ಕೊನೆಯ ಪಂದ್ಯ ಆಡಿದ 12 ವರ್ಷಗಳ ಬಳಿಕ ವಿದಾಯ ಹೇಳಿದ ಭಾರತೀಯ ಕ್ರಿಕೆಟಿಗ..!

0
866
Loading...

ಸಾಮಾನ್ಯವಾಗಿ ಕ್ರಿಕೆಟ್‍ನಲ್ಲಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗದಿದ್ದರೇ ಕನಿಷ್ಠ 2-3 ವರ್ಷಗಳಲ್ಲಿ ವಿದಾಯ ಘೋಷಿಸುತ್ತಾರೆ. ಆದರೆ ಈ ಭಾರತೀಯ ಆಟಗಾರ ತನ್ನ ಕೊನೆಯ ಏಕದಿನ ಪಂದ್ಯವನ್ನು ಆಡಿದ 12 ವರ್ಷಗಳ ನಂತರ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾನೆ. ಹೌದು, ಹೀಗೆ ಕೊನೆಯ ಪಂದ್ಯವಾಡಿದ 12 ವರ್ಷಗಳ ಬಳಿಕ ವಿದಾಯ ಹೇಳಿದ ಭಾರತೀಯ ಆಟಗಾರ ದಿನೇಶ್ ಮೊಂಗಿಯಾ. ಅವರು ತಮ್ಮ 42 ನೇ ವಯಸ್ಸಿನಲ್ಲಿ ಎಲ್ಲಾ ರೀತಿಯ ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ್ದಾರೆ.

Dinesh Mongia batting for India during the 2nd NatWest Series One Day International between England and India at Lord’s Cricket Ground, London, 29th June 2002. (Photo by Patrick Eagar/Popperfoto via Getty Images/Getty Images)

ಇನ್ನು ದಿನೇಶ್ ಮೊಂಗಿಯಾ ಕೊನೆಯ ಬಾರಿಗೆ 2007 ರಲ್ಲಿ ಢಾಕಾದಲ್ಲಿ ನಡೆದ ಬಾಂಗ್ಲಾದೇಶದೊಂದಿಗಿನ ಏಕದಿನ ಪಂದ್ಯವನ್ನು ಆಡಿದ್ದರು. ಬಳಿಕ ಭಾರತೀಯ ಕ್ರಿಕೆಟ್ ಲೀಗ್‍ಗೆ ಸೇರ್ಪಡೆಗೊಂಡು ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದರು. ಇನ್ನು ಎಡಗೈ ಬ್ಯಾಟ್ಸ್ ಮನ್ ಹಾಗೂ ಸ್ಪಿನ್ನರ್ ಮೊಂಗಿಯಾ ಅವರು ಭಾರತದ 2003 ರ ವಿಶ್ವಕಪ್ ತಂಡದ ಸದಸ್ಯರಾಗಿದ್ದರು. ದಿನೇಶ್ ಮೊಂಗಿಯಾ ಭಾರತ ತಂಡದಲ್ಲಿ 57 ಏಕದಿನ ಪಂದ್ಯಗಳನ್ನು ಆಡಿದ್ದ ಅವರು 27.95 ಸರಾಸರಿಯಲ್ಲಿ 1230 ರನ್ ಗಳಿಸಿದ್ದರು. 1 ಶತಕ ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದಾರೆ. 14 ವಿಕೆಟ್ ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. ಮಾರ್ಚ್ 2002 ರಲ್ಲಿ ಗುವಾಹಟಿಯಲ್ಲಿ ಝಿಂಬಾಬ್ವೆ ವಿರುದ್ಧ ಅಜೇಯ 159 ರನ್ ಗಳಿಸಿರುವ ಮೊಂಗಿಯಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ.

Loading...

LEAVE A REPLY

Please enter your comment!
Please enter your name here