ಕುರುಕ್ಷೇತ್ರ ಸಿನಿಮಾದ ಒಂದು ವಾರದ ಕಲೆಕ್ಷನ್ ಎಷ್ಟು ಗೊತ್ತಾ

0
133

ಕನ್ನಡ ಚಿತ್ರರಂಗವು ಇತಿಹಾಸ ಸೃಷ್ಟಿಸಲು ಪಟ್ಟ ಪ್ರಯತ್ನ ಫಲ ನೀಡಿದೆ
ಪೌರಾಣಿಕವಾದ ಕುರುಕ್ಷೇತ್ರವನ್ನು ಒಂದು ಕಥೆಯನ್ನಾಗಿ ಪರಿವರ್ತಿಸಿ 2D, 3D ಎರಡರಲ್ಲೂ ಮಾಡಿ ಜನರ ಮುಂದೆ ತಂದ ಚಿತ್ರ ತಂಡಕ್ಕೆ ಈಗ ಫಲ ದೊರೆತಿದೆ
ನೂರಾರು ಕಲಾವಿದರು, ತಂತ್ರಜ್ಞರು , ಇದಕ್ಕೆ ಬೇಕಾದ ಸೆಟ್, ಗ್ರಾಫಿಕ್ಸ್ ಎಲ್ಲ ಒದಗಿಸಿ ಚಿತ್ರ ಯಶಸ್ವಿ ಮಾಡುವುದು ಸಾಮಾನ್ಯವಾದ ಮಾತಲ್ಲ.

ನಿರ್ಮಾಪಕ ಮುನಿರತ್ನ ರವರು ಇಂತಹ ಸಾಹಸಕ್ಕೆ ಕೈ ಹಾಕಿ ಗೆದ್ದಿದ್ದಾರೆ
ದರ್ಶನ್ ಸುಯೋದನನಾಗಿ ಈ ಸಿನಿಮಾದಲ್ಲಿ ನಟಿಸಿ ತಮ್ಮ 50 ನೇ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ
ಈ ಸಿನಿಮಾದಲ್ಲಿ ಸಣ್ಣ ಪಾತ್ರವೇ ಇರಲಿ ಅಥವಾ ದೊಡ್ಡ ಪಾತ್ರವೇ ಇರಲಿ ಎಲ್ಲರೂ ಕೂಡ ಪಾತ್ರಕ್ಕೆ ಡೆಡಿಕೇಷನ್ ನೀಡಿ ಚಿತ್ರ ಯಶಸ್ವಿ ಆಗುವಂತೆ ಮಾಡಿದ್ದಾರೆ
ಈ ಚಿತ್ರ 800 ಕ್ಕೂ ಅಧಿಕ ಕಡೆಯಲ್ಲಿ ತೆರೆ ಕಂಡಿದೆ
ಈ ವಾರದಿಂದ ಇತರ ಭಾಷೆಗಳಲ್ಲೂ ಕೂಡ ಇದು ತನ್ನ ದರ್ಬಾರ್ ಅನ್ನು ಶುರುಮಾಡಲಿದೆ.

ಉತ್ತರ ಕನ್ನಡದ ಜಲ ಪ್ರವಾಹದಿಂದ ಇದರ ಕಲೆಕ್ಷನ್ ಗೆ ಕತ್ತರಿ ಬಿದ್ದಿದೆ
ಅದರು ಕೂಡ ಸಿನಿಮಾ ಮೇಲಿನ ಕುತೂಹಲಕ್ಕೆ ಈ ಚಿತ್ರ ಕೋಟಿ ಕೋಟಿ ಹಣ ಬಾಚಿದೆ
ಪ್ರವಾಹ ಇಲ್ಲದಿದ್ದರೆ ಈ ಸಿನಿಮಾ ನೂರು ಕೋಟಿ ದಾಟುತ್ತಿತ್ತು. ಬಾಕ್ಸ್ ಆಫೀಸ್ ನಲ್ಲಿ ಇದು ರೆಕಾರ್ಡ್ ಮಾಡಿ ಬಿಟ್ಟಿದೆ. ಕಲೆಕ್ಷನ್ ಬಗ್ಗೆ ರಾಕ್ ಲೈನ್ ವೆಂಕಟೇಶ್ ಮಾತನಾಡಿ ಮೊದಲ ವಾರವೇ ಕುರುಕ್ಷೇತ್ರ ಚಿತ್ರ 11 ಕೋಟಿ ಗಳಿಸಿದೆ ಎಂದು ಮಾಹಿತಿ ನೀಡಿದ್ದಾರೆ
ವೀಕೆಂಡ್ ನಲ್ಲಿ ಕೂಡ ಎಲ್ಲ ಟಿಕೆಟ್ ಗಳು ಬುಕ್ ಆಗಿದೆಯಂತೆ ಹಾಗಾಗಿ ಹೌಸ್ ಫುಲ್ ಆಗಿದೆ ಎಂದು ಕೂಡ ಹೇಳಿದ್ದಾರೆ.

ಸೋಮವಾರ ಬಕ್ರೀದ್ ಇರುವುದರಿಂದ ಒಟ್ಟು 35 ಕೋಟಿ ಕಲೆಕ್ಷನ್ ಆಗುತ್ತದೆ ಎಂಬ ನಿರೀಕ್ಷಣೆಯಲ್ಲಿದ್ದಾರೆ. ಎಲ್ಲ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿ ಒಂದು ವಾರದಲ್ಲಿ 100 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ.
ಹೀಗೆ ನಮ್ಮ ಕುರುಕ್ಷೇತ್ರ ಇನ್ನು ಚೆನ್ನಾಗಿ ಓಡಿ ನಿರೀಕ್ಷಣೆಗೂ ಮೀರಿದ ದಿನಗಳನ್ನು ಕಾಣಲಿ ಎಂದು ಹಾರೈಸೋಣ

LEAVE A REPLY

Please enter your comment!
Please enter your name here