ಪೌಷ್ಠಿಕತೆಗೆ ಸ್ವಾದಿಷ್ಟ ಕಿವಿಹಣ್ಣು. ಸಮೃದ್ಧ ಪೌಷ್ಠಿಕಾಂಶಗಳು ಇರುವ ಹಣ್ಣುಗಳ ಪೈಕಿ ಕಿವಿಹಣ್ಣು ಅಗ್ರಸ್ಥಾನದಲ್ಲಿದೆ. ಇದರಲ್ಲಿ ವಿಟಮಿನ್ ಸಿ, ಆಕ್ಟಿನಿಡಿನ್, ಪೋಟ್ಯಾಷಿಯಂ ಮತ್ತು ಪೋಲೆಟ್ ಸಮೃದ್ಧವಾಗಿದೆ. ಒಂದೇ ಒಂದು ಕಿವಿಹಣ್ಣನ್ನು ತಿನ್ನುವುದರಿಂದ ದಿನನಿತ್ಯ ನಮಗೆ ಅಗತ್ಯವಾಗುವ ವಿಟಮಿನ್ ಸಿ ಪ್ರಮಾಣದ ಶೇ.17 ಮತ್ತು ಆಹಾರ ನಾರಿನ ಶೇ.21ರಷ್ಟು ಸಿಗುತ್ತದೆ ಎನ್ನುವುದು ಸಂಶೋಧನೆಗಳಿಂದ ಬಹಿರಂಗವಾಗಿದೆ.

ಕಿವಿಹಣ್ಣಿನ್ನು ತಿನ್ನುವುದರಿಂದ ಆಸ್ತಮಾದೊಂದಿಗೆ ಸಂಬಂಧಪಟ್ಟಿರುವ ಶ್ವಾಸಕೋಶ ಸಂಬಂಧಿತ ರೋಗಗಳ ನಿವಾರಣೆಯಾಗುತ್ತವೆ. ರಕ್ತ ಹೆಪ್ಪುಗಟ್ಟುವಿಕೆಯೂ ಗಣನೀಯವಾಗಿ ಕಡಿಮೆಯಾಗಿ ರಕ್ತದಲ್ಲಿ ಕೊಬ್ಬಿನ ಪ್ರಮಾಣವೂ ಕಡಿಮೆಯಾಗುವುದರಿಂದ ಹೃದ್ರೋಗ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ. ಅದೇ ರೀತಿ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನೂ ನಿಯಂತ್ರಣದಲ್ಲಿಡುತ್ತದೆ.

ಇನ್ನು ಈ ಹಣ್ಣನ್ನು ಚಿಲಿ ದೇಶದಲ್ಲಿ ಇದನ್ನು ಅತಿ ಹೆಚ್ಚು ಬೆಳೆಯಲಾಗುತ್ತದೆ. ಇದು ಆರೋಗ್ಯಕರ ಹಣ್ಣು. ಅಟಕಾಮಾ ಮರಳು ಭೂಮಿ, ಪೆಸಿಫಿಕ್ ಸಾಗರ, ಆಂಡಿಸ್ ಪರ್ವತಗಳು ಮತ್ತು ಪಟಗೋನಿಯಾದಂತಹ ಸರಿಸಾಟಿಯಿಲ್ಲದ ನೈಸರ್ಗಿಕ ಭೌಗೋಳಿಕ ಸರಹದ್ದುಗಳಿಂದ ಆವರಿಸಲ್ಪಟ್ಟಿರುವ ಚಿಲಿ ದೇಶವು ಸಮೃದ್ಧವಾದ ಮತ್ತು ಸತ್ವಯುತ ಮಣ್ಣನ್ನು ಹೊಂದಿದ್ದು, ಇಲ್ಲಿ ತಾಜಾ ಕಿವಿ ಹಣ್ಣುಗಳ ಭಂಡಾರವೇ ಇದೆ. ಚಿಲಿ ದೇಶವು ಭಾರತದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಿಂದಾಗಿ ಚಿಲಿಯನ್ ಕಿವಿಹಣ್ಣುಗಳು ನಮಗೆ ಲಭ್ಯವಾಗುತ್ತಿವೆ ಎಂಬುದು ವಿಶೇಷ.