ದಿನ ಭವಿಷ್ಯ 18 ಸೆಪ್ಟೆಂಬರ್ 2019

0
578

ಮೇಷ– ಇಂದು ನಿಮ್ಮ ದಿನ ಅದ್ಭುತವಾಗಿರಲಿದೆ. ಸ್ವಲ್ಪ ತುಂಟತನ ಎಬ್ಬಿಸಿಕೊಂಡು ಹೋಗುತ್ತೀರಿ ಯಾವ ತೊಂದರೆಯೂ ಇಲ್ಲ. ಮನೆಯಲ್ಲಿ ಇರುವ ಸ್ತ್ರೀ ವಿಚಾರದಲ್ಲಿ ಒಂದು ಕಿರಿಕಿರಿ, ಹಣಕಾಸಿನ ವಿಚಾರದಲ್ಲಿ ಒಂದು ತೊಳಲಾಟ ಎದುರಾಗಲಿದೆ ಜಾಗೃತ ಶುಭವಾಗಲಿ.

ವೃಷಭ -ಇಂದು ನಿಮಗೆ ಸ್ವಲ್ಪ ತುಂಟತನ. ಬುಧವಾರ ಭಾನುವಾರ ಇದ್ದ ಹಾಗೆ. ಅಲಂಕಾರ, ವಯ್ಯಾರ, ವಾಹನ ಖರೀದಿ ಇವುಗಳಿಗೆ ಸಂಬಂಧಪಟ್ಟ ಹಾಗೆ ಉದ್ಯೋಗ, ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಅದ್ಭುತ ಪ್ರಗತಿ ಕಾಣ ತಕ್ಕಂತ ದಿನ ಶುಭವಾಗಲಿದೆ.

ಮಿಥುನ– ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವುದೇ ತೊಂದರೆ ಇಲ್ಲ.! ಸ್ವಲ್ಪ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ದುರ್ವ್ಯಸನಗಳಿಗೆ ದಾಸರಾಗಿದ್ದರೆ ಖಂಡಿತ ಒಂದು ಪೆಟ್ಟು ತಿನ್ನುತ್ತೀರಿ ಜಾಗರೂಕತೆ. ಇಂದು ಯಾವುದೇ ಅಡ್ಡದಾರಿ ಸಂಪಾದನೆಗೆ ಹೋಗಬೇಡಿ ಎಚ್ಚರಿಕೆ ಒಳ್ಳೆಯದಾಗಲಿ.

ಕಟಕ– ಇಂದು ನಿಮ್ಮ ದಿನ ಚೆನ್ನಾಗಿದೆ. ಎಂಟರ್ಟೈನ್ಮೆಂಟ್ ಇಂಡಸ್ಟ್ರಿ , ಗಾರ್ಮೆಂಟ್ಸ್ ಹೂವು ,ಹಣ್ಣು ಇಂಥ ಉದ್ಯೋಗ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ, ಅದರಲ್ಲೂ ತರಕಾರಿ ಬೆಳೆಯುವ ರೈತರಿಗೆ ಸ್ವಲ್ಪ ನಷ್ಟ ಅಕಾಲಿಕ ಮಳೆ, ಅಕಾಲಿಕ ಗಾಳಿ ತಟ್ಟುವ ಸೂಚನೆ ಇರಲಿದೆ ಜಾಗರೂಕತೆ.

ಸಿಂಹ– ಇಂದು ನಿಮ್ಮ ದಿನ ಚೆನ್ನಾಗಿದೆ. ಮನೆಯಲ್ಲಿ ಶುಭ ಕಾರ್ಯ, ಮುಂಜಿ ಕಾರ್ಯ, ಭೂಮಿ ಕಾರ್ಯ, ಆಹಾರ ಕಾರ್ಯ, ಉದ್ಯೋಗದಲ್ಲಿ ಒಂದು ಪ್ರಮೋಷನ್ ನಿರೀಕ್ಷೆ ಮಾಡುತ್ತಿದ್ದೀರಿ ದಾರಿ ಕಾಣುತ್ತದೆ ಯೋಚಿಸಬೇಡಿ ಒಳ್ಳೆಯದಾಗಲಿದೆ.

ಕನ್ಯಾ– ಇಂದು ಸ್ವಲ್ಪ ತುಂಟತನದ ದಿನ. ಓಡಾಟ ಸುತ್ತಾಟ ಕೆಲಸ ಕಾರ್ಯ ವ್ಯವಹಾರಗಳಲ್ಲಿ ತುಂಬಾ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ. ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ. ಭೂಮಿ, ಮನೆ, ವಾಹನ ತೆಗೆದುಕೊಳ್ಳುವ ವಿಚಾರದಲ್ಲಿ ಒಂದು ಸಣ್ಣ ಲೋಪದೋಷಗಳು ಕಿರಿಕಿರಿಯುಂಟು. ದವಸ, ಕಿರಾಣಿ ಇಂಥ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬೇಳೆಕಾಳು ವ್ಯಾಪಾರಿಗಳಿಗೆ ಒಂದು ಎಳೆದಾಟದ ದಿನ ಜಾಗರೂಕತೆ.

ತುಲಾ– ಕೊಡುವ, ತೆಗೆದುಕೊಳ್ಳುವ ವ್ಯವಹಾರದಲ್ಲಿ ಸ್ವಲ್ಪ ಅಂದುಕೊಂಡ ಹಾಗೆ ನಡೆಯುವುದಿಲ್ಲ. ಕೊಟ್ಟೇ ಕೊಡುತ್ತಾರೆ ಆದರೆ ಸ್ವಲ್ಪ ನಿಧಾನವಾಗಲಿದೆ. ಈ ರೀತಿಯ ಒಂದು ಸಣ್ಣ ಎಳೆದಾಟ ಭಾವಗಳು ಉಂಟಾಗಲಿದೆ. ಎಲ್ಲಿಯಾದರೂ ರಂಗನಾಥನ ಆಲಯ ಕಂಡರೆ ಸಣ್ಣ ಸಂಕಲ್ಪ, ಅರ್ಚನೆ ಇಲ್ಲವೇ, ವಿಷ್ಣು ಸಹಸ್ರನಾಮವನ್ನು ಪಠಿಸಿ ಒಳ್ಳೆಯದಾಗಲಿದೆ.

ವೃಶ್ಚಿಕ– ಮನಸ್ಸಿನಲ್ಲಿ ಏನೋ ಒಂದು ತಲ್ಲಣ. ವ್ಯವಹಾರ, ವ್ಯಾಪಾರ, ಹಣಕಾಸು ವಿಚಾರಗಳಲ್ಲಿ ಏನೋ ಒಂದು ತೊಳಲಾಟ. ಹೊಟ್ಟೆ ನೋವು ಸಮಸ್ಯೆ, ಯಾರೊ ಸ್ತ್ರೀಯರಿಗೆ ಸಂಬಂಧಪಟ್ಟ ಒಂದು ಸಣ್ಣ ಕಿರಿಕಿರಿ, ಫೈಲ್ಸ್, ಪಿಸ್ತೂಲ, ಬಾಧೆಯಿಂದ ಬಳಲುತ್ತೀರ. ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಇನ್ನೂ ಉಲ್ಬಣಿಸುತ್ತದೆ. ಇಂದು ಆದರೆ ಶಂಖ ಮುದ್ರೆಯನ್ನು ಮಾಡಿಕೊಳ್ಳಿ ಬಹಳ ಒಳ್ಳೆಯದು ಶುಭವಾಗಲಿ.

ಧನಸ್ಸು– ಇಂದು ನಿಮ್ಮ ದಿನ ಚೆನ್ನಾಗಿದೆ. ಸ್ವಲ್ಪ ದಾರಿ ತಪ್ಪಿದ ನೌಕೆಯ ಪ್ರೀತಿ ಇರಲಿದೆ. ನಿಮ್ಮ ಮನಸ್ಸು ಹಾಗೂ ಇರುವ ನೀರನ್ನು ಬಿಟ್ಟು ಮತ್ತೊಂದು ಕಡೆ ನೋಡುತ್ತಿರುತ್ತೀರಿ. ಮನುಷ್ಯನ ಮೋಸದ ಬುದ್ಧಿ, ಇನ್ನೊಬ್ಬರ ಹೆಸರು ಹಾಳು ಮಾಡುವ ಕೆಲಸವೇ ಮೋಸ. ಇಂದು ನಿಮ್ಮ ಗಮ್ಯ ಬೇರೆಡೆಯೇ ಎಳೆಯುತ್ತಿರುತ್ತದೆ ಅದರೆ ಯಾರಾದರೂ ಎಕ್ಸ್ ಪರ್ಟ್ಸ್’ಗಳ ಮಾತುಗಳನ್ನು ಕೇಳಿ ಹೆಜ್ಜೆ ಇಡುವುದು ಒಳ್ಳೆಯದು.

ಮಕರ– ಇಂದು ನಿಮಗೆ ವಿಪರೀತ ರಾಜಯೋಗ. ಆಗದ ಕೆಲಸಗಳು ಆಗುವ ದಿನ. ಕೈಗೂಂಡ ಕೆಲಸಗಳು ಆಗಲಿದೆ. ಇಂದು ವಿಶೇಷ ಸೌಕರ್ಯ, ಸನ್ಮಾರ್ಗ ಇಂಥ ರೀತಿಯ ದಾರಿಗಳು ನಿಮಗೆ ಸಲ್ಲುತ್ತದೆ. ನೀವು ಅಂದುಕೊಂಡಂಥ ಕಾರ್ಯಗಳು ಯಶಸ್ವಿಯಾಗಲಿದೆ. ವಿಶೇಷವಾಗಿ ವಸ್ತ್ರೋದ್ಯಮ, ಅಲಂಕಾರಿಕ, ಕ್ಯಾಮೆರಾಮೆನ್ ಟೆಕ್ನಿಷಿಯನ್, ಮ್ಯೂಸಿಷಿಯನ್, ಬಡ್ಡಿ, ಹಣಕಾಸು ,ಲೇವಾದೇವಿ, ಬ್ಯಾಂಕಿಂಗ್ ಇಂಥ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದೀರಿ ಅದ್ಭುತ ಪ್ರಗತಿ ನೋಡುವ ದಿನ ಶುಭವಾಗಲಿ.

ಕುಂಭ– ಹಣಕಾಸು ವಿಚಾರಗಳಲ್ಲಿ ಒಂದು ಪೀಕಲಾಟ ಉಂಟು. ನಿಭಾಯಿಸಿಕೊಂಡು ಹೋಗುತ್ತೀರಿ, ಗೆಲ್ಲುತ್ತೀರಿ ಆತಂಕ ಪಡಬೇಡಿ. ಬಹುದೊಡ್ಡ ವ್ಯವಹಾರದ ಕಡೆ ಹೆಜ್ಜೆ ಇಡುತ್ತಿದ್ದೀರಿ ಗೆಲುವು ನಿಮ್ಮದೇ. ಕಂಠದಾನ, ಮೇಕಪ್ ಆರ್ಟಿಸ್ಟ್ , ಚಲನಚಿತ್ರ, ಕಿರುಚಿತ್ರ ಇಂಥ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೀರಿ ಕೀರ್ತಿ, ಪ್ರತಿಷ್ಠೆ ನೋಡುವಂಥ ದಿನ ಚೆನ್ನಾಗಿದೆ.

ಮೀನ– ಗಂಡ-ಹೆಂಡತಿಗೆ ಸಂಬಂಧಪಟ್ಟ ಹಾಗೆ ಒಂದು ಸಣ್ಣ ಕಿರಿಕಿರಿ ಉಂಟಾಗಲಿದೆ. ನಿಮ್ಮ ಜೀವನದಲ್ಲಿ ಕುಚ್ಚೇಷ್ಟ ಮಾಡುವವರು ಯಾರಾದರೂ ಇರಲಿದ್ದಾರೆ. ಅವರಿಂದ ಒಂದು ಸಣ್ಣ ಕಿರಿಕಿರಿ, ಹಿಂಸೆ ಉಂಟಾಗಲಿದೆ ಎಚ್ಚರಿಕೆ. ವೆಂಕಟೇಶ್ವರನ ದೇವಾಲಯಕ್ಕೆ ಒಂದು ಸಣ್ಣ ಅರ್ಚನೆ, ಮಹಾಲಕ್ಷ್ಮಿಯ ಹೆಸರಿನಲ್ಲಿ ಆರು ಜನರಿಗೆ ಹರಿಶಿನ-ಕುಂಕುಮವನ್ನು ನೀಡುವ ಕೆಲಸ ಮಾಡಿ. ಮುಖ್ಯ ನಿರ್ಧಾರಗಳನ್ನು ಇಂದು ಮಾಡಲಿಕ್ಕೆ ಹೋಗಬೇಡಿ, ಮಿಕ್ಕಂತೆ ಎಲ್ಲಾ ಕೆಲಸಗಳು ಉತ್ತಮವಾಗಿ ನಡೆಯಲಿದೆ ಶುಭವಾಗಲಿ.

LEAVE A REPLY

Please enter your comment!
Please enter your name here