಜೋಡಿಗೆ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಒಂದು ಲಕ್ಷ ರು ನಗದು ಬಹುಮಾನ ಸಿಗಲಿದೆ ಎಂದು ಹೇಳಿದ್ದರು. ಈ ವಿಚಾರವನ್ನು ಕೇಳಿದ ಮನೆಯ ಸದಸ್ಯರು ಟಾಸ್ಕ್ ಗಳಲ್ಲಿ ನೂರು ಪಟ್ಟು ಪ್ರಯತ್ನ ಹಾಕಿ ಟಾಸ್ಕ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು ಆದರೆ ವಿಜಯಲಕ್ಷ್ಮಿ ಮಾತ್ರ ಕಿಶನ್ ಮತ್ತು ಪ್ರಿಯಾಂಕಾ ರವರಿಗೆ ಒಲಿದು ಬಂದಿತು. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಅಂತೆಯೇ ಫಿನಾಲೆ ವೇದಿಕೆಯಲ್ಲಿ ಅವರಿಗೆ ಬಹುಮಾನ ನೀಡಲಾಗುವುದು. ಈ ವಾರ ಜೋಡಿ ಟಾಸ್ಕ್ ನಲ್ಲಿ ಕಿಶನ್ ಮತ್ತು ಪ್ರಿಯಾಂಕಾ ಅವರು ಹೆಚ್ಚು ಅಂಕ ಗಳಿಸಿ ವಿಜೇತರಾದ ಹಿನ್ನೆಲೆಯಲ್ಲಿ ಅವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಇದರ ಜೊತೆಗೆ ಬಿಗ್ ಬಾಸ್ ಕಿಶನ್ ರವರಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ, ಬಹುಮಾನದ ಜೊತೆಗೆ ಅವರ ತಂದೆ ಕೂಡ ಮನೆಗೆ ಬಂದಿದ್ದು ಸಂಭ್ರಮವನ್ನು ಹೆಚ್ಚಿಸಿದೆ.. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

ಹಿಂದೆ ಪತ್ರ ಬರೆದಿದ್ದ ತಂದೆ ಬೆಸ್ಟ್ ಪರ್ಫಾರ್ಮರ್ ಆಗುವಂತೆ ತಿಳಿಸಿದ್ದರೆನ್ನಲಾಗಿದೆ. ಅವರು ಬೆಸ್ಟ್ ಫಾರ್ಫಾರ್ಮರ್ ಆದ ಸಂದರ್ಭದಲ್ಲಿ ತಂದೆ ಕೂಡ ಭೇಟಿ ನೀಡಿದ್ದು ವಿಶೇಷವಾಗಿತ್ತು. ಮುಂದಿನ ವಾರ ಕ್ಯಾಪ್ಟನ್ ಆಯ್ಕೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಭೂಮಿ – ಹರೀಶ್ ರಾಜ್ ಮತ್ತು ಪ್ರಿಯಾಂಕಾ – ಕಿಶನ್ ಅವರನ್ನು ವಾಸುಕಿ ಆಯ್ಕೆ ಮಾಡಿದ್ದಾರೆ. (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

ಕಳಪೆ ಪ್ರದರ್ಶನ ನೀಡಿದ ಶೈನ್ ಶೆಟ್ಟಿ ಮತ್ತು ಚೈತ್ರಾ ಜೈಲು ಸೇರಿದ್ದಾರೆ. ಕ್ಯಾಪ್ಟನ್ ವಾಸುಕಿ ವೈಭವ್, ಸದಸ್ಯರು ಚಟುವಟಿಕೆಗಳಲ್ಲಿ ಭಾಗವಹಿಸಿದ್ದು, ಮತ್ತು ಅವರು ನೀಡಿದ ಪ್ರದರ್ಶನದ ಬಗ್ಗೆ ಮಾತನಾಡಿ ಬೆಸ್ಟ್ ಪರ್ಫಾರ್ಮರ್ ಮತ್ತು ಕಳಪೆ ಪ್ರದರ್ಶನ ನೀಡಿದ ಜೋಡಿಯನ್ನು ಆಯ್ಕೆ ಮಾಡಿದ್ದಾರೆ… (ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

LEAVE A REPLY

Please enter your comment!
Please enter your name here