ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡೆಸಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ, ತೆಲುಗು ತಮಿಳು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮೆರೆದು ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯಾಗಿ ರಾರಾಜಿಸಿದವರು ಮೋಹಕತಾರೆ ರಮ್ಯಾ. ಆದರೆ ಈ ಪದ್ಮಾವತಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಅವರ ಅಭಿಮಾನಿಗಳು ಮಾತ್ರ ಇಂದಿಗೂ ಕೂಡ ಅವರನ್ನು ಬಿಟ್ಟು ಕೊಟ್ಟಿಲ್ಲ. ಮತ್ತೊಮ್ಮೆ ಸಿನಿ ಜರ್ನಿ ಪ್ರಾರಂಭಿಸಿಲಿ ಎಂದು ಎದುರು ನೋಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ‘ಯಾರೇ ಬರಲಿ ಯಾರೇ ಇರಲಿ ನಿನ್ನಂತೆ ಯಾರೂ ಇಲ್ಲ’, ಎನ್ನುವ ಮಾತು ಅವರ ಫೋಟೋ ಜೊತೆ ಹರಿದಾಡುತ್ತಲೇ ಇವೆ. ಇದೀಗ ಈ ಎವರ್ ಗ್ರೀನ್ ಬ್ಯೂಟಿ ಇದ್ದಕ್ಕಿದ್ದ ಹಾಗೆ ತಮ್ಮ ವಿವಾಹದ ಕುರಿತು ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.
ತಮ್ಮಗೆಲ್ಲರಿಗೂ ತಿಳಿದಿರುವ ಹಾಗೆ ಮೋಹಕತಾರೆ ರಮ್ಯಾ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ನಿರತರಾಗಿರುವ ಸಮಯದಲ್ಲೇ ಚಿತ್ರರಂಗವನ್ನು ತ್ಯಜಿಸಿ ರಾಜಕೀಯಕ್ಕೆ ಧುಮುಕಿದರು. ಅಷ್ಟು ಮಾತ್ರವಲ್ಲದೆ ಮಂಡ್ಯ ಲೋಕಸಭಾ ಚುನಾವಣೆಯಲ್ಲೂ ಕೂಡ ನಿಂತು ಬಿಟ್ಟರು. ಆಕೆಯ ನೆಚ್ಚಿನ ಅಭಿಮಾನಿಗಳು ರಮ್ಯಾಳನ್ನು ಗೆಲ್ಲಿಸಿ ಒಮ್ಮೆ ಎಂ ಪಿ ಯಾಗಿ ಕೂಡ ಮಾಡಿ ಬಿಟ್ಟರು. ಆದರೆ ಮತ್ತೊಂದು ಬಾರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ಅವರ ಮಾತುಗಳೆ ಅವರಿಗೆ ಮುಳ್ಳಾಗಿ ಬಿಟ್ಟಿತು. ಗೆದ್ದ ಜಾಗದಲ್ಲೇ ಹೀನಾಯ ಸೋಲು ಅನುಭವಿಸಿದರು. ಇದಾದ ಬಳಿಕ ರಮ್ಯಾ ಕಾಂಗ್ರೆಸ್ ನ ಐ ಟಿ ಸೆಲ್ ಮುಖ್ಯಸ್ಥೆಯಾದರು. ಆದರೆ ಆ ಸಮಯದಲ್ಲಿ ಕರುನಾಡ ಅಭಿನಮಾನಿಗಳು ತಿರುಗಿ ಬಿದ್ದರು. ನೆಟ್ಟಿಗರೆಲ್ಲಾ ರೊಚ್ಚಿಗೆದ್ದರು. ಮೋಹಕತಾರೆ ರಮ್ಯಾ ಹೆಸರು ಮಾಡುವುದಕ್ಕಿಂತ ಹೆಚ್ಚಾಗಿ ಟ್ರೋಲ್ ಗಳಿಗೆ ಹಾಗೂ ಟೀಕೆಗಳಿಗೆ ಒಳಗಾಗಿ ಬಿಟ್ಟರು.
ಇದೆಲ್ಲದರಿಂದ ಬೇಸತ್ತ ಈ ಪದ್ಮಾವತಿ, ಕಾಂಗ್ರೆಸ್ ಐ ಟಿ ಸೆಲ್ ನ ಮುಖ್ಯಸ್ಥೆ ಎಂದು ತಮ್ಮ ಸಾಮಜಿಕ ಜಾಲತಾಣದ ಖಾತೆಯಲ್ಲಿ ಹಾಕಿಕೊಂಡಿದ್ದಂತಹ ಸ್ಟೇಟಸ್ ಅನ್ನೂ ತೆಗೆದು ಹಾಕಿ ಬಿಟ್ಟರು. ಆದರೆ ಇದನ್ನು ಯಾಕೆ ತೆಗೆದು ಹಾಕಿದರು ಎಂಬುವ ಕಾರಣ ಮಾತ್ರ ಎಲ್ಲಿಯ ತನಕ ಯಾರಲ್ಲಿಯೂ ಹೇಳಿ ಕೊಂಡಿಲ್ಲ. ಹಾಗೂ ಯಾವ ಮಾಧ್ಯಮದ ಮುಂದೆಯೂ ಕಾಣಿಸಿಕೊಂಡಿಲ್ಲ.
ಇದೆಲ್ಲದರ ನಡುವೆ ರಮ್ಯಾ ಅವರು ಅಮೇರಿಕಾ ಹುಡುಗನೊಂದಿಗೆ ಮದುವೆಯೂ ನಿಶ್ಚಯವಾಗಿದೆ ಎಂಬ ಸುದ್ದಿ ಜೋರಾಗಿಯೇ ಕೇಳಿ ಬಂದಿತ್ತು. ಆದರೆ ಮೂಲಗಳ ಪ್ರಕಾರ ರಮ್ಯಾ ರಾಜಕೀಯಕ್ಕೆ ಧುಮುಕಿದ ಬಳಿಕ ಮದುವೆಯೂ ಕೂಡ ಮುರಿದು ಹೋಯಿತು ಎಂದು ಹೇಳಲಾಗಿದೆ. ಇವೆಲ್ಲಾ ನಡೆದ ಮೇಲೆ ನಟಿ ರಮ್ಯಾ, ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದು ಯಾರಿಗೂ ತಿಳಿದಿರಲಿಲ್ಲ. ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿ ಬಿಟ್ಟಿದ್ದರು. ಆದರೆ ಇದೀಗ ಅಭಿಮಾನಿಗಳಿಗೆ ಸಂತಸದ ಸುದ್ಧಿಯೊಂದು ಹೊರ ಬಂದಿದ್ದು, ಬಹಳಷ್ಟು ತಿಂಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ರಮ್ಯಾ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕನಸಿನ ರಾಣಿ ಫೋಟೋಗಳನ್ನು ನೋಡಿದ ಅವರ ನೆಚ್ಚಿನ ಅಭಿಮಾನಿಗಳು ರಮ್ಯಾ ಮತ್ತೆ ಚಿತ್ರರಂಗಕ್ಕೆ ಮರಳುತ್ತಾರೆ. ಸಿನಿಮಾಗಳಲ್ಲಿ ನಟಿಸುತ್ತಾರೆ ಎಂಬುವಂತಹ ಭರವಸೆಯನ್ನು ಹೊಂದಿದ್ದರು. ಅಷ್ಟು ಮಾತ್ರವಲ್ಲದೆ ದಯವಿಟ್ಟು ಮತ್ತೆ ಚಿತ್ರರಂಗಕ್ಕೆ ಮರಳುವಂತೆ ಮನವಿಯನ್ನೂ ಕೂಡ ಮಾಡಿಕೊಂಡಿದ್ದರು. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ರಮ್ಯಾ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.
ಮೋಹಕತಾರೆ ರಮ್ಯಾ ಚಿತ್ರರಂಗ, ವಿವಾಹ, ರಾಜಕೀಯ ಇವೆಲ್ಲದರಿಂದಲೂ ದೂರಾಗಿ ವೇದಾಂತಿ ಆಗಲು ಹೊರಟಿದ್ದಾರಂತೆ. ಈ ವಿಚಾರ ಕುರಿತು ಖುದ್ದು ರಮ್ಯಾ ಅವರೇ ಇಂಗ್ಲೀಷ್ ನ ವೆಬ್ಸೈಟ್ ಒಂದಕ್ಕೆ ಮಾಹಿತಿ ನೀಡಿದ್ದು “ರಾಜಕೀಯವಾಗಲಿ, ಸಿನಿಮಾವಾಗಲಿ,ಎರಡೂ ಸಹ ನನಗೆ ಸಾಕು. ನಾನು ಒಂಟಿಯಾಗಿ ಇದ್ದ ಕಾರಣ ನನ್ನನ್ನು ನಾನು ಕಂಡುಕೊಳ್ಳಲು ಸಾಧ್ಯವಾಗಿದೆ. ನಾನು ಅಂತರ್ಮುಖಿ. ನನ್ನ ಬಗ್ಗೆ ನಾನು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ.. ಅಷ್ಟೇ ಅಲ್ಲ ಜನರೊಟ್ಟಿಗೆ ಇರುವಂತಹ ಕೆಲಸ ಮಾಡುವುದು ಸಹ ನನ್ನಿಂದ ಸಾಧ್ಯವಿಲ್ಲ. ಅದು ನನಗೆ ಕಷ್ಟ. ನಾನು ಎಂದೂ ಸಹ ನಟಿಯಾಗಲಿ, ರಾಜಕಾರಣಿಯಾಗಲಿ ಆಗಲು ಇಷ್ಟ ಪಟ್ಟಿರಲಿಲ್ಲ’ ಎಂದು ಹೇಳಿದ್ದಾರೆ.
ಇನ್ನು ನಟಿ ರಮ್ಯಾ ಅವರಿಗೆ ಈಗಲೂ ಕೂಡ ರಾಜಕೀಯವೆಂಬುದು ಬಗಳ ಆಸಕ್ತಿಕರ ವಿಚಾರ ಅಂತ ಅನಿಸುತ್ತಿಲ್ಲವಂತೆ. ಆದರೆ ಅವರ ಈ ಎರಡೂ ಕೆಲಸಗಳು ಸಹ ಜನರೊಟ್ಟಿಗಿನ ಕೆಲಸಗಳಾಗಿದ್ದು ಈಗಲೂ ಕೂಡ ಆಶ್ಚರ್ಯವಿದೆ ಎಂದು ತಿಳಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ಇವೆರಡರಿಂದಲೂ ದೂರಾಗಿರುವುದರಿಂದ ರಮ್ಯಾ ಇದೀಗ ಸಂತೋಷವಾಗಿದ್ದಾರಂತೆ. ಅವರ ಜೀವನದ ಈ ಹೊಸ ಅಧ್ಯನದ ಬಗ್ಗೆ ರಮ್ಯಾ, ಎಕ್ಸೈಟ್ ಕೂಡ ಆಗಿದ್ದಾರಂತೆ. ಇನ್ನೂ ಅವರಿಗೆ ಭವಿಷ್ಯದ ಬಗ್ಗೆ ನನಗೆ ಏನೂ ತಿಳಿದಿಲ್ಲ ಹಾಗೂ ಭವಿಷ್ಯದ ಬಗ್ಗೆ ಯಾವುದೇ ಯೋಜನೆಯನ್ನು ಕೂಡ ರೂಪಿಸಿ ಕೊಂಡಿಲ್ಲವಂತೆ. ಏಕಾಂತದಿಂದ ಅವರ ನಿಜವಾದ ರೂಪ ಕಂಡುಕೊಳ್ಳಲು ಸಾಧ್ಯವಾಗಿದೆ. ‘ನಾನು ಸದ್ಯಕ್ಕೆ ಬ್ರೇಕ್ ನಲ್ಲಿ ಇದ್ದೀನಿ. ರಿಲ್ಯಾಕ್ಸ್ ಮಾಡುತ್ತಿದ್ದೇನೆ. ನಾನು ನನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳುವತ್ತ ಗಮನಹರಿಸುತ್ತಿದ್ದೇನೆ’. ಎಂದು ತಿಳಿಸಿದ್ದಾರೆ.
ಇದರೆಲ್ಲರ ಜೊತೆಗೆ ರಮ್ಯಾ ಮೂರು ವರ್ಷದ ವೇದಾಂತದ ಕೋರ್ಸ್ ಗೆ ಸೇರಿಕೊಂಡಿದ್ದಾರೆ. ಇದೀಗ ಮೊದಲ ವರ್ಷದಲ್ಲಿದ್ದು ಕಲಿಯುತ್ತಿದ್ದಾರೆ. ಇನ್ನು ಕೆಲ ತಿಂಗಳಲ್ಲಿ ಮೊದಲ ವರ್ಷ ಮುಗಿಯಲಿದ್ದು, ಸಂಗೀತ ಕೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗೆಯೇ ಪೇಂಟಿಂಗ್ ಕೂಡ ಮಾಡುತ್ತಿದ್ದಾರೆ.
ಇದರ ಜೊತೆಗೆ ರಾಜಕೀಯ ವಿಚಾರದ ಕುರಿತು ಮಾತನಾಡಿರುವ ರಮ್ಯಾ, “ನನ್ನನ್ನು ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಆದರೆ ನಿಜ ಹೇಳಬೇಕು ಎಂದರೆ ನಾನೇ ಆ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ.. ಆದರೆ ನನ್ನ ಬಾಸ್ ರಾಹುಲ್ ಗಾಂಧಿ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಅದು ಈಗಲೂ ಅವರ ಬಳಿ ಇದೆ. ನಾನು ಕೆಲಸ ಮಾಡಿದಷ್ಟು ದಿನ ಬಹಳ ಇಷ್ಟ ಪಟ್ಟು ಕೆಲಸ ಮಾಡಿದ್ದೇನೆ. ರಾಹುಲ್ ಗಾಂಧಿ ಅವರು ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಬೆಂಬಲಿಸಿದ್ದಾರೆ. ಚುನಾವಣೆ ವರೆಗೂ ನಾನು ಆ ಕೆಲಸದಲ್ಲಿದ್ದೆ ಕಾರಣ ನನ್ನ ಕಮಿಟ್ಮೆಂಟ್ ಪೂರ್ಣಗೊಳಿಸಬೇಕಾಗಿತ್ತು.. ಅದಕ್ಕಾಗಿ.. ದೇಶದ ಧ್ವಜ ಹಿಡಿಯುವುದು ಅಥವಾ ಗಡಿಯಲ್ಲಿ ನಿಲ್ಲುವುದು ಮಾತ್ರ ದೇಶಪ್ರೇಮ ತೋರುವ ದಾರಿಯಲ್ಲ.. ತಪ್ಪುಗಳು ನಡೆದಾಗ ಅದನ್ನು ಭಯವಿಲ್ಲದೇ ತೋರುವುದೇ ನಿಜವಾದ ದೇಶಪ್ರೇಮ.. ನಾನು ಈಗಲೂ ಜವಾಬ್ದಾರಿಯುತ ಪ್ರಜೆ ಈಗಲೂ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತುತ್ತೇನೆ” ಎಂದು ಹೇಳಿದ್ದಾರೆ..