ಬಿಳಿಯಾದ ಹೊಳೆಯುವ ಹಲ್ಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಅನೇಕರು ಹಲ್ಲಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದಿಲ್ಲ. ಹೀಗಾಗಿಯೇ ಹಳದಿ ಹಲ್ಲು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ. ಈ ಸಮಸ್ಯೆಗೆ ಈ ಕೆಳಗಿನ ಮನೆ ಮದ್ದಿನ ಮೂಲಕವೇ ಗುಡ್ ಬೈ ಹೇಳಬಹುದು.
ಒಂದು ಬಟ್ಟಲಿಗೆ 1 ಚಮಚ ಅಡುಗೆ ಸೋಡಾ ಹಾಗೂ ಅರ್ಧ ಚಮಚ ಉಪ್ಪನ್ನು ಹಾಕಿ ಎರಡು ಕಪ್ ನೀರನ್ನು ಬಿಸಿ ಮಾಡಿ ಅದರಲ್ಲಿ ಬ್ರಷ್ ಅದ್ದಿ. ನಂತ್ರ ಈ ಮಿಶ್ರಣವನ್ನು ಹಲ್ಲಿಗೆ ಹಚ್ಚಿ ಸ್ಕ್ರಬ್ ಮಾಡಿ. ಬಿಸಿ ನೀರಿನಲ್ಲಿ ಹಲ್ಲುಗಳನ್ನು ತೊಳೆಯಿರಿ. ಇನ್ನೊಂದು ಪಾತ್ರೆಗೆ ಹೈಡ್ರೋಜನ್ ಪೆರಾಕ್ಸೈಡ್ ಹಾಗೂ ಅರ್ಧ ಕಪ್ ನೀರನ್ನು ಹಾಕಿ. ಒಂದು ನಿಮಿಷದವರೆಗೆ ಹಲ್ಲುಗಳನ್ನು ತೊಳೆಯಿರಿ. ನಂತ್ರ ತಣ್ಣನೆ ನೀರಿನಲ್ಲಿ ಬಾಯನ್ನು ಸ್ವಚ್ಛಗೊಳಿಸಿಕೊಳ್ಳಿ. ಹೀಗೆ ಕೆಲ ದಿನಗಳವರೆಗೆ ಮಾಡಿದರೆ ಹಲ್ಲುಗಳು ಬಿಳಿಯಾಗಿ ಹಲ್ಲುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ.