ಜನುಮದ ಜೋಡಿ ಖ್ಯಾತಿಯ ಶಿಲ್ಪಾ ಹೇಗಿದ್ದಾರೆ ಗೊತ್ತಾ?

0
626

ಮೂಲತಃ ಕೇರಳ ಕುಟುಂಬದವರಾದ ಜನುಮದ ಜೋಡಿ ಚಿತ್ರದ ನಾಯಕಿ ಶಿಲ್ಪಾ, ಕನ್ನಡ ಸೇರಿದಂತೆ ಹಲವು ಮಲಯಾಳಂ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಮತ್ತು ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ! ಭರತನ್ ನಿರ್ದೇಶನದ ಪಾದ್ಯೆಮ್ (1993) ಎಂಬ ಮಲಯಾಳಂ ಚಿತ್ರದ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅವರು ಪ್ರಾರಂಭದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸುತ್ತಿದ್ದರು. ನಂತರ ಪ್ರಮುಖ ಪಾತ್ರದಲ್ಲಿ ಮಿಂಚಿದ ಶಿಲ್ಪಾ, 1996 ರಲ್ಲಿ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಜನುಮದ ಜೋಡಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿ ಅಪಾರ ಜನಮನ್ನಣೆಯನ್ನು ಪಡೆದುಕೊಂಡರು.

 

ಈ ಸಿನಿಮಾ ಕನ್ನಡದಲ್ಲಿ ಅನೇಕ ದಾಖಲೆಗಳನ್ನು ಬರೆಯುವುದಲ್ಲದೆ, ಚಿತ್ರಮಂದಿರದಲ್ಲಿ 500 ದಿನಗಳನ್ನು ಪೂರೈಸಿತ್ತು. ಕನ್ನಡ ಸಿನಿಮಾದಲ್ಲಿ ಪ್ರಮುಖ ನಟಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡ ಅವರು ಅದೇ ಚಿತ್ರದಲ್ಲಿ ತನ್ನ ಅಭಿನಯಕ್ಕಾಗಿ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.

 

ನಂತರ ಅವರು ನಿರ್ಮಾಪಕ ಎಂ.ರಂಜಿತ್ ಅವರನ್ನು ವಿವಾಹವಾದ ಬಳಿಕ ಮಲಯಾಳಂ ನ ದೂರದರ್ಶನ ಧಾರಾವಾಹಿಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಶ್ರೀಜನಂನಲ್ಲಿ ಮಾಯಮ್ಮ ಪಾತ್ರಕ್ಕೆ ಹೆಸರುವಾಸಿಯಾದ ಅವರು ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ (ಅವಂತಿಕಾ ಕ್ರಿಯೇಷನ್ಸ್) ಅಡಿಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿ, ಕಿರುತೆರೆ ಮತ್ತು ಹಿರಿತೆರೆಯಲ್ಲಿ ತನ್ನದೇ ಆದ ಛಾಪು ಮಾಡಿಸಿಕೊಂಡಿದ್ದಾರೆ.

 

ಕನ್ನಡದಲ್ಲಿ ಹಳ್ಳಿ ಹುಡುಗಿಯ ಪಾತ್ರವನ್ನು ಅಭಿನಯಿಸಿ ಜನರ ಮನಸ್ಸು ಗೆದ್ದಿದ್ದ ನಟಿ ಶಿಲ್ಪಾ, ಹುಟ್ಟಿದ್ದು ಕೇರಳದಲ್ಲಾದರೂ ಹೆಸರು ಮಾಡಿದ್ದು ಕನ್ನಡದಲ್ಲಿ. ಇವರು ಕೊನೆಯದಾಗಿ ನಟಿಸಿದ ಚಿತ್ರ ಕೂಡ ಕನ್ನಡದಲ್ಲೇ! 2004 ರಲ್ಲಿ ಪಾಂಡವ ಎಂಬ ಚಿತ್ರದಲ್ಲಿ ಅಭಿನಯಿಸಿದ ಬಳಿಕ ಮತ್ಯಾವ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಸಿನಿಮಾದಿಂದ ದೂರ ಉಳಿದು ಸಾಂಸಾರಿಕ ಜೀವನದಲ್ಲಿ ನೆಮ್ಮದಿಯಾಗಿರುವ ಶಿಲ್ಪಾ ಅವರಿಗೆ ಆವಂತಿಕ ಎಂಬ ಮುದ್ದಾದ ಮಗಳಿದ್ದಾಳೆ. ಆವಂತಿಕಾ ನೋಡಲು ಥೇಟ್ ಶಿಲ್ಪಾ ಅವರಂತೆಯೇ ಇದ್ದಾಳೆ.

 

ವಿವಾಹವಾದ ಬಳಿಕ ಸ್ವಂತ ಪ್ರೋಡಕ್ಷನ್ ಹೌಸ್ ಪ್ರಾರಂಭಿಸಿದ ಶಿಲ್ಪಾ ತನ್ನ ಗಂಡನ ನಿರ್ದೇಶನದ ಸಿನಿಮಾಗಳಿಗೆ ನಿರ್ಮಾಪಕರಾದರು. ಆದರೆ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಸಿನಿಮಾ ನಿರ್ಮಾಣ ದಿಂದ ಸಾಕಷ್ಟು ಹಣವನ್ನು ಕಳೆದುಕೊಂಡ ನಟಿ ಶಿಲ್ಪಾ, ತದನಂತರ ಧಾರಾವಾಹಿಗಳಲ್ಲಿ ನಟಿಸಿ ಒಂದಿಷ್ಟು ಹಣವನ್ನು ಗಳಿಸಿ ಆರ್ಥಿಕವಾಗಿ ಸುಧಾರಿಸಿಕೊಂಡರು. ಹಿರಿತೆರೆಯಲ್ಲಿ ಸಿನಿಮಾಗಳಿಗೆ ಬಂಡವಾಳ ಹೂಡಿ ಕೈ ಸುಟ್ಟುಕೊಂಡ ಮೇಲೆ ನಟಿ ಶಿಲ್ಪಾ ಧಾರಾವಾಹಿಗಳಿಗೆ ನಿರ್ಮಾಣ ಮಾಡಲು ಪ್ರಾರಂಭಿಸಿದರು. ಆದರೆ ಈ ಬಾರಿ ದೇವರು ಅವರ ಕೈಬಿಡಲಿಲ್ಲ.

 

ಇದೀಗ ಮಲೆಯಾಳಂನಲ್ಲಿ ಒಂದು ಮತ್ತು ತಮಿಳಿನಲ್ಲಿ ಒಂದು ಧಾರಾವಾಹಿ ಅವರ ನಿರ್ಮಾಣದಲ್ಲಿ ಪ್ರಸಾರವಾಗುತ್ತಿದ್ದು, ಎರಡು ಸೀರಿಯಲ್ ಕೂಡ ಸೂಪರ್ ಡೂಪರ್ ಹಿಟ್ಟಾಗಿದೆ. ಇದೀಗ ಕಿರುತೆರೆಯಲ್ಲಿ ದೊಡ್ಡ ನಿರ್ಮಾಪಕಿಯಾಗಿ ಬೆಳೆದಿರುವ ನಟಿ ಶಿಲ್ಪಾ ಅವರನ್ನು ಕಂಡರೆ ತಂತ್ರಜ್ಞರಿಗೆ ಬಹಳ ಅಚ್ಚುಮೆಚ್ಚು.. ಲೈಟ್ ಮ್ಯಾನ್ ಅವರಿಂದ ಹಿಡಿದು ತನ್ನ ನಿರ್ಮಾಣದಲ್ಲಿ ಕೆಲಸ ಮಾಡುತ್ತಿರುವವರನ್ನು ಎಲ್ಲರನ್ನು ಸರಿಸಮಾನವಾಗಿ ನೋಡುತ್ತಾರಂತೆ ನಟಿ ಶಿಲ್ಪಾ. ಅಲ್ಲದೇ ಚಿತ್ರೀಕರಣದ ವೇಳೆ ತಾನು ನಿರ್ಮಾಪಕಿ ಎಂದು ಗರ್ವದಿಂದ ಮೆರೆಯದೆ ಸಣ್ಣ ಪುಟ್ಟ ಕೆಲಸಗಳನ್ನು ಸಹ ಮಾಡುತ್ತಾ ಎಲ್ಲರ ಮನಸ್ಸು ಗೆದ್ದಿದ್ದಾರಂತೆ.

 

ಒಟ್ಟಾರೆ ಕನ್ನಡ ಸಿನಿರಸಿಕರ ಹಳ್ಳಿ ಹುಡುಗಿ ಎಂದೇ ಖ್ಯಾತರಾಗಿದ್ದ ನಟಿ ಶಿಲ್ಪಾ ದೊಡ್ಡ ಪರದೆಯಲ್ಲಿ ಬಂಡವಾಳವನ್ನು ಹೂಡಿ, ಒಂದಿಷ್ಟು ಹಣವನ್ನು ಕಳೆದುಕೊಂಡು ಆರ್ಥಿಕ ಸಮಸ್ಯೆಯನ್ನು ಅನುಭವಿಸುತ್ತಿದ್ದ ಅವರು ಕಿರುತೆರೆಯಲ್ಲಿ ಬಂಡವಾಳ ಹೂಡಿ ನಿರ್ಮಾಪಕಿಯಾಗಿ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಒಳ್ಳೊಳ್ಳೆ ಧಾರಾವಾಹಿಗಳನ್ನು ನೀಡುತ್ತಿದ್ದಾರೆ. ಜನುಮದ ಜೋಡಿಯ ಶಿಲ್ಪಾ ನಿಮಗೆ ಇಷ್ಟವಿದ್ದಲ್ಲಿ ಕಾಮೆಂಟ್ ಮುಖಾಂತರ ನಿಮ್ಮ ಅನಿಸಿಕೆ ತಿಳಿಸಿ

LEAVE A REPLY

Please enter your comment!
Please enter your name here