ನಮ್ಮ ರೈಲ್ವೆ ಇಲಾಖೆ ಅಂದ್ರೆ ಯಾರಿಗೆ ತಾನೇ ಹೆಮ್ಮೆ ಇರೋದಿಲ್ಲ ನೀವೆ ಹೇಳಿ. ಕೆಲ ತಿಂಗಳಿನಿಂದ ಹೊಸ – ಹೊಸ ತಂತ್ರಜ್ಞಾನವನ್ನು ಜಾರಿಗೆ ತರಿಸಿದೆ. ಹೀಗಾಗಿ ಭಾರತೀಯ ರೈಲ್ವೆ ಇಲಾಖೆ ಇಂದಿನಿಂದ ಕೆಲ ದಿನಗಳ ಕಾಲ ಒಟ್ಟು 319 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಿದೆ.
ಈಗಾಗಲೇ ಭಾರತೀಯ ರೈಲ್ವೆ ಇಲಾಖೆ ದೇಶಾದ್ಯಂತ ನಿತ್ಯ ಸುಮಾರು 12, 600 ರೈಲುಗಳನ್ನು ಇಆಲಖೆ ವತಿಯಿಂದ ಓಡಿಸುತ್ತದೆ. ಇದೇ ರೈಲಿನಲ್ಲಿ ಪ್ರತಿ ದಿನ ಸುಮಾರು 23 ಮಿಲಿಯನ್ ಜನರು ಈ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಕಾಲಕಾಲಕ್ಕೆ ಹಳಿಗಳನ್ನು ಸರಿಪಡಿಸಲು ಭಾರತೀಯ ರೈಲ್ವೆ ಇಲಾಖೆ ದೇಶದ ವಿವಿಧ ಭಾಗಗಳಲ್ಲಿ ಟ್ರಾಫಿಕ್ ಬ್ಲಾಕ್ಗಳನ್ನು ಹಲವಾರು ಬಾರಿ ನಿರ್ಮಿಸುತ್ತದೆ. ಈ ಕಾರಣದಿಂದಾಗಿ, ರೈಲುಗಳ ಪ್ರಯಾಣವನ್ನು ಉತ್ತಮವಾಗಿ ನಿರ್ವಹಿಸಲು ರೈಲುಗಳನ್ನು ರದ್ದುಗೊಳಿಸಬೇಕಾಗುತ್ತದೆ. ಹೀಗೆಯೇ ತನ್ನ ಕೆಲಸವನ್ನು ಮುಂದುವರೆಸುತ್ತಿದೆ ಈಗಿನ ರೈಲ್ವೆ ಇಲಾಖೆ.
ತನ್ನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಲು ಹಾಗೂ ರೈಲ್ವೆಯ ವಿವಿಧ ವಲಯಗಳಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯಗಳ ಹಿನ್ನೆಲೆ, ದೇಶಾದ್ಯಂತ ಹಲವಾರು ಟ್ರಾಫಿಕ್ ಬ್ಲಾಕ್ಗಳನ್ನು ನಿರ್ಮಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ರೈಲುಗಳನ್ನು ಉತ್ತಮವಾಗಿ ನಿರ್ವಹಿಸಲು ಈ ರೈಲುಗಳನ್ನು ರದ್ದುಪಡಿಸಲಾಗಿದೆ. ರದ್ದಾದ ರೈಲುಗಳ ಪಟ್ಟಿಯನ್ನು ರೈಲ್ವೆ ವಿಭಾಗದ ಅಧಿಕೃತ ವೆಬ್ಸೈಟ್ ಆಗಿರುವ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (ನ್ಯಾಷನಲ್ ಟ್ರೈನ್ ಎನ್ಕ್ವೈರಿ ಸಿಸ್ಟಮ್) ಯಲ್ಲಿ ಈಗಾಗಲೇ ತಿಳಿಸಲಾಗಿದೆ.
ಅಲ್ಲದೇ ಇದೇ ರೈಲು ವಿಭಾಗ ಈಗಾಗಲೇ ರದ್ದುಪಡಿಸಲಾಗಿರುವ ರೈಲುಗಳ ಪಟ್ಟಿಯನ್ನು ರೈಲ್ವೆ ವೆಬ್ಸೈಟ್ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆಯಲ್ಲಿ ಪ್ರಕಟಿಸಿದೆ. ಜೊತೆಗೆ, ನಿಲ್ದಾಣಗಳಲ್ಲಿಯೂ ಕೂಡ ಪ್ರಕಟಣೆಗಳ ಮೂಲಕ ರದ್ದಾಗಿರುವ ರೈಲುಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿಯನ್ನು ಸಹ ಈಗಾಗಲೇ ಸ್ಪಷ್ಟವಾಗಿ ತಿಳಿಸುತ್ತಿದೆ.
ಇನ್ನು ರದ್ದಾದ ರೈಲಿನ ಕುರಿತು 139 ಈ SMS ಸೇವೆಯ ಮೂಲಕವು ಸ್ಥಿತಿಯನ್ನು ತಿಳಿಯಬಹುದಾಗಿದೆ. ಇದೇ ವೇಳೆ, ರೈಲು ರದ್ದಾದ ಪ್ರಯಾಣಿಕರು, ತಮ್ಮ ಟಿಕೆಟ್ ಅನ್ನು ರದ್ದುಗೊಳಿಸುವ ಮೂಲಕ ತಮ್ಮ ಸಂಪೂರ್ಣ ಹಣವನ್ನು ಹಿಂಪಡೆಯಬಹುದಾಗಿದೆ