ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲು ಹೀಗೆ ಮಾಡಿ ..!

0
103

ಗ್ರಹ ದೋಷದಿಂದ ಸಣ್ಣಸಣ್ಣ ಘಟನೆ ವೈವಾಹಿಕ ಜೀವನದಲ್ಲಿ ದೊಡ್ಡ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಹಾಗೂ ಗುರು ದುರ್ಬಲವಾಗಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಡುತ್ತದೆ. ದಂಪತಿ ದೂರವಾಗ್ತಾರೆ. ಹೀಗಾಗಿ ದಾಂಪತ್ಯ ಜೀವನ ಉತ್ತಮವಾಗಿರಲು ಈ ನಿಯಮಗಳನ್ನು ಪಾಲಿಸಬೇಕೆಂದು ಜೋತಿಷ್ಯಶಾಸ್ತ್ರ ಸಲಹೆ ನೀಡುತ್ತದೆ.

• ಮಲಗುವ ಕೋಣೆಯಲ್ಲಿ ಎಂದೂ ದೇವರ ಫೋಟೋವನ್ನು ಇಡಬಾರದು.

• ಗಂಡನ ಮನೆಯಲ್ಲಿ ನೀಡಿದ ಹಾಸಿಗೆಯನ್ನು ಮಲಗಲು ಬಳಸಬೇಕು.

• ಜಾತಕದ ಪ್ರಕಾರ ಪತಿ, ಪತ್ನಿ ಹರಳು, ವಜ್ರವನ್ನು ಧರಿಸಬೇಕು.

• ಪತ್ನಿ ಬಂಗಾರ ಹಾಗೂ ಪತಿ ಬೆಳ್ಳಿ ಉಂಗುರವನ್ನು ಧರಿಸಬೇಕು.

• ಶುಕ್ರವಾರ ಪತಿ-ಪತ್ನಿ ಶಾಪಿಂಗ್‍ಗೆ ಹೋಗಬೇಕು. ಅಲ್ಲಿ ಗುಲಾಬಿ ಅಥವಾ ಬಿಳಿ ಹೂವನ್ನು ಖರೀದಿಸಿ ತಂದು ಅದನ್ನು ಬೆಡ್ ರೂಮಿನಲ್ಲಿ ಇಡಬೇಕು.

• ಶುಕ್ರವಾರ ಸುಗಂಧ ದ್ರವ್ಯವನ್ನು ಹಚ್ಚಿಕೊಳ್ಳಬೇಕು.

• ಶುಕ್ರವಾರ ಸಿಹಿ ತಿಂಡಿಯನ್ನು ದೇವಿಗೆ ಅರ್ಪಿಸಿ ನಂತ್ರ ಪ್ರಸಾದದ ರೂಪದಲ್ಲಿ ಅದನ್ನು ಸೇವಿಸಬೇಕು. ಈ ದಿನ ಹುಳಿ ಪದಾರ್ಥವನ್ನು ಸೇವಿಸಬಾರದು.

LEAVE A REPLY

Please enter your comment!
Please enter your name here