ಮಲಗುವ ಮಂಚದ ಕೆಳಗಡೆ ಈ ವಸ್ತುಗಳನ್ನು ಇಡಬೇಡಿ..!

0
903

ಮನೆಯಲ್ಲಿ ಸುಖ-ಶಾಂತಿ ನೆಲೆಸಲು ಕೆಲವೊಂದು ನಿಯಮಗಳನ್ನು ಪಾಲಿಸುವುದು ಒಳಿತು. ಆದರೆ ವಿಚಿತ್ರವೆಂದರೆ ಮನೆ ಸೌಂದರ್ಯ ಹೆಚ್ಚಿಸಲು ನಾವು ತರುವ ಕೆಲವು ವಸ್ತುಗಳು ನಮ್ಮ ಮನೆಯ ಸಂತೋಷವನ್ನು ಹಾಳು ಮಾಡುತ್ತದೆ. ಆ ವಸ್ತುಗಳು ವಾಸ್ತು ದೋಷಕ್ಕೆ ಅದು ಕಾರಣವಾಗುತ್ತದೆ. ಹಾಗಾಗಿ ಕೆಲವೊಂದು ವಸ್ತುಗಳನ್ನು ಅಪ್ಪಿತಪ್ಪಿಯೂ ಮನೆಗೆ ತರಬಾರದು.

• ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿರುವ ಹಾಲಿನ ಪಾತ್ರೆ ಸದಾ ಮುಚ್ಚಿರಬೇಕು. ಹಾಲಿನ ಪಾತ್ರೆಯನ್ನು ತೆರೆದಿಡಬಾಡರು. ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ.

• ರಾಮಾಯಣ ಹಾಗೂ ಮಹಾಭಾರತ ಯುದ್ಧದ ಫೋಟೋಗಳನ್ನು ಮನೆಗೆ ತರಬೇಡಿ.

• ದಾನ ಅಥವಾ ದೇವರ ಪೂಜೆಗಾಗಿ ತಂದ ವಸ್ತುಗಳನ್ನು ಅನೇಕ ದಿನಗಳ ಕಾಲ ಮನೆಯಲ್ಲಿ ಇಡಬೇಡಿ. ದೇವರ ಹಾಳಾದ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು.

• ಮಲಗುವ ಕೋಣೆಯ ಮಂಚದ ಕೆಳಗೆ ಚಪ್ಪಲಿ, ಶೂ ಇಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ.

• ಬೋನ್ಸಾಯಿ ಹಾಗೂ ಮುಳ್ಳಿನ ಗಿಡವನ್ನು ಮನೆಯೊಳಗೆ ಎಂದೂ ಇಡಬೇಡಿ.

• ಉತ್ತರ ಪೂರ್ವ ದಿಕ್ಕಿನಲ್ಲಿ ಭಾರದ ಯಾವುದೇ ಮೂರ್ತಿಗಳನ್ನು ಇಡಬೇಡಿ.

• ಹಾಸಿಗೆ ಹಿಂದೆ ಕಬ್ಬಿಣದ ಕಪಾಟು ಇರದಂತೆ ನೋಡಿಕೊಳ್ಳಿ. ಹಾಸಿಗೆ ಬಳಿಯೂ ಕಬ್ಬಿಣದ ವಸ್ತು ಇರಬಾರದು.

• ಮನೆಯ ಮಧ್ಯದಲ್ಲಿ ನೀರಿನ ಟ್ಯಾಂಕ್, ಹ್ಯಾಂಡ್ ಪಂಪ್ ಸೇರಿದಂತೆ ನೀರಿನ ಮೂಲ ಇರಬಾರದು

LEAVE A REPLY

Please enter your comment!
Please enter your name here