ದಿನ ಭವಿಷ್ಯ ೦೧ ಜನವರಿ ೨೦೨೦

0
515

ಇವತ್ತು ಹೊಸ ವರ್ಷ, ನೂತನ ವರ್ಷದ ಪ್ರಾರಂಭದ ದಿನ. ಹಾಗಾಗಿ ಬೆಳಗ್ಗೆ ಎದ್ದು ನಿಮಗೆ ಯಾವ ಅನುಕೂಲವಿದೆ ಆ ನೀರಿನಲ್ಲಿ ಸ್ನಾನ ಮಾಡಿ. ನದಿ ಸ್ನಾನ, ನದಿ ಹತ್ತಿರ ಇರುವವರು ನದಿ ಸ್ನಾನ, ಬಾವಿ ಹತ್ತಿರ ಇರುವವರು ಭಾವಿ ಸ್ನಾನ, ಕೊಳವೆ ಬಾವಿ ಹತ್ತಿರ ಇರುವವರು ಕೊಳವೆ ಬಾವಿಯ ಸ್ನಾನ, ಇನ್ನು ಸ್ಟೋರೇಜ್ ನೀರು ಇರುವವರು ಅದರಲ್ಲಿ ಸ್ನಾನ ಮಾಡಿ. ನಿಮಗೆ ಯಾವುದು ಅನುಕೂಲವಿದೆಯೊ ಅದರಲ್ಲಿ ಸ್ನಾನ ಮಾಡಿ ಒಂದು ತುಪ್ಪದ ದೀಪ ಹಚ್ಚಿ. ಒಂದೆರಡು ನಿಮಿಷ ನಿಮ್ಮ ದೇವರು, ನಿಮ್ಮ ನೆಚ್ಚಿನ ದೈವ ಸಾನಿಧ್ಯದಲ್ಲಿ ಕುಳಿತು ದೀಪವನ್ನು ಹಚ್ಚಿ ನಾಮಸ್ಮರಣೆ ಮಾಡುವ ಮೂಲಕ ಧ್ಯಾನ ಮಾಡಿ. ಮನೆಯ ದೇವರನ್ನು ಬಿಟ್ಟು ಯಾವುದೋ ಗುಡಿಯ ದೇವರ ಬಳಿ ಹೋಗಿ ಕುಳಿತುಕೊಳ್ಳಬೇಡಿ.

 

 

ಮೊದಲ ಪ್ರಾಶಸ್ತ್ಯ ಮನೆಯ ದೇವರಿಗೆ ಕೊಟ್ಟು ದೇವರ ಮನೆಯನ್ನು ಸ್ವಚ್ಛಗೊಳಿಸಿ, ಭಕ್ತಿಯಿಂದ ದೀಪ ಹಚ್ಚಿ ಕುಟುಂಬದವರ ಬಗ್ಗೆ ಈ ವರ್ಷದಲ್ಲಿ ನಿಮಗೆ ಯಾವ ಲಾಭ, ಯಾವ ಫಲ ಬೇಕು ಎಂಬುದನ್ನು ಭಕ್ತಿಪೂರ್ವಕವಾಗಿ ಒಳ್ಳೆಯ ಬುದ್ಧಿಯನ್ನು ಒಳ್ಳೆಯ ಕ್ಷೇತ್ರಗಳನ್ನು ಕೊಟ್ಟು ನಮ್ಮನ್ನು ನಡೆಸಿ ಎಂದು ಬೇಡಿಕೊಳ್ಳಿ. ನನ್ನ ಕೆಲಸವನ್ನು ನಿಷ್ಠಾ ಬದ್ಧವಾಗಿ, ಧರ್ಮಬದ್ಧವಾಗಿ, ನ್ಯಾಯವಾಗಿ ಮಾಡುವ ಬುದ್ಧಿಯನ್ನು ಪ್ರಚೋದಿಸು ಎಂದು ಬೇಡಿಕೊಳ್ಳಿ. ಮೂರು ಇಂಚಿನ ದೀಪವನ್ನು ಹಚ್ಚಿದರೆ ಸರ್ವಶ್ರೇಷ್ಠ. ಈ ವರ್ಷದ ಮೊದಲನೇ ೭ ದಿನಗಳು ನೀವು ಹೇಗಿರುತ್ತೀರಿ.? ಅದೇ ರೀತಿ ಈ ವರ್ಷ ಪೂರ್ತಿ ನೀವಿರುತ್ತೀರಿ. ಆ ಒಂದು ಪ್ರಭಾವ ಬೀರುತ್ತದೆ ಈ ಏಳು ದಿನಗಳು.

 

 

ನಿಮ್ಮ ಕರ್ತವ್ಯ ನಿಷ್ಠೆ, ನಿಮ್ಮ ವ್ಯಕ್ತಿತ್ವ, ನಿಮ್ಮ ಗುಣ ನೀವು ಹೇಗಿರುತ್ತೀರಿ ಎಂಬುದು ಈ ಏಳು ದಿನಗಳಲ್ಲಿ ಹೇಗಿರುತ್ತದೋ, ಹಾಗೆಯೇ ಇಡೀ ವರ್ಷ ಇರುತ್ತದೆ. ದೇವರ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಅಲ್ಲೇ ಇಟ್ಟಿರುವ ತೀರ್ಥ ಧರ್ಮಸ್ಥಳ, ನಂಜುಂಡೇಶ್ವರ ಸ್ವಾಮಿಯ ಕ್ಷೇತ್ರದ ತೀರ್ಥವನ್ನು ಸೇವಿಸಿ ನಿಮ್ಮ ತಂದೆ ತಾಯಿ ಅಥವಾ ತಂದೆ, ತಾಯಿ ಸಮಾನರಾದವರ ಆಶೀರ್ವಾದ ಪಡೆದುಕೊಳ್ಳಿ. ಹಿರಿಯರ ಆಶೀರ್ವಾದ ಇದ್ದಷ್ಟೂ ನಿಮಗೆ ಶ್ರೇಷ್ಠ. ಈ ಹೊಸ ವರ್ಷಕ್ಕೆ ನೀವು ಏನು ಮಾಡಬೇಕು ಅಂದುಕೊಂಡಿದ್ದೀರಿ ಅದನ್ನು ಸಾಧಿಸಲು ದಿಟ್ಟ ಹೆಜ್ಜೆ ಇಡಿ ಒಳ್ಳೆಯದು. ಉತ್ತಮ ಆಲೋಚನೆ ಚಿಂತನೆಯೊಂದಿಗೆ ನೀವು ಹೆಜ್ಜೆ ಇಟ್ಟರೆ ಅದು ನಿಮಗೆ ಯಶಸ್ವಿಯಾಗಿ ದಾರಿ ದೀಪವಾಗುತ್ತದೆ.

 

 

ಆದಷ್ಟು ನಿಮ್ಮ ಒಳ್ಳೆಯ ಕನಸುಗಳಿಗೆ ಒಂದು ಚಿತ್ರಣ ಒಂದು ಜೀವವನ್ನು ನೀಡಿ. ಶತ ಪ್ರಯತ್ನಗಳನ್ನು ಪಡಿಸಿ ಬಹಳ ಒಳ್ಳೆಯದಾಗುತ್ತದೆ. ನಾನು ಈ ಕೆಲಸ ಮಾಡಬೇಕು ಇದಕ್ಕೆ ಯಾವ ಪ್ರಯತ್ನಗಳನ್ನು ಮಾಡಬೇಕು, ಯಾವ ರೀತಿ ತಯಾರಾಗಬೇಕು ಎಂಬ ಒಂದು ರೂಪುರೇಷೆಯನ್ನು ತಯಾರಿಸಿಕೊಳ್ಳಿ. ಈ ಒಂದು ನೂತನ ವರ್ಷದ ದಿನದಂದು ಒಂಟಿಯಾಗಿರಬೇಡಿ.! ಯಾರೂ ಹೇಳುವ ಮಾತಿಗೆ ಪ್ರಚೋದನೆಗೆ ಒಳಗಾಗಬೇಡಿ. ಇನ್ನೊಬ್ಬರ ಮಾತಿನ ಮೇಲೆ ಅವಲಂಬಿತರಾಗಬೇಡಿ. ಇವತ್ತು ಆದಷ್ಟು ಖುಷಿಯಿಂದ ದೇವನಾಮ ಜಪ, ನಾಮಸ್ಮರಣೆ ಮಾಡಿಕೊಂಡು ನೀವು ಏನಾಗಬೇಕು ಎಂಬುದನ್ನು ಯೋಚಿಸಿ, ಅದರ ಬಗ್ಗೆ ಚಿಂತನೆ ಮಾಡಿ ಖುಷಿ ಖುಷಿಯಿಂದ ಗುರಿಯತ್ತ ಸಾಗಿ ಶುಭವಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ- ಇಂದು ನಿಮಗೆ ಅದ್ಭುತವೇ.! ಸರ್ಕಾರ, ಅಧಿಕಾರ, ಪದವಿ, ಪ್ರತಿಷ್ಠೆ, ಗೌರವ, ಸನ್ಮಾನ ಅದರ ಪೂರ್ವ ಫಲವನ್ನು ನೋಡುತ್ತೀರಿ. ಯಾವ ಹುಳುಕು ಇದೆ ಅದು ದೂರವಾಗುತ್ತದೆ.

ವೃಷಭ- ನಿಮಗೆ ಕೊಡುವ ದಾನ ಮಾಡುವ ಬುದ್ಧಿ ಇರುವುದರಿಂದ ಒಂದು ೦೫ ಜನ ಆಚಾರ್ಯರಿಗೆ ತಾಂಬೂಲವನ್ನು ನೀಡಿ ಒಳ್ಳೆಯದು. ನಿಮ್ಮನ್ನು ರಕ್ಷಿಸುತ್ತದೆ. ಗುರುವಿನ ಆಶೀರ್ವಾದ ನಿಮಗೆ ದೊರೆಯುತ್ತದೆ.

ಮಿಥುನ- ಇನ್ನಷ್ಟು ವಿಶೇಷ, ಒಳ್ಳೆಯ ದಿನ. ಯಾವುದೋ ಶುಭ ಸುದ್ದಿಯೊಂದನ್ನು ವೃತ್ತಿಪರವಾಗಿ, ವ್ಯವಹಾರ ಪರವಾಗಿ, ಸಂಬಂಧಿತವಾಗಿ ಪಡೆಯುತ್ತೀರಿ ಒಳ್ಳೆಯ ದಿನ. ಗುರು ಫಲವನ್ನು ನೋಡುತ್ತೀರಿ. ಯಾವುದೋ ಒಂದು ಪ್ರಸಾದ ಕೂಡ ಮನೆಗೆ ಬಂದು ಸೇರುತ್ತದೆ.

ಕಟಕ- ಯಾವುದಾದರೂ ಶಿವ ಕ್ಷೇತ್ರಕ್ಕೆ ಹೋಗಿ ಬನ್ನಿ. ಮಕ್ಕಳ ಚಿಂತೆ, ಮನೆಯ ಚಿಂತೆ, ಕುಟುಂಬದವರ ಚಿಂತೆ, ಹಿರಿಯರ ಚಿಂತೆ, ಗಂಡನ ಚಿಂತೆ ಇವೆಲ್ಲವನ್ನೂ ಪಕ್ಕಕ್ಕೆ ಇಡಿ ನೀವು ಎಷ್ಟು ಚಿಂತಿಸಿದರೂ ಕೂಡ ಏನಾಗಬೇಕು ಅದು ಆಗಲೇಬೇಕು. ದೇವರ ಮನೆಯಲ್ಲಿ ಪೂಜೆ ಮಾಡಿ ಕುಳಿತು ಒಂದಿಷ್ಟು ಸುಂದರಕಾಂಡ ಪಾರಾಯಣ ಮಾಡಿ. ಅನಂತರ ಹನುಮನ ದೇವಾಲಯಕ್ಕೆ ಹೋಗಿ ವೀಳ್ಯದೆಲೆಯನ್ನು ಅರ್ಪಿಸಿ ಒಳ್ಳೆಯದಾಗಲಿದೆ.

ಸಿಂಹ- ಶುಭ ಕಾರ್ಯ.! ಗುರುವಾಗಿದ್ದಾರೆ, ಟೀಚರ್, ಅಡ್ವೈಸರ್, ಕನ್ಸಲ್ಟೆಂಟ್, ಜಡ್ಜ್, ಲಾಯರ್, ಪ್ರೊಫೆಸರ್ ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ಹೊಸದೊಂದು ಶುಭ ಸುದ್ದಿ ನಿಮಗೋಸ್ಕರ ಕಾಯುತ್ತಿದೆ.

ಕನ್ಯಾ- ಗುರು ನಿಮಗೆ ಕೇಂದ್ರದಲ್ಲಿದ್ದಾನೆ ಒಳ್ಳೆಯದೇ. ಕುಟುಂಬದಿಂದ, ಸಂಗಾತಿಯಿಂದ ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ವ್ಯವಹಾರ ನಿಮಿತ್ತ, ದೇವ ಕಾರ್ಯಕ್ಕೆ ವಿಶೇಷ ಮುತುವರ್ಜಿ ಮಾಡುವಂತ ಸುಯೋಗ. ಅಂಜಬೇಡಿ ರಾಮನಾಮ ಜಪ ಮಾಡಿಕೊಳ್ಳಿ.

ತುಲಾ- ಚಂದ್ರ ಗುರು ಸಾರದಲಿದ್ದಾನೆ. ಮಕ್ಕಳ ವೃತ್ತಿ, ಆರೋಗ್ಯ, ಗತ್ತು, ತೂಕ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೀರಿ. ಹೊಸ ವರ್ಷದ ಆರಂಭದ ದಿನ ಏನೂ ಆಗುವುದಿಲ್ಲ. ಯಾವ ರೀತಿಯ ಆತಂಕಕ್ಕೆ ಒಳಗಾಗಬೇಡಿ. ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ದೈವೇಚ್ಛೆಯಂತೆ ಎಲ್ಲವೂ ಆಗುತ್ತದೆ ಶುಭವಾಗಲಿ.

ವೃಶ್ಚಿಕ- ಕುಟುಂಬದಲ್ಲಿ ಸಿಹಿ, ವೃತ್ತಿಪರ ಸಿಹಿ ಸುದ್ದಿ ಕೇಳುತ್ತೀರಿ. ಅದರಲ್ಲೂ ಧರ್ಮ ಕಾರ್ಯ, ವದ್ಧಾಶ್ರಮ, ಅನಾಥಾಶ್ರಮ ಹೋಗಿ ಐದು ಜನರಿಗೆ ಒಂದು ಸಿಹಿ ಊಟದ ಪ್ರಸಾದವನ್ನು ಹಂಚಿ ಬನ್ನಿ. ಹೊಸ ವರ್ಷದ ಆರಂಭ, ವರ್ಷ ಪೂರ್ತಿ ಹಂಚುವ ಶುಭಯೋಗ ಕೊಡುತ್ತಾನೆ.

ಧನಸ್ಸು- ಗುರು ನಿಮ್ಮ ಮನೆಯಲ್ಲಿದ್ದಾನೆ. ಎಲ್ಲೋ ಒಂದು ಚೂರು ನನ್ನ ನಿಯಮದಲ್ಲಿ ನಾನು ಇರುತ್ತೇನ.? ನಿಯಮವನ್ನು ಉಲ್ಲಂಘಿಸುತ್ತೇನಾ? ಎಂಬ ಭಾವ ಇರುತ್ತದೆ. ಜಗತ್ತಿನಲ್ಲಿ ಯಾರೂ ತಪ್ಪು ಮಾಡದೆ ಇರುವುದಿಲ್ಲ. ನಿಯಮ ಉಲ್ಲಂಘಿಸುವುದೇ ಇರುವುದಿಲ್ಲ. ಮನುಷ್ಯ ಅಂದ ಮೇಲೆ ನಡೆಯುತ್ತದೆ. ಹಾಗಾಗಿ ಸ್ವಲ್ಪ ಸ್ವಲ್ಪವೇ ತಪ್ಪನ್ನು ಮಾಡುವುದನ್ನು ಬಿಟ್ಟು ಒಳ್ಳೆಯ ದಾರಿಯತ್ತ ಹೋಗಿ ಶುಭವಾಗಲಿದೆ.

ಮಕರ- ಗೌರವ, ಹೆಸರು, ಕೀರ್ತಿ, ಪ್ರತಿಷ್ಠೆ ನಿಮ್ಮ ಪರಿಶ್ರಮಕ್ಕೆ ತಕ್ಕ ಲಾಭವನ್ನು ನೋಡುವಂಥ ಒಂದು ದಿನ. ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ, ಹಿರಿಯರ ಆಶೀರ್ವಾದ ಇದ್ದಷ್ಟು ವೃದ್ಧಿ.

ಕುಂಭ- ಆಕಸ್ಮಿಕ ದೈವದರ್ಶನ, ಗುರುದರ್ಶನ, ಜ್ಞಾನದರ್ಶನ ಇವೆಲ್ಲವನ್ನೂ ಪಡೆಯುತ್ತೀರಿ. ಹೊಸ ವರ್ಷದ ಕನಸುಗಳು, ಹೊಸ ಮನ್ವಂತರದೊಂದಿಗೆ ಶುರುವಾಗುತ್ತದೆ. ಬಹು ದೊಡ್ಡ ಕನಸನ್ನು ಪ್ರಾರಂಭಿಸಿದ್ದೀರಿ ಹಣಕಾಸು ನೋಡುವ ಸಂದರ್ಭ ಬಂದಿದೆ.

ಮೀನ- ಇಂದು ನಿಮ್ಮ ದಿನ ಚೆನ್ನಾಗಿದೆ. ಗುರುವಿಗೆ ಸಂಬಂಧಿಸಿದಂತೆ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಖರ್ಚುವೆಚ್ಚಗಳು ಒಳ್ಳೆಯದಕ್ಕೆ ಆಗುತ್ತದೆ. ಮನೆಯವರಿಗೆ, ಆತ್ಮೀಯರಿಗೆ, ವೃದ್ಧಿಗೆ, ಅಭಿವೃದ್ಧಿಯ ಸಂಕೇತಕ್ಕೆ ಖರ್ಚು ಮಾಡುತ್ತೀರಿ. ಆತಂಕಕ್ಕೆ ಒಳಗಾಗಬೇಡಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here