ಡಿಕೆ ರವಿ ಪತ್ನಿ ಕುಸುಮಾ ಆರ್ ಆರ್ ನಗರ ಅಖಾಡಕ್ಕೆ

0
136

ಬೆಂಗಳೂರು: ರಾಜ್ಯದ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಗೆ ಕಾಂಗ್ರೆಸ್ ಅಭ್ಯರ್ಥಿ ಗಳನ್ನ ಘೋಷಿಸಿದ್ದು, ನಿಗಧಿಯಂತೆ ರಾಜರಾಜೇಶ್ವರಿನಗರಕ್ಕೆ ಐಎಎಸ್ ಅಧಿಕಾರಿ ದಿ. ಡಿಕೆ ರವಿ ಪತ್ನಿ ಕುಸುಮಾ ರವಿ ಕೈ ಹಸ್ತು ಎಂದಿದೆ.

ರಾಜ್ಯದಲ್ಲಿ ಉಪ ಚುನಾವಣೆಯ ಕಾವೇರುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಜೊತೆಗೆ ಸ್ಥಳೀಯ ಪಕ್ಷವಾದ ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದರ ನಡುವೆ ಕಾಂಗ್ರೆಸ್ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ನಿಗಧಿಯಂತೆ ಅಸಿಸ್ಟೆಂಟ್ ಪ್ರೊಫೆಸರ್, ಡಾಟರ್ ಆಫ್ ಹನುಮಂತರಾಯಪ್ಪ, ವೈಫ್ ಆಫ್ ಡಿಕೆ ರವಿಗೆ ಮಣೆ ಹಾಕಿದೆ.

ಚಿಕ್ಕಂದಿನಿಂದಲೂ ರಾಜಕೀಯ ಕುಟುಂಬದಲ್ಲೇ ಬೆಳೆದಿರುವ ಕುಸುಮ, ತಂದೆ ಹನುಮಂತರಾಯಪ್ಪ ಅವರ ಗರಡಿಯಲ್ಲಿ ಪಳಗಿದ್ದಾರೆ. ಪ್ರಾಥಮಿಕ ವಿಧ್ಯಾಭ್ಯಾಸವನ್ನು ಬೆಂಗಳೂರಿನಲ್ಲೇ ಮುಗಿಸಿರುವ ಕುಸುಮ ಉನ್ನತ ವಿಧ್ಯಾಭ್ಯಾಸಕ್ಕೆ ಅಮೆರಿಕಾದ ಯುನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್‌‌ ಬೋಸ್ಟನ್ ವಿಶ್ವವಿದ್ಯಾನಿಲಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ವಿಷಯದಲ್ಲಿ ಎಂ ಎಸ್ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ವಿಧ್ಯಾಭ್ಯಾಸ ಮುಗಿಸಿದ ಬಳಿಕ ಹುಟ್ಟೂರಾದ ಬೆಂಗಳೂರಿಗೆ ಆಗಮಿಸಿದ ಕುಸುಮ ಐಎಎಸ್ ಅಧಿಕಾರಿ ಡಿಕೆ ರವಿಯವರನ್ನು ವಿವಾಹವಾಗುತ್ತಾರೆ. ಡಿಕೆ ರವಿ ನಿಧನ ನಂತರ ಕುಸುಮ, ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಆರ್ ಆರ್ ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಫರ್ ಬಂದಾಗ ಕುಸುಮ ಒಪ್ಪಿಕೊಂಡು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ.

ಹೆಸರು ಘೋಷಣೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಸಂಸದ ಡಿಕೆ ಸುರೇಶ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹನುಮಂತರಾಯಪ್ಪ ಅವರ ನಿವಾಸಕ್ಕೆ ತೆರಳಿ ಕುಸುಮ ಅವರನ್ನು ಕಾಂಗ್ರೆಸ್ ಸದಸ್ಯತ್ವ ಪಡೆದುಕೊಳ್ಳುವಂತೆ ಆಹ್ವಾನ ನೀಡಿದ್ದರು. ಬಳಿಕ ಕುಸುಮ ಹಾಗೂ ಹನುಮಂತರಾಯಪ್ಪ ಅವರು ಕೆಪಿಸಿಸಿ ಕಚೇರಿಗೆ ಕುಟುಮ ಸಮೇತವಾಗಿ ಆಗಮಿಸಿ ಕೆಪಿಸಿಸಿ ಸದಸ್ಯತ್ವ ಪಡೆದುಕೊಂಡರು. ಆರ್ ಆರ್ ನಗರದಲ್ಲಿ ಒಕ್ಕಲಿಗ ಮತಗಳೆ ಒಂದು ಲಕ್ಷವಿದ್ದು ಗೆಲವಿಗೆ ಈ ಮತಗಳೆ ನಿರ್ಣಾಯಕ ಎನ್ನಲಾಗಿದೆ. ಜೊತೆಗೆ ಕುಸುಮ ಒಕ್ಕಲಿಗ ಸಮುದಾಯದವರಾಗಿದ್ದು ಹೈಕಮಾಂಡ್ ಇಂದು ಕುಸುಮಗೆ ಟಿಕೇಟ್ ಘೋಷಣೆ ಮಾಡಿದೆ. ಟಿಕೇಟ್ ಘೋಷಣೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ನನ್ನ ತಂದೆ ಹನುಮಂತರಾಯ‌ಪ್ಪ ನವರು ಮಾಡಿರುವ ಸೇವೆಯನ್ನು ಗುರುತಿಸಿ ನನಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ‌ ಮಾಡಿಕೊಟ್ಟ ಕೆಪಿಸಿಸಿ ಅಧ್ಯಕ್ಷರಾದ ಶ್ರೀ‌ ಡಿ.ಕೆ ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ, ಸಂಸದರಾದ‌ ಶ್ರೀ ಡಿ.ಕೆ ಸುರೇಶ್ ಹಾಗೂ ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲಾ ನಾಯಕರುಗಳಿಗೂ ಆಭಾರಿಯಾಗಿದ್ದೇನೆ.
ಕ್ಷೇತ್ರದ ಎಲ್ಲಾ ಮುಖಂಡರುಗಳ ಹಾಗೂ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ವಿಜಯ ಪತಾಕೆ ಹಾರುವಂತೆ ಮಾಡುವ ಜವಾಬ್ದಾರಿ ನನ್ನದು.ನನ್ನ ದೊಡ್ಡಪ್ಪನವರು ಕೋವಿಡ್-19 ನಿಂದಾಗಿ ಮೃತಪಟ್ಟಿರುವ ಕಾರಣ ಈ ಕ್ಷಣದಲ್ಲಿ ಪತ್ರಕರ್ತಮಿತ್ರರಿಗೆ ಪ್ರತಿಕ್ರಿಸುವುದಕ್ಕಾಗಲೀ, ಕಾರ್ಯಕರ್ತರೊಂದಿಗೆ ಸಂಭ್ರಮಿಸಲಾಗಲೀ ಆಗುತ್ತಿಲ್ಲ ಎಂದು‌ ತಿಳಿಸಿದರು. ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಅಖಾಡಕ್ಕಿಳಿದಿರುವ ಕುಸುಮ ಬಹಳ ಉತ್ಸುಕರಾಗಿದ್ದಾರೆ.

LEAVE A REPLY

Please enter your comment!
Please enter your name here