ದಿನ ಭವಿಷ್ಯ ೩೧ ಡಿಸೆಂಬರ್ ೨೦೧೯

0
250

ಇವತ್ತು ವರ್ಷದ ಕೊನೆಯ ದಿನ. ಒಂದೊಂದು ಧರ್ಮಕ್ಕೂ ಒಂದೊಂದು ರೀತಿಯ ಆಚರಣೆಗಳಿರುತ್ತವೆ. ಜೈನರಿಗೆ, ಸಿಖ್ಖರಿಗೆ, ಹಿಂದೂಗಳಿಗೆ, ಭಾರತೀಯರಿಗೆ ತುಂಬಾ ಪದ್ಧತಿ ಮತ್ತು ಬದಲಾವಣೆಗಳು ಉಂಟು. ಈ ವರ್ಷದಲ್ಲಿ ಊಹಿಸದೇ ಇರುವಂತ ಅನೇಕ ಕಹಿ ಘಟನೆಗಳು ನಡೆದಿದೆ. ತುಂಬಾ ಹೊಸ ಚಿಗುರುಗಳು ಕೂಡ ಬಂದಿದೆ ಅದನ್ನು ನೋಡಿದರೆ ಖುಷಿಯಾಗುತ್ತದೆ.

 

 

ವೃದ್ಧರನ್ನು ನಿರ್ಲಕ್ಷಿಸಿದ ಮಗ, ಸೊಸೆ ಅವರಿಗೆ ಕಾನೂನು ರೀತಿಯಲ್ಲಿ ಒಂದು ಶಿಕ್ಷೆ ಕೂಡ ಬಂದಿದೆ. ಅತ್ತೆ-ಮಾವ’ನನ್ನು ನೋಡದೆ ಇರುವ ಸೊಸೆಗೂ ಕೂಡ ಶಿಕ್ಷೆ ನೀಡಲು ಕಾನೂನು ಹಲವು ಬದಲಾವಣೆಗಳನ್ನು ತಂದಿದೆ. ಹೀಗಾಗಿ ನಿಮ್ಮ ತಂದೆ, ತಾಯಿಯನ್ನು ಖುಷಿಯಿಂದ ನೋಡಿಕೊಳ್ಳಿ. ಸೊಸೆಯಂದಿರು ತಮ್ಮ ಅತ್ತೆ ಮಾವನನ್ನು ತಮ್ಮ ತಂದೆ- ತಾಯಿಯಂತೆ ನೋಡಿಕೊಳ್ಳಿ ಒಳ್ಳೆಯದಾಗಲಿದೆ. ನಿಮ್ಮ ತಂದೆ ತಾಯಿಯರಿಗೆ ಗೌರವ ನೀಡಿ. ಹೊಸ ವರ್ಷದಲ್ಲಿ ಹಲವು ಹೊಸ ಯೋಜನೆಗಳು, ಕಾಯ್ದೆಗಳು ಬಂದಿವೆ. ಮತ್ತಷ್ಟು ಉತ್ತಮ ಕಾನೂನು ಕಾಯ್ದೆಗಳು ಬರುತ್ತಿವೆ ಒಳ್ಳೆಯದು ಶುಭವಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ- ಸ್ವಲ್ಪ ಎಚ್ಚರಿಕೆ.! ಓಡಾಟ, ಸುತ್ತಾಟ, ಎಕ್ಸ್ಪೋರ್ಟ್ ಇಂಪೋರ್ಟ್, ಗ್ಯಾಸ್ ,ಲಿಕ್ಕರ್ ,ಪೆಟ್ರೋಲ್, ಆಯಿಲ್ ಈ ರೀತಿಯ ವ್ಯವಹಾರಗಳಲ್ಲಿ ಚೆನ್ನಾಗಿದೆ. ಉತ್ತಮ ಹಣವನ್ನು ನೋಡುತ್ತೀರಿ.

ವೃಷಭ- ರಾಹುಗೆ ಮಿತ್ರ, ಶತ್ರುವಲ್ಲ ಅವನು ನಿಮ್ಮ ಕುಟುಂಬ ಸ್ಥಾನ, ವೃತ್ತಿ ಸ್ಥಾನದಲ್ಲಿ ಇದ್ದು ಚಂದ್ರ ರಾಹು ಸ್ಥಾನದಲ್ಲಿರುವುದರಿಂದ ರಾಹು ಅಂದರೆ ಅಡ್ಡದಾರಿಯ ಸಂಪಾದನೆ. ನಿಮ್ಮ ಚಿತ್ತ ಅಡ್ಡದಾರಿಯ ಕಡೆ ಇರುತ್ತದೆ. ಆ ರೀತಿಯ ಪ್ರಭಾವ, ಅಲ್ಲೊಂದು ಎಡವಟ್ಟು ಇರಲಿದೆ. ಅಕ್ರಮ ಸಂಪಾದನೆ, ಅಕ್ರಮ ಸಂಪತ್ತು ಅಕ್ರಮ ಆಲೋಚನೆ, ಪ್ರಚೋದನೆಗೆ ಒಳಗಾಗುತ್ತೀರಿ ಜಾಗರೂಕತೆ.

ಮಿಥುನ- ದೇವಿ ಕಾರ್ಯ, ಬಹುದೊಡ್ಡ ದೇವಕಾರ್ಯದ ಕಡೆ ಹೆಜ್ಜೆ ಇಡುವ ಸಂಕಲ್ಪ. ಯಾಕೋ ಮನೋಸಂಕಲ್ಪ ಅನ್ನಿಸುತ್ತದೆ. ದೊಡ್ಡ ಕಾರ್ಯದ ಕಡೆ ಧೈರ್ಯದಿಂದ ಹೆಜ್ಜೆ ಇಡಿ ಒಳ್ಳೆಯದಾಗಲಿದೆ.

ಕಟಕ- ಯಾಕೋ ನೀವು ನೀವಾಗಿರುವುದಿಲ್ಲ. ಮಾಂತ್ರಿಕ, ಭಾವ, ತಾಂತ್ರಿಕ ಭಾವ, ಪ್ರಚೋದನೆ ಭೀತಿ, ಗಾಬರಿ, ಭಯ, ಕಣ್ಣೀರು ಏನೋ ಒಂದು ಕಂಪನ ಉಂಟು. ಮನೆಯಲ್ಲಿ ಬೆಳಗ್ಗೆ ಬೇಗ ಎದ್ದು ಹೊಸಿಲಿನ ಹೊರಗಡೆ ತುಪ್ಪದ ದೀಪವನ್ನು ಹಚ್ಚಿ. ನೆಗಟಿವ್ ವ್ಯಕ್ತಿಗಳೊಂದಿಗೆ ಮಾತನಾಡಬೇಡಿ ಹೆಚ್ಚು ಸ್ಪಂದಿಸಬೇಡಿ.

ಸಿಂಹ- ಅನ್ಯಾಯದ ರೀತಿಯಲ್ಲಿ ಒಂದು ಸಂಪಾದನೆಯ ಪ್ರಚೋದನೆಯನ್ನು ಯಾರೂ ನಿಮಗೆ ಮಾಡಲಿದ್ದಾರೆ. ಇಂದು ಬಹಳ ಜಾಗರೂಕತೆ ದುಡುಕಬೇಡಿ. ಆ ರೀತಿಯ ವಿಚಾರಗಳಿಗೆ ತಲೆ ಕೊಡಬೇಡಿ.

ಕನ್ಯಾ- ಎಕ್ಸ್ಪೋರ್ಟ್- ಇಂಪೋರ್ಟ್, ಟೆಕ್ನಿಷನ್, ಲಾಯರ್, ಜರ್ನಲಿಸಮ್, ಲ್ಯಾಬ್ ಟೆಕ್ನಿನೇಷನ್ ಈ ತರಹದ ವ್ಯವಹಾರ, ಉದ್ಯೋಗದಲ್ಲಿ ಇರುವವರಿಗೆ ಅನುಕೂಲ ಸಿಂಧು.

ತುಲಾ- ಆಕಸ್ಮಿಕ ಧನ ಲಾಭ, ಆಕಸ್ಮಿಕ ಶುಭ ಸುದ್ದಿ, ವ್ಯವಹಾರ ನಿಮಿತ್ತ, ವ್ಯಾಪಾರ ನಿಮಿತ್ತ, ಕುಟುಂಬ, ಕುಟುಂಬದವರ ಕಡೆಯಿಂದ, ಹತ್ತಿರದವರಿಂದ ಬರುವಂತ ಸುಯೋಗ ಉಂಟು ಶುಭವಾಗಲಿದೆ.

ವೃಶ್ಚಿಕ- ಇವತ್ತು ನೀವು ಹೊಸ ವರ್ಷದ ಸಂಭ್ರಮವನ್ನು ಈಗಾಗಲೇ ಶುರು ಮಾಡಿಕೊಂಡಿದ್ದೀರಾ. ಕುಡಿದ ಆಮಲಿನಲ್ಲಿ ತೆಲುತಿರುತ್ತೀರಿ. ಪೊಲೀಸರ ಅತಿಥಿಯಾಗುವ ಪ್ರಸಂಗ ಉಂಟು ಜಾಗರೂಕತೆ. ಸಂಧ್ಯಾ ಕಾಲದಲ್ಲಿ ಬೂದುಗುಂಬಳ ಕಾಯಿಯಲ್ಲಿ ಒಂದು ದೀಪವನ್ನು ಹಚ್ಚಿ ಒಳ್ಳೆಯದಾಗಲಿದೆ.

ಧನಸ್ಸು- ಯಾರದೋ ಮಾತಿಗೆ ಒಳಗಾಗಿ ಪಾರ್ಟಿ ,ಆಕ್ಸಿಡೆಂಟ್, ಇಂಜುರಿ, ಗಲಾಟೆ, ಹೊಡೆದಾಟ, ಬಡೆದಾಟ ಉಂಟು. ಈ ರೀತಿಯ ಪ್ರಭಾವ ಒಳಗಾಗುತ್ತೀರಿ ಎಚ್ಚರಿಕೆ ವಹಿಸಿ.

ಮಕರ- ರಾಹು, ಶನಿ, ಮತ್ತೊಂದು ಸ್ವರೂಪ ಎಂದು ಹೇಳುತ್ತಾರೆ. ಯಾವುದೋ ಸ್ನೇಹಿತರ ಜೊತೆ ಪಾರ್ಟಿ, ಫಂಕ್ಷನ್ ಗೆ ಹೋಗುತ್ತೀರಿ. ಪೊಲೀಸ್, ರಕ್ಷಣಾ ಇಲಾಖೆ ಅಧಿಕಾರಿಯಾಗಿದ್ದರೆ ಮೈಯೆಲ್ಲ ಕಣ್ಣಾಗಿರಬೇಕು. ಇವತ್ತು ಏನೋ ಎಡವಟ್ಟು ನಿಮ್ಮನ್ನು ಕಾಡುವ ಸೂಚನೆಯೊಂದು ಇದೆ ಎಚ್ಚರಿಕೆ.

ಕುಂಭ- ಸನ್ಮಾನ, ಹೆಸರು, ಕೀರ್ತಿ, ಪ್ರತಿಷ್ಠೆ ಗೌರವ ನೋಡುವಂತ ಒಂದು ಪ್ರಭಾವ ಉಂಟು. ದೇವಿ ಪಾರಾಯಣ ಮಾಡಿಕೊಳ್ಳಿ, ಆಕಸ್ಮಿಕ ದೇವಿ ದರ್ಶನ ಮಾಡುವಂತ ಸುಯೋಗ ಮಾಡಿಕೊಳ್ಳಿ, ದೈವ ದರ್ಶನ ಪಡೆದುಕೊಳ್ಳಿ.

ಮೀನ- ಇವತ್ತು ಏನೊ ಒಂದು ಭಯ, ಹುಳಿ, ಆತಂಕ ಇರುತ್ತದೆ. ಸುಂದರಕಾಂಡ ಪಾರಾಯಣ, ದತ್ತ ಚರಿತ್ರೆ, ಗುರು ಚರಿತ್ರೆ ಪಾರಾಯಣ, ಸಾಯಿ ಚರಿತ್ರೆ ಪಾರಾಯಣವನ್ನು ಪುಟ್ಟದಾಗಿ ಮಾಡಿಕೊಳ್ಳಿ ವಿಶೇಷವಾಗಿ ಅಂಧರಿಗೆ, ವೃದ್ಧರಿಗೆ, ಅಂಗವಿಕಲರಿಗೆ ಸಿಹಿಯನ್ನು ನೀಡಿ ಒಳ್ಳೆಯದಾಗಲಿದೆ. ತಾಯಿ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು ಶುಭವಾಗಲಿ.

LEAVE A REPLY

Please enter your comment!
Please enter your name here