ಯಾವುದೇ ಕಾರಣಕ್ಕೂ ಕನ್ನಡ ಚಿತ್ರಗಳನ್ನು ಕಡೆಗಣಿಸಬೇಡಿ ; ನಟಿ ಪ್ರಿಯಾಮಣಿ

0
241

ಕಳೆದ ವಾರ ಕನ್ನಡ ಚಿತ್ರರಂಗದಲ್ಲಿ ಏಳು ಚಿತ್ರಗಳು ಬಿಡುಗಡೆಯಾಗಿದ್ದವು.. ಇದರಲ್ಲಿ ಉಡುಂಬಾ’, ‘ನನ್ನ ಪ್ರಕಾರ’, ‘ಕಲ್ಪನಾ ವಿಲಾಸಿ’, ‘ನನ್ನ ಪ್ರಕಾರ’ ಹಾಗೂ ‘ಫ್ಯಾನ್’ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿದ್ದವು.. ಇಂದು ತೆಲುಗಿನ ಬಿಗ್ ಬಜೆಟ್ ಸಿನಿಮಾ ಸಾಹೋ ಬಿಡುಗಡೆಯಾಗಿದೆ ಈ ಸಾಹೋ ಸಿನಿಮಾದಿಂದ ಸಾಕಷ್ಟು ಕನ್ನಡ ಸಿನಿಮಾಗಳನ್ನು ತೆಗೆಯಲಾಗಿದೆ.. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತದ್ದ ನನ್ನ ಪ್ರಕಾರ ಚಿತ್ರವನ್ನು ಸಾಕಷ್ಟು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ನಿಂದ ತೆಗೆಯಲಾಗಿದೆ ..

ಅಚ್ಚರಿ ಏನೆಂದರೆ ಕನ್ನಡದಲ್ಲಿ ಡಬ್ ಆಗದೇ ಇದ್ದರೂ ಸಾಹೋ ಚಿತ್ರಕ್ಕೆ ಕರ್ನಾಟಕದಲ್ಲಿ 600 ಸ್ಕ್ರೀನ್ ಕೊಡಲಾಗಿದೆ.. ಇದರಿಂದ ಉತ್ತಮ ಪ್ರದರ್ಶನಗೊಳ್ಳುತ್ತಿದ್ದ ಕೆಲವು ಕನ್ನಡ ಸಿನಿಮಾಗಳನ್ನು ಎತ್ತಂಗಡಿ ಮಾಡಲಾಗಿದೆ.. ಅಷ್ಟೇ ಅಲ್ಲದೆ ಕನ್ನಡದ ಹೆಮ್ಮೆ ಕುರುಕ್ಷೇತ್ರ ಚಿತ್ರಕ್ಕೆ ಸಾಹೋ ಸಿನಿಮಾದಿಂದ ಪೆಟ್ಟಾಗಿದೆ..
ಇದರಿಂದ ಕನ್ನಡದ ಸಿನಿಮಾಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎನ್ನಲಾಗಿದ್ದರೂ ಸಹ ಪರಭಾಷಾ ಸಿನಿಮಾಗಳ ಹಾವಳಿ ಇನ್ನೂ ಕಡಿಮೆಯಾಗುವಂತೆ ಕಾಣುತ್ತಿಲ್ಲ…

ಇದನ್ನು ಕುರಿತು ನಟಿ ಪ್ರಿಯಾಮಣಿ ಅವರು ಮಾತನಾಡಿದ್ದಾರೆ..’ನಮ್ಮ ಸಿನಿಮಾ’ ‘ಕನ್ನಡ ಸಿನಿಮಾ’ ‘ನನ್ನ ಪ್ರಕಾರ’ವು ಪ್ರೇಕ್ಷಕ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದ್ದು, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ, ಪರಭಾಷಾ ಸಿನಿಮಾಗಳ ಹಾವಳಿಯಿಂದಾಗಿ ಥಿಯೇಟರ್/ ಮಲ್ಟಿಪ್ಲೆಕ್ಸ್ ಸಂಖ್ಯೆ ಕಡಿಮೆ ಮಾಡಿದ್ದಾರೆ. ದಯವಿಟ್ಟು ಪ್ರೇಕ್ಷಕರು ಹೆಚ್ಚಿನ ಮಟ್ಟಕ್ಕೆ ಸಿನಿಮಾ ನೋಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ

LEAVE A REPLY

Please enter your comment!
Please enter your name here