ಸಿರಿವಂತ ದೇವರ ಬಳಿಗೆ ಹರಿದುಬಂದ ಹಣದ ಪ್ರವಾಹವೆಷ್ಟು ಗೊತ್ತಾ..?!

0
210

ಭಾರತ ಹೇಳಿ ಕೇಳಿ ದೇವರುಗಳ ದೇಶ ಇಲ್ಲಿ ಕೋಟ್ಯಾನು ಕೋಟಿ ದೇವರುಗಳು ಇದ್ದಾರೆ ಆದರೆ ಕೆಲವೇ ದೇವರುಗಳು ಮಾತ್ರ ಶ್ರೀಮಂತರು. ದೇಶದ ನಂ 1 ಶ್ರೀಮಂತ ದೇವರುಗಳ ಪಟ್ಟಿಯಲ್ಲಿ ಕಾಣಸಿಗುವ ಚಿರಪರಿಚಿತ ಹೆಸರು ಅಂದ್ರೆ ಅದು ತಿಮ್ಮಪ್ಪ ಹಾಗಿದ್ರೆ ತಿಮ್ಮಪ್ಪನ ಹೊಸ ಸುದ್ದಿ ಏನು ಅಂತಿರಾ..?

ಸಪ್ತಗಿರಿವಾಸ ತಿರುಪತಿ ತಿರುಮಲ ವೆಂಕಟೇಶ್ವರ ಶತಮಾನಗಳಿಂದಲೂ ಸಾವಿರಾರು ಭಕ್ತರ ಆರಾಧ್ಯ ದೈವ. ಪ್ರತಿದಿನ ಲಕ್ಷಾಂತರ ಭಕ್ತರು ತಿಮ್ಮಪ್ಪನ ದರ್ಶನ ಮಾಡ್ತಾರೆ, ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಕೆ ಹಾಕುವುದು ವಾಡಿಕೆ. ಪುರಾಣದ ಪ್ರಕಾರ ತಿಮ್ಮಪ್ಪ ಪದ್ಮಾವತಿಯೊಂದಿಗೆ ಮದುವೆಯಾಗಲು ಕುಬೇರನಲ್ಲಿ ಮಾಡಿದ ಸಾಲ ತೀರಿಸಲು ಇನ್ನು ಹಣ ಹೊಂದಿಸುತ್ತಿದ್ದಾನೆ ಎಂಬುದಾಗಿದೆ. ಆಸ್ತಿಕರು ತಿಮ್ಮಪ್ಪನ ದರ್ಶನ ಮಾಡಿ ವರ ಕೊಡುವಂತೆ ಬೇಡಿಕೊಳ್ಳುತ್ತಾರೆ ಆದರೆ ಇನ್ನು ಕೆಲವು ಭಕ್ತರು ಕೋಟಿ ಕೋಟಿ ನೀಡಿ ದೇವರಿಗೆ ಬೇಗ ಹತ್ತಿರವಾಗುತ್ತಾರೆ. ನಮ್ಮ ರಾಜ್ಯದ ಪ್ರಭಾವಿ ವ್ಯಕ್ತಿಯೊಬ್ಬರು ಬೆಲೆಬಾಳುವ ವಜ್ರಾಭರಣ ನೀಡಿದ್ದರು. ಈಗ ಅಂತಹುದೇ ಮಹಾ ಕೊಡುಗೆ ತಿರುಪತಿಯಿಂದ ಕೇಳಿಬಂದಿದೆ.

ಭಾರತ ಮೂಲದ ಅಮೆರಿಕಾ ನಿವಾಸಿಗಳು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದು ಅವರು ನೀಡಿರುವ ಕೊಡುಗೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅನಿವಾಸಿ ಭಾರತೀಯರು ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ನೆರವೇರಿಸಿ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‍ಗೆ 14 ಕೋಟಿ ಹಣವನ್ನು ನೀಡಿದ್ದಾರೆ. ಇನ್ನುಇ ಆಶ್ಚರ್ಯದ ಸಂಗತಿ ಅಂದರೆ ಇದೇ ಅನಿವಾಸಿ ಭಾರತೀಯರು ಕಳೆದ ವರ್ಷವೂ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ 13 ಕೋಟಿ ಹಣವನ್ನು ನೀಡಿದ್ದರಂತೆ.

ಅದೆಷ್ಟೋ ಭಕ್ತರು ನೀಡುವ ಬೃಹತ್ ಕಾಣಿಕೆಗಳ ಪಟ್ಟಿಯನ್ನು ಟಿಟಿಡಿ ಸಿದ್ಧಪಡಿಸುತ್ತದೆ. ಆದರೆ ಈ ಕೊಡುಗೈ ದಾನಿಗಳು ತಮ್ಮ ಹೆಸರನ್ನು ಎಲ್ಲೂ ಬಳಸದಂತೆ ಮತ್ತು ತಾವು ನೀಡಿರುವ ಹಣದಲ್ಲಿ ಸಮಾಜ ಕಲ್ಯಾಣ ಕೆಲಸಗಳನ್ನು ಮಾಡುವಂತೆ ಟಿಟಿಡಿಗೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇವರು ನೀಡಿದ ದೇಣಿಗೆ ಮೊತ್ತ ಇಂದಿಗೆ ದೊಡ್ಡದಾಗಿರಬಹುದು ಆದರೆ ಶತಮಾನಗಳ ಹಿಂದಿನಿಂದಲೂ ನೀಡಿರುವ ದೇಣಿಗೆ ಆಭರಣಗಳು ತಿರುಪತಿ ತಿಮ್ಮಪ್ಪನನ್ನು ಮತ್ತಷ್ಟು ಶ್ರೀಮಂತನನ್ನಾಗಿಸಿದೆ. ಉತ್ತುಂಗದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯ ನೀಡಿರುವ ಅಮೂಲ್ಯ ರತ್ನಾಭರಣಗಳು ಇಂದಿಗೂ ತಿಮ್ಮಪ್ಪನ ಸಿರಿವಂತಿಕೆಗೆ ಕಾರಣವಾಗಿವೆ.

LEAVE A REPLY

Please enter your comment!
Please enter your name here