ನಾಸಾದವರು ಮನುಷ್ಯರಿಗೆ ವಾಸಿಸಲು ಯೋಗ್ಯವಾದ ಗ್ರಹವನ್ನು ಕಂಡು ಹಿಡಿದಿದ್ದಾರೆ. ಇದರ ಬಗೆಗೆ ನಾಸಾ ಮಾಹಿತಿಯನ್ನು ನೀಡಿದೆ ಅನಂತ ಬಾಹ್ಯಾಕಾಶದಲ್ಲಿ 31 ಬೆಳಗಿನ ವರ್ಷಗಳಾಚೆಗೆ ಮಾನವ ವಾಸಿಸುವ ಗ್ರಹ ಇರುವುದಾಗಿ ಹೇಳಿದೆ . ಈ ಗ್ರಹವು ಭೂಮಿಗಿಂತಲೂ ಸುಮಾರು 6 ಪಟ್ಟು ದೊಡ್ಡದಾಗಿರುವುದಾಗಿ ತಿಳಿಸಿದೆ. ನಾಸಾದ ಡ್ಯಾನಿ ಸ್ಟಿಂಗ್ ಎಕ್ಸೋ ಪ್ಲಾನೆಟ್ ಸರ್ವೆ ಸ್ಯಾಟಲೈಟ್ ಈ ಗ್ರಹವನ್ನು ಪತ್ತೆಮಾಡಿದೆ . ಇದಕ್ಕೆ ಜಿಜೆ 357ಡಿ ಎಂದು ನಾಮಕರಣ ಮಾಡಲಾಗಿದೆ . ಇದು ಹೈದ್ರ ನಕ್ಷತ್ರ ಪುಂಜದಲ್ಲಿ ಕುಬ್ಜ ನಕ್ಷತ್ರ ಕಕ್ಷೆಯಲ್ಲಿ ಗ್ರಹ ತಿರುಗುತ್ತಿದೆ. ಈ ಗ್ರಹವು ಮಾನವನ ವಾಸಕ್ಕೆ ಯೋಗ್ಯ ಸ್ಥಳವಾಗಿದ್ದು ಯಥೇಚ್ಛವಾಗಿ ನೀರು ಲಭ್ಯವಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಗ್ರಹವನ್ನು ಪತ್ತೆಮಾಡಿರುವುದರ ಬಗೆಗೆ ಇನ್ಸ್ಟಿಟ್ಯೂಟ್ ನ ಲೀಸಾ ಕಟ್ಟಿ ನಗರ್ ಇದು ತುಂಬಾ ಸಂತೋಷ ತಂದಾ ಸಂಗತಿ ಹಾಗು ಆಸಕ್ತಿದಾಯಕ ಮತ್ತು ಪ್ರೋತ್ಸಾಹದಾಯಕ ವಿಷಯವಾಗಿದೆ ಎಂದಿದ್ದಾರೆ.

ಜೆಜೆ 357 ಡಿ ಗ್ರಹದಲ್ಲಿ ಸರಾಸರಿ ತಾಪಮಾನ 64 ಡಿಗ್ರಿ ಫ್ಯಾರನಹೀಟ್ 53 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ . ಭೂಮಿಯಲ್ಲಿರುವಂತೆ ನೀರು ದ್ರವ ರೂಪದಲ್ಲಿ ಇರಬಹುದು ಎಂದಿದ್ದಾರೆ.
ನಾಸಾ ಅನಂತ ದಿಗಂತದಲ್ಲಿ ಇದ್ದಿರಬಹುದಾದ ಗ್ರಹಗಳನ್ನು ಪತ್ತೆ ಮಾಡುವ ಸಲುವಾಗಿ ‘ ಟಿ ಇಎಸ್ ಎಸ್ ಉಪಗ್ರಹವನ್ನು’ ಉಡಾವಣೆ ಮಾಡಿದೆ ಇದು ಸದ್ಯ ಭೂಮಿಯ ಸೌರಮಂಡಲದಲ್ಲಿರುವ 20 ಗ್ರಹಗಳನ್ನು ಪತ್ತೆ ಮಾಡಿದೆ.
ಮನುಷ್ಯನ ಕಾತುರತೆ ಆವಿಷ್ಕಾರಕ್ಕೆ ಮಿತಿಯೇ ಇಲ್ಲ ಭೂಮಿಯಿಂದ ಮತ್ತೊಂದು ಗ್ರಹದಲ್ಲಿ ಮಾನವನ ವಸಾಹತುಗಳನ್ನು ರೂಪಿಸುತ್ತಿರುವ ಪ್ರಯತ್ನ ನೆನ್ನೆ ಮೊನ್ನೆಯದಲ್ಲ.

ಪ್ರಪ್ರಥಮ ಬಾರಿಗೆ ಜುಲೈ 26 ಸಾವಿರ 969 ರಲ್ಲಿ ನೀಲ್ ಆರ್ಮ್ಸ್ಟ್ರಾಂಗ್ ರವರು ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ್ದರು.