ಹುಡ್ಗಿರು ವರ್ಷದಲ್ಲಿ ಎಷ್ಟು ಸಲ ಅಳ್ತಾರೆ ಅಂತ ನಿಮಗೆ ಗೊತ್ತಾ..?

0
111

ಅಳು…ಇದು ಮಹಿಳೆಯರ ವಿಷ್ಯಯದಲ್ಲಿ ಕ್ವೈಟ್ ಕಾಮನ್..! ಕೆಲವು ಹುಡ್ಗೀರ್ ,‌ ರಫ್ & ಟಫ್ ಅಂತ ಅನಿಸಿದ್ರೂ ಕೂಡ ಅವರ ಮನಸ್ಸು ಸೂಕ್ಷ್ಮವಾಗಿರುತ್ತೆ‌. ಚಿಕ್ಕಪುಟ್ಟ ವಿಷ್ಯಗಳಿಗೂ ಅಳುವವರಿದ್ದಾರೆ.

ವರ್ಷಕ್ಕೆ ಮಹಿಳೆಯರು ಎಷ್ಟು ಸಲ ಅಳ್ತಾರೆ ಅಂತ ಗೊತ್ತಿದ್ಯಾ..? ಅಯ್ಯೋ, ಯಾರ್ ಸ್ವಾಮಿ ಅಳುವುದ‌ನ್ನು ಕೌಂಟ್ ಮಾಡ್ತಾರೆ ಅಂತ ನೀವು ಮನಸ್ಸಲ್ಲೇ ಹೇಳ್ಕೊಂಡಿರ್ತೀರಿ! ಆದರೆ, ಯಾರು ಎಷ್ಟು ಸಲ ಅಳ್ತಾರೆ ಎಂಬುದನ್ನೂ ಕೂಡ ಲೆಕ್ಕ ಮಾಡಿದ್ದಾರೆ..!

ಹೌದು , ಜರ್ಮನಿಯ ನೇತ್ರವಿಜ್ಞಾನ ಸೊಸೈಟಿ ( Ophthalmology Society) ಮಹಿಳೆಯರು , ಪುರುಷರ ಅಳುವಿನ ಬಗ್ಗೆ ರಿಸರ್ಚ್ ಮಾಡಿದೆ..! ಮಹಿಳೆಯರು ವರ್ಷಕ್ಕೆ ಸರಾಸರಿ 30 ರಿಂದ 64 ಬಾರಿ ಅಳ್ತಾರಂತೆ! ‌ಇವರು ಒಮ್ಮೆ ಅಳಲು ಶುರುಮಾಡಿದ್ರೆ ಕನಿಷ್ಠ 6 ನಿಮಿಷಗಳ ಕಾಲ ಅಳು ನಿಲ್ಸಲ್ವಂತೆ.

ಪುರುಷರು ವರ್ಷಕ್ಕೆ 6 ರಿಂದ 17 ಬಾರಿ ಅಳ್ತಾರೆ ಅನ್ನೋದು ಅಧ್ಯಯನದಿಂದ ಗೊತ್ತಾಗಿದೆ ಅಂತ ರಿಸರ್ಚ್ ರಿಪೋರ್ಟ್ ಹೇಳಿದೆ.

LEAVE A REPLY

Please enter your comment!
Please enter your name here