‘ಅವನೇ ಶ್ರೀಮನ್ನಾರಾಯಣ’ ಬಜೆಟ್ ಎಷ್ಟು ಕೋಟಿ ಗೊತ್ತಾ ?

0
186

ಈ ವರ್ಷದ ಬಹುನಿರೀಕ್ಷಿತ ಚಿತ್ರದ ಪೈಕಿ ನಟ ರಕ್ಷಿತ್ ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ ಮೂವಿ ವರ್ಷಾಂತ್ಯಕ್ಕೆ ದರ್ಶನ ನೀಡಲು ‘ಅವನೇ ಶ್ರೀಮನ್ನಾರಾಯಣ’ ಕನ್ನಡ ಚಿತ್ರರಂಗದಲ್ಲಿ ಸಜ್ಜಾಗಿದೆ.

 

 

ಅಂದರೆ ಈ ಚಿತ್ರ ಚಂದನವನದಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಕಾರಣ ಇದು ಅತಿ ದೊಡ್ಡ ಬಜೆಟ್ ಸಿನಿಮಾಗಳ ಪೈಕಿ ಒಂದು. ಹೀಗಂತಲೇ ಚಿತ್ರ ಶುರುವಾದಾಗಿನಿಂದಲೂ ಇದ್ದ ಸುದ್ದಿ. ಆದರೇ ಇತ್ತೀಚೆಗೆ ಚಿತ್ರದ ಹೀರೋ ರಕ್ಷಿತ್ ಶೆಟ್ಟಿನೇ ಹೇಳಿರುವ ಪ್ರಕಾರ ಈ ಸುದ್ದಿ ನಿಜವೇ ಹೌದು.

 

 

ಈ ಕುರಿತು ರಕ್ಷಿತ್ ಶೆಟ್ಟಿ ದೃಶ್ಯ ಮಾಧ್ಯಮದ ಸಂದರ್ಶನ ಒಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ರಕ್ಷಿತ್ ಇಡೀ ಚಿತ್ರದ ಶೂಟಿಂಗ್ 23 ಕೋಟಿ ರೂಪಾಯಿ ಒಳಗೆ ಮುಗಿದಿದೆ ಎಂದಿದ್ದಾರೆ. ಇನ್ನು ನಮ್ಮ ಟ್ರೈಲರ್ ನೋಡಿದವರು ಸಿನಿಮಾ ಖಂಡಿತ 45 ಕೋಟಿ ರೂಪಾಯಿ ಮೇಲಿರುತ್ತೆ ಅಂತಾನೇ ಮಾತಾಡಿಕೊಂಡಿದ್ದರು. ಅಷ್ಟು ಚೆನ್ನಾಗಿ ಟ್ರೈಲರ್ ಕ್ವಾಲಿಟಿ ಮೂಡಿ ಬಂದಿದೆ. ಆದರೇ ನಮ್ಮ ಪ್ರೊಡಕ್ಷನ್ ಟೀಂ ಚೆನ್ನಾಗಿದ್ದರಿಂದ 23 ಕೋಟಿ ರೂಪಾಯಿನಲ್ಲೇ ಶೂಟಿಂಗ್ ಕಂಪ್ಲೀಟ್ ಮಾಡಿದ್ದಿವಿ ಎಂದಿದ್ದಾರೆ.

 

 

ಈ ಹಿಂದೆ ಚಿತ್ರ ತಂಡ ಬರೋಬ್ಬರಿ 3 ವರ್ಷಗಳ ಕಾಲ ಶೂಟಿಂಗ್ ನಡೆಸಿದ್ದರಿಂದ ಇಷ್ಟು ಡೆಡಿಕೇಟೆಡ್ ಆಗಿ ಮಾಡ್ತಿರೋ ಈ ಸಿನಿಮಾ ಬಜೆಟ್ ಎಷ್ಟಾಗಿರಬಹುದು ಎನ್ನುವ ಕುತೂಹಲ ಇತ್ತು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

 

 

ಈ ವಾರಂತ್ಯಕ್ಕೆ ಅಂದರೆ ಡಿಸೆಂಬರ್ 27 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರದ ಆನ್ ಲೈನ್ ಬುಕಿಂಗ್ ಇಂದಿನಿಂದ ಆರಂಭವಾಗಿದೆ. ಮೊದಲ ಶೋ ನೋಡಲು ಬಯಸುವವರು ತಕ್ಷಣವೇ ಆನ್ ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು. ಇನ್ನು ಅವನೇ ಶ್ರೀ ಮನ್ನಾರಾಯಣ ಕನ್ನಡದಲ್ಲಿ ಡಿಸೆಂಬರ್ 27 ಕ್ಕೆ ಬಿಡುಗಡೆಯಾಗಲಿದ್ದು, ತೆಲುಗಿನಲ್ಲಿ ಜನವರಿ 1, ತಮಿಳು ಮತ್ತು ಮಲಯಾಳಂನಲ್ಲಿ ಜೂನ್ 3 ರಂದು ಚಿತ್ರ ಬಿಡುಗಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here