ಅತಿಯಾಗಿ ಪ್ರೀತಿಸಿದ್ದಕ್ಕೆ ಗಂಡನಿಗೆ ಡೈವೋರ್ಸ್ ಕೊಟ್ಟ ಪತ್ನಿ!

0
375

ಪ್ರತಿಯೊಬ್ಬ ಹೆಣ್ಣಿಗೂ ಕೂಡ ತನ್ನ ಗಂಡ ತಮ್ಮನ್ನ ಅತಿಯಾಗಿ ಪ್ರೀತಿಸ್ಬೇಕು ಎಂಬ ಆಸೆ ಇರುತ್ತೆ . ಆದ್ರೆ ಇಲ್ಲಿ ಗಂಡನ ಅತಿಯಾದ ಪ್ರೀತಿಯೇ ಪತ್ನಿಗೆ ಬೇಸರವನ್ನ ತರಿಸಿದೆ . ನನ್ನನ್ನ ಇಷ್ಟೊಂದು ಚೆನ್ನಾಗಿ ನೋಡಿಕೊಳ್ಳುವ ಗಂಡ ಬೇಡ ಅಂತ ಈ ಪತ್ನಿ ಕೋರ್ಟ್ ಮೆಟ್ಟಿಲನ್ನ ಹತ್ತಿದ್ದಾಳೆ . ಇದು ನಿಮಗೆ ಅಚ್ಚರಿ ಎನಿಸಿದರೂ ನಿಜ . ಹೌದು ಕಳೆದ ಒಂದು ವರ್ಷದ ಹಿಂದೆಯಷ್ಟೇ ಅದ್ದೂರಿಯಾಗಿ ಮದುವೆಯಾದ ಈ ಜೋಡಿ ಸುಖ ಜೀವನವನ್ನ ನಡೆಸುತ್ತಿದ್ರು . ಆದ್ರೆ ಈ ಸುಖವಾದ ಜೀವನವೇ ಈ ದಂಪತಿಗೆ ವಿಷವಾಗಿ ಪರಿಣಮಿಸಿದೆ .

ಈಗ ಪತ್ನಿ ಕೊಟ್ಟ ದೂರು ಏನು ಗೊತ್ತಾ ” ನನ್ನ ಗಂಡ ನನಗೆ ಯಾವುದೇ ರೀತಿಯ ನೋವು ಆಗ ಬಾರದು ಅಂತ ಕಣ್ಣಲ್ಲಿ ಕಣ್ಣಿಟ್ಟು , ನನ್ನ ನೋಡಿಕೊಳ್ತಾರೆ . ಮನೆಯ ಯಾವುದೆ ಕೆಲಸಗಳನ್ನ ಮಾಡೋದಕ್ಕೆ ಬಿಡಲ್ಲ . ಮನೆ ಕೆಲಸವನ್ನೆಲ್ಲಾ ನನ್ನ ಗಂಡನೆ ಮಾಡ್ತಾರೆ . ನಾನು ಅವ್ರ ಜೊತೆ ಸಿಟ್ಟುಗೊಂಡು ಜಗಳ ಮಾಡಿದರು ಸಹ , ನನ್ನದೇ ತಪ್ಪು ನಿನ್ನ ತಪ್ಪೇನು ಇಲ್ಲ ಅಂತ ಹೇಳಿ ಸುಮ್ಮನಾಗುತ್ತಾರೆ . ಇವರು ನನ್ನ ಮುಂದೆ ಮಾತ್ರ ಈ ರೀತಿ ಮಾಡುತ್ತಾರೋ ಅಥವಾ ಇವರು ಇರೋದೆ ಹೀಗೆನಾ ಅಂತ ನಾನು ಪರೀಕ್ಷೆ ಮಾಡಿದಾಗ , ಅವರು ಇರೋದೆ ಹಾಗೆ , ಎಂಬುದು ನನಗೆ ತಿಳಿಯಿತು .

ಇದೇ ನನಗೆ ಮುಳುವಾಗಿದೆ , ಅವರ ಉಸಿರುಗಟ್ಟಿಸುವ ಪ್ರೀತಿಯಿಂದ ನನ್ನ ಜೀವನ ನರಕವಾಗಿದೆ , ಅಂತ ಹೇಳಿ ಕೊರ್ಟ್ ಮೆಟ್ಟಿಲನ್ನ ಹತ್ತಿ ನನಗೆ ವಿಚ್ಚೇದನ ಕೊಡಿಸಿ ಅಂತ ಕೇಳಿಕೊಂಡಿದ್ದಾಳೆ . ಈ ಘಟನೆ ನಡೆದದ್ದು ಅರಬ್ ನಲ್ಲಿ . ಪತ್ನಿಗೆ ಇದು ಅತಿಯಾದ ವರ್ತನೆಯೆನಿಸಿದ್ದು ಮುಕ್ತಿ ಬೇಕು ಅಂತ ಕೇಳುತ್ತಿದ್ದಾಳೆ . ಆದ್ರೆ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಮದುವೆಯಾದ ಹೊಸತರಲ್ಲಿ ಇಂತಹ ತಪ್ಪು ನಡೆಯೋದು ಸಹಜ.

ಇದನ್ನ ನಿವೇ ಕುಳಿತು ಬಗೆಹರಿಸಿಕೊಳ್ಳಿ ಅಂತ ತಿಳಿಸಿದೆ . ಏನೇ ಆಗಿದ್ರು ಗಂಡನ ಹಿಂಸೆ ತಾಳಲಾರದೆ ಕೋರ್ಟ್ ಮೆಟ್ಟಿಲೇರುವ ಪತ್ನಿಯರನ್ನ ನೋಡಿರ್ತೀವಿ ಆದ್ರೆ ಗಂಡನ ಅತಿಯಾದ ಪ್ರೀತಿಯಿಂದ ನೊಂದ ಪತ್ನಿಯನ್ನ ಇದೇ ಮೊದಲ ಬಾರಿಗೆ ನೋಡ್ತಾ ಇರೋದು . ಈ ಬಗ್ಗೆ ನಿವೇನಂತಿರಾ ಎಂಬುದನ್ನ ಕಾಮೆಂಟ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here