ಮೋದಿ, ಅಮಿತ್ ಶಾ ನೇತೃತ್ವದ ಸಭೆಯಿಂದ ಪ್ರವಾಹ ಪರಿಹಾರಕ್ಕೆ ಸಿಕ್ಕ ಹಣ ಎಷ್ಟು ಗೊತ್ತಾ.??

0
1086

ಕೇಂದ್ರ ಗೃಹ ಸಚಿವ ಆಮಿತ್ ಷಾ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪ್ರವಾಹಕ್ಕೆ ತುತ್ತಾಗಿರುವ ರಾಜ್ಯಗಳನ್ನು ಆಧರಿಸಿ, ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಜಲ ಪ್ರಳಯಕ್ಕೆ ತುತ್ತಾಗಿರುವ ಕರ್ನಾಟಕ, ಮಹಾರಾಷ್ಟ್ರ, ಹಿಮಾಚಲ ಪ್ರದೇಶಕ್ಕೆ ಕೇಂದ್ರ ಸರ್ಕಾರ 4432.10 ಕೋಟಿ ರೂಪಾಯಿಗಳನ್ನು ಮಧ್ಯಂತರ ಪರಿಹಾರ ಹಣವಾಗಿ ಬಿಡುಗಡೆ ಮಾಡಿದೆ. ಆಯಾ ರಾಜ್ಯದ ಮುಖ್ಯಮಂತ್ರಿಗಳು ಈ ಹಿಂದೆಯೆ ಪ್ರವಾಹ ಪರಿಹಾರವನ್ನು ಕೂಡಲೇ ಬಿಡುಗಡೆಗೊಳಿಸಿ ಎಂದು ತಮ್ಮ ಮನವಿಯನ್ನು ಸಲ್ಲಿಸಿತ್ತು. ಆದರ ಅನುಗುಣವಾಗಿಯೇ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ನಡೆಸಿದ ಉನ್ನತ ಸಭೆಯಲ್ಲಿ ಪ್ರವಾಹಕ್ಕೆ ನಲುಗಿದ ರಾಜ್ಯಗಳಿಗೆ ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ರಾಜ್ಯಕ್ಕೆ 1029.39 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಹಿಮಾಚಲ ಪ್ರದೇಶಕ್ಕೆ 64.49 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ, ಜೊತೆಗೆ ಒಡಿಸ್ಸಾ ರಾಜ್ಯಕ್ಕೂ 3338.20 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗಿದೆ. ಭಾರಿ ಪ್ರವಾಹಕ್ಕೆ ತುತ್ತಾಗಿರುವ ರಾಜ್ಯಗಳಿಗೆ ಮತ್ತಷ್ಟು ಎನ್‍ಡಿಅರ್‍ಎಫ್ ಹಾಗೂ ರಕ್ಷಣಾ ಪಡೆಗಳನ್ನು ಕಳಿಸಲಾಗುತ್ತದೆ. ಜೊತೆಗೆ ಪ್ರವಾಹದಿಂದ ಉಂಟಾಗಿರುವ ಹಾನಿಗಳಿಗೆ ಇನಷ್ಟು ಚುರುಕಾಗಿ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದ ಜಿಲ್ಲೆಗಳಾದ ಬಿಜಾಪುರ, ಬೆಳಗಾವಿ, ಕೊಪ್ಪಳ, ಗದಗ, ಹಾವೇರಿ ಸೇರಿದಂತೆ ಸಂಪೂರ್ಣ ಉತ್ತರ ಕರ್ನಾಟಕವೇ ಪ್ರವಾಹಕ್ಕೆ ತುತ್ತಾಗಿತ್ತು. ಕರ್ನಾಟಕ ರಾಜ್ಯಕ್ಕೆ ಸುಮಾರು 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಸಿಎಲ್‍ಪಿ ನಾಯಕ ಸಿದ್ದರಾಮಯ್ಯನವರು ಈ ಹಿಂದೆಯೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು, ಅದರೆ ಕೇಂದ್ರ ಸರ್ಕಾರ 1029.39 ಕೋಟಿ ಹಣವನ್ನು ಬಿಡುಗಡೆ ಮಾಡುವಲ್ಲಿ ಸಫಲವಾಗಿದೆ.

LEAVE A REPLY

Please enter your comment!
Please enter your name here