ದಿನ ಭವಿಷ್ಯ ೧೯ ಡಿಸೆಂಬರ್ ೨೦೧೯

0
471

ತುಲಾ ರಾಶಿಯವರಿಗೆ ಗ್ರಹಣದ ಛಾಯೆ, ಪ್ರಭಾವ ಹೇಗಿರಲಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ತುಲಾ ರಾಶಿಯವರಿಗೆ ಗ್ರಹಣ ಮೋಕ್ಷ. ಎಂಥ ಒಂದು ಯುದ್ಧದಿಂದ ಕೂಡ ಗೆಲ್ಲುವ ತಾಕತ್ತು, ಶಕ್ತಿ ನಿಮಗಿರುತ್ತದೆ. ಆದರೆ ನಿಮ್ಮ ಹತ್ತಿರದವರೇ ನಿಮಗೆ ತೊಂದರೆ, ಕೆಡಕು ಮಾಡುತ್ತಾರೆ. ವಿಪರೀತ, ಬಲ, ಜಯಾ, ಖ್ಯಾತಿ ,ಹೆಸರು ಬಂದರೆ ಅವರು ಅದನ್ನು ಸಹಿಸಿಕೊಳ್ಳುವುದಿಲ್ಲ. ಸ್ವಲ್ಪ ತುಲಾ ರಾಶಿಯವರು ಈ ವಿಚಾರಗಳಿಂದ ದೂರವಿರಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಒಡಹುಟ್ಟಿದವರು ಯಾವುದಾದರೂ ತೊಂದರೆಯಲ್ಲಿ ಸಿಲುಕಿಕೊಂಡಿದ್ದರೆ ಅವರ ಯೋಗಕ್ಷೇಮ ವಿಚಾರಿಸುವುದು, ಅವರಿಗೆ ಪರಿಹಾರ ನೀಡುವುದನ್ನು ಮಾಡಿ. ಇದರಿಂದ ನಿಮ್ಮ ಹತ್ತಿರದವರನ್ನು ಚೆನ್ನಾಗಿ ನೋಡಿಕೊಂಡರೆ ಅವರು ನಿಮ್ಮ ಮೇಲೆ ಯಾವ ರೀತಿಯ ಕತ್ತಿಯನ್ನು ಬೀಸುವುದಿಲ್ಲ.

 

 

ಆ ರೀತಿಯ ಒಂದು ಪ್ರಭಾವದಿಂದ ನೀವು ದೂರಾಗಬಹುದು. ಆಕಸ್ಮಿಕ ದೈವ ಯೋಗ. ಕರ್ಮಯೋಗ ಕರ್ಮಾಧಿಪತಿ ಯೋಗದಿಂದ ನಿಮಗೆ ವಿಶೇಷವಾದ ಅಧಿಕಾರ ಪ್ರಾಪ್ತಿ ಉಂಟು ಪ್ರಯತ್ನ ಮಾಡಿ ನೋಡಿ ಖಂಡಿತ ಗಳಿಸಿಕೊಳ್ಳುತ್ತೀರಿ. ಈ ಒಂದು ಗ್ರಹಣದಿಂದ ಒಳ್ಳೆ ಅಧಿಕಾರ, ಮನೆ ,ಕುಟುಂಬ, ಖುಷಿ, ಎಲ್ಲವನ್ನೂ ತಂದುಕೊಡುತ್ತದೆ. ಹಾಗೆ ವಿಪರೀತ ಉನ್ಮಾದ ಶಕ್ತಿಯ ವೈರಿಗಳನ್ನು ಉತ್ಪತ್ತಿ ಮಾಡುತ್ತದೆ. ನೀವು ವ್ಯವಹಾರ ಮಾತುಕತೆ ಗಂಭೀರವಾಗಿ ಮಾಡುವಾಗ ಯಾರಾದರೂ ಹದ್ದುಬಸ್ತ್ತಿನ ವ್ಯಕ್ತಿಯನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳಿ. ನೀವು ಕಷ್ಟಪಟ್ಟಿರುವುದು ನಿಮ್ಮವರಿಗೆ ಕಾಣುವುದಿಲ್ಲ. ಆದರೆ ನಿಮ್ಮ ಬಳಿ ಹಣ ಅಧಿಕಾರ, ಸಂಪತ್ತು ಬಂದಾಗ ಎಲ್ಲರೂ ನಿಮ್ಮ ಜೊತೆಗಿರುತ್ತಾರೆ. ಕೆಲವು ಕೆಟ್ಟ ವಿಷಯಗಳು ನಿಮ್ಮೊಂದಿಗೆ ಸೇರಿಕೊಂಡು ನಿಮ್ಮನ್ನು ಪ್ರಚೋದನೆಗೆ ಒಳಪಡಿಸುತ್ತಾರೆ.

ಆ ರೀತಿಯ ಒಂದು ಪ್ರಭಾವ ಕೂಡ ಈ ಗ್ರಹಣದ ಸಮಯದಲ್ಲಿ ಉಂಟು. ಆದಷ್ಟು ತಂದೆ ಸಮಾನರಾದವರಿಗೆ, ಒಡಹುಟ್ಟಿದವರಿಗೆ ಏನಾದರೂ ಒಂದು ಸಹಾಯ ಹಸ್ತ ನೀಡಿ. ಹನುಮ ಧ್ಯಾನ, ಸುಬ್ರಹ್ಮಣ್ಯ ಸ್ವಾಮಿಗೆ ತೊಗರಿ ಬೇಳೆ, ಬೆಲ್ಲವನ್ನು ಅರ್ಪಿಸಿ. ಅತಿಮುಖ್ಯವಾಗಿ ಹುರುಳಿಯನ್ನು ಎಲ್ಲಾ ಬಣ್ಣ ಮಿಶ್ರಿತವಾದ ಬಟ್ಟೆಗೆ ಏಳು ಕೆಜಿ ಅಥವಾ ೭೦೦ ಗ್ರಾಮ್ ಹಾಕಿ ಗಣಪತಿ, ಶಿವಾಲಯ ಅಥವಾ ಸುಬ್ರಹ್ಮಣ್ಯ ಸನ್ನಿಧಿಗೆ ಅರ್ಪಿಸಿ. ಅರಿಸಿನ, ಕುಂಕುಮ, ಅಡಿಕೆ, ಒಂದೆರಡು ರೂಪಾಯಿ ನಾಣ್ಯ, ಬಾಳೆಹಣ್ಣು ಇಟ್ಟು, ತೆಂಗಿನಕಾಯಿ ಇಟ್ಟು ಪೂಜೆ ಸಲ್ಲಿಸಿ ಒಳ್ಳೆಯದಾಗಲಿದೆ.

 

 

ವೃಶ್ಚಿಕ ರಾಶಿಯವರಿಗೆ ಗ್ರಹಣದ ಛಾಯೆ ಪ್ರಭಾವ ಹೇಗಿರಲಿದೆ :

ಈ ಒಂದು ಗ್ರಹಣ ನಿಮ್ಮ ಕುಟುಂಬ ಸ್ಥಾನದಲ್ಲಿ ನಡೆಯುತ್ತಿದೆ. ಅಧಿಕಾರಕ ಸೂರ್ಯ ನಿಮ್ಮ ಕಡೆ ಇದ್ದಾರೆ. ನೀವು ಗೆದ್ದಿದ್ದೀರಿ, ಆದರೆ ಗ್ರಹಣ ಕೊಕ್ಕೆಯಾಗಿ ನಿಮ್ಮ ಗೆಲುವಿಗೆ ಕೊಕ್ಕೆಯಾಗಿ ನಿಂತಿರುತ್ತದೆ. ತುಂಬಾ ದೊಡ್ಡ ಯುದ್ಧ ಮಾಡಿರುವ ನೀವು ಶಸ್ತ್ರಾಸ್ತ್ರ ಅಭ್ಯಾಸ ಮಾಡಬೇಕಾಗಿದೆ. ರಾಜಕೀಯ ಬಹುದೊಡ್ಡ ಅಧಿಕಾರದಲ್ಲಿದ್ದರೆ, ಅದೆಲ್ಲದರಿಂದ ಸನ್ಯಾಸತ್ವ ತೆಗೆದುಕೊಳ್ಳಿ ಒಳ್ಳೆಯದಾಗುವುದು. ಶತ್ರುಗಳು ಹೆಚ್ಚಾಗುತ್ತಾರೆ, ನೀವು ಹೆಚ್ಚು ಗೆದ್ದಷ್ಟು, ಹೆಚ್ಚು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ವೃಶ್ಚಿಕ ರಾಶಿಯವರು ಬಹುದೊಡ್ಡ ರಾಜಕಾರಣಿಯಾಗಿದ್ದರೆ, ಖಂಡಿತ ದೊಡ್ಡ ಹೋರಾಟ ನಡೆಸಬೇಕಾಗುತ್ತದೆ. ಮತ್ತು ವಿಶೇಷವಾಗಿ ವಿಷ್ಣು ಸಹಸ್ರನಾಮ ಪಠಿಸುವ ಅಭ್ಯಾಸ ಮಾಡಿಕೊಳ್ಳಿ, ಹನುಮ, ಬಾಲಾಜಿ ದರ್ಶನ ಮಾಡಿಕೊಳ್ಳಿ ಹನುಮ, ಶ್ರೀ ರಾಮಾಯಾಣ ಪಾರಾಯಣ ಮಾಡಿಸಿ. ನಿಮ್ಮ ಮನೆಯವರೇ ನಿಮ್ಮ ಬಹುದೊಡ್ಡ ಸ್ಥಾನಕ್ಕೆ ಕುತಂತ್ರಿಗಳಾಗಿ ತಿರುಗುತ್ತಾರೆ ಬಹಳ ಎಚ್ಚರಿಕೆ.

 

 

ನೀವು ನಿಮ್ಮ ಶಸ್ತ್ರಾಸ್ತ್ರಗಳಿಗೆ ಗುಡ್ ಬೈ ಹೇಳಿ ಗುರುವಾಗಿ ನಿಂತುಕೊಂಡು ನಿಮ್ಮ ಕೆಲಸವನ್ನು ಮಾಡಿ ಮುಗಿಸಿ. ವೃಶ್ಚಿಕ ರಾಶಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಬೇಕು. ವಿದ್ಯಾರ್ಥಿಗಳು ದೂರ ಪ್ರಯಾಣ, ದೂರದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರೆ ಅಲ್ಲೊಂದು ಹೋರಾಟ ,ತಳಮಳ ಇರುತ್ತದೆ. ತಂದೆ ತಾಯಂದಿರು, ಮಕ್ಕಳ ಯೋಗಕ್ಷೇಮ, ಅವರ ಆರೋಗ್ಯದ ಕಡೆ ಗಮನ ಕೊಟ್ಟು ಯಾವುದಾದರೂ ಒಂದು ಕ್ಷೇತ್ರದಲ್ಲಿ ತುಲಾಭಾರವನ್ನು ಮಾಡಿಸಿ ನೆಮ್ಮದಿ ದೊರೆಯಲಿದೆ. ವೃಶ್ಚಿಕ ರಾಶಿಯ ತಂದೆ-ತಾಯಿ ಅಥವಾ ಮಕ್ಕಳು ತಂದೆ ತಾಯಿಯೊಡನೆ ಜಗಳ ಆಡುವುದು, ಆರೋಗ್ಯದಲ್ಲಿ ಯಾವುದೊ ತೊಂದರೆ ಬರುವುದು ಇಂಥ ಒಂದು ಪ್ರಭಾವಗಳು ಹೆಚ್ಚಿರುತ್ತದೆ.

 

 

ನೀವು ಯಾವುದಾದರೂ ಪತ್ರ, ಅಗ್ರಿಮೆಂಟ್ ಗಳಿಗೆ ಸಹಿ ಹಾಕುವಾಗ ಕಾನೂನಾತ್ಮಕವಾಗಿದ್ದರೆ ಬಹಳ ಎಚ್ಚರಿಕೆ ವಹಿಸಿ. ಮನೆಯಲ್ಲಿ ಆಯಿತು ಅಂದರೆ ಸುಂದರ ಕಾಂಡ ಪಾರಾಯಣ ಮಾಡಿ. ಮನೆಯಲ್ಲಿ ಶಿವನಿಗೆ ಪೂಜೆ ಪುನಸ್ಕಾರ, ನೈವೇದ್ಯ ಮಾಡಿಕೊಳ್ಳಿ. ಒಂದು ಗಂಟೆ ಹಿರಿಯರ ಜೊತೆ ಕಾಲಕ್ಷೇಪ ಮಾಡುವುದು ಒಳ್ಳೆಯದು. ಅವರ ಜೊತೆ ಮಾತನಾಡಿ ಅವರ ಆಶೀರ್ವಾದ ಪಡೆದು ಕೊಂಡರೆ ಅದೇ ನಿಮಗೆ ರಾಮರ ಆಶೀರ್ವಾದ ಸಿಕ್ಕ ಹಾಗೆ ಒಳ್ಳೆಯದಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ- ಇಂದು ನಿಮ್ಮ ದಿನ ಚೆನ್ನಾಗಿದೆ. ಸೂರ್ಯ ಪಥ ಸಂಚಲನ ಆಗುತ್ತಿದೆ. ಭಾಗ್ಯವೃದ್ಧಿ, ಟೀಚರ್, ಅಸಿಸ್ಟೆಂಟ್, ಲಾಯರ್’ ಡಾಕ್ಟರ್, ಕಾನೂನು ಕನ್ಸಲ್ಟೆಂಟ್, ಮೆಡಿಕಲ್ ಕನ್ಸಲ್ಟೆಂಟ್ ಈ ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ ಅದ್ಭುತ ಪ್ರಗತಿ ನೋಡತಕ್ಕಂತ ಒಂದು ದಿನ ಚೆನ್ನಾಗಿದೆ.

 

 

ವೃಷಭ- ಸ್ವಲ್ಪ ಮನೆ, ಮಕ್ಕಳ ವಿಚಾರದಲ್ಲಿ ತಲ್ಲಣ. ಇವತ್ತು ಯಾಕೋ ಯಾವುದೊ ಹೊರೆಯ ಪ್ರಭಾವ ನಿಮಗಿರುತ್ತದೆ. ಸೂರ್ಯ ಜಪ ಮಾಡಿಕೊಳ್ಳಿ ನೆಮ್ಮದಿ ದೊರಯಲಿದೆ ಶುಭವಾಗಲಿ.

 

 

ಮಿಥುನ- ಮಿತ್ರಕಾರಕ ಪ್ರಭಾವ.! ನೀವು ಅಂದು ಯಾರಿಗೊ ಮಾಡಿದ ಸಹಾಯ, ಹಿರಿಯರಿಗಾಗಿ ಮಾಡಿದ ಸಹಾಯ ಇರಬಹುದು. ಇವತ್ತು ನಿಮಗೆ ಅದು ವರವಾಗಿ ನಿಮ್ಮ ಕೈಹಿಡಿಯಲಿದೆ. ದಾರಿಯಾಗುವುದು ತೊಂದರೆ ಇಲ್ಲ ವೃದ್ಧಿ.

 

 

ಕಟಕ- ಧೈರ್ಯ ಇವತ್ತು ನೀವು ಧೈರ್ಯದಿಂದ ನಿಮ್ಮ ಕೆಲಸದತ್ತ ಮನಸ್ಸು ಮಾಡಿ ಹೆಜ್ಜೆ ಇಟ್ಟರೆ ಆಗದಿರುವ ಕೆಲಸಗಳನ್ನೆಲ್ಲ ಸುಗಮವಾಗಿ ಮುಗಿಸಿಕೊಂಡು ಶುಭ ಸುದ್ದಿಯನ್ನು ಕೇಳುವಂತ ದಿನವಾಗಿರುತ್ತದೆ ಒಳ್ಳೆಯದಾಗಲಿ.

 

 

ಸಿಂಹ- ಇಂದು ನಿಮ್ಮ ದಿನ ಚೆನ್ನಾಗಿದೆ. ಸೂರ್ಯ ತ್ರಿಕೋನ ಭಾವದಲ್ಲಿ ಕುಳಿತಿದ್ದಾನೆ. ಅಧಿಕಾರ, ವ್ಯಾಪಾರ ,ಸರ್ಕಾರಿ ಮಟ್ಟದ ಕೆಲಸ, ಕಾರ್ಯ ಯೋಜನೆಗಳು ಮಾಡುತ್ತಿದ್ದರೆ ಅದಕ್ಕೆ ದಾರಿ ಮಾಡಿಕೊಡುವಂತ ದಿನವಾಗಿರುತ್ತದೆ. ಆದರೆ ನಿಮ್ಮ ಮಾತೇ ನಿಮಗೆ ಶತ್ರುವಾಗಿ ಪೆಟ್ಟು ನೀಡಲಿದೆ ಜಾಗರೂಕತೆ.

 

 

ಕನ್ಯಾ- ಸೂರ್ಯ ನಿಮಗೆ ಯೋಗಕಾರಕ. ವಿಪರೀತ ರಾಜಯೋಗ. ಅಧಿಕಾರ ವೊಂದು, ವ್ಯವಹಾರವೊಂದು ಕೈಗೂಡ ತಕ್ಕಂತ ಒಂದು ಸಮಯ ಬಂದಿದೆ ಹೆಜ್ಜೆ ಹಾಕಿ. ನೀವು ಲಕ್ಷ್ಮಿ ಪುತ್ರರೇ ನಿಮ್ಮ ಬಳಿ ಹಣವಿರುತ್ತದೆ. ಆದರೆ ನೀವು ಯಾವುದಕ್ಕೂ ಖರ್ಚು ಮಾಡುವುದಿಲ್ಲ ಇರಲಿ ಒಳ್ಳೆಯದೇ ಶುಭವಾಗಲಿ.

 

ತುಲಾ- ಇವತ್ತು ಯಾಕೋ ಸಿಡಿ ಸಿಡಿ. ವ್ಯವಹಾರದಲ್ಲಿ, ಕುಟುಂಬದವರ ಜೊತೆ ವಿಪರೀತ ಒಂದು ಧೈರ್ಯದಿಂದ ತೊಳಲಾಟಕ್ಕೆ ಸಿಲುಕಿಕೊಳ್ಳುತ್ತೀರಿ. ಎಡವಟ್ಟು, ಪೆಟ್ಟು ಮಾಡಿಕೊಳ್ಳುತ್ತೀರಿ ಜಾಗರೂಕತೆ.

 

ವೃಶ್ಚಿಕ- ಉದ್ಯೋಗದಲ್ಲಿ ಪ್ರಗತಿ, ವ್ಯವಸ್ಥೆಯಲ್ಲಿ ಪ್ರಗತಿ, ಕೆಲಸದಲ್ಲಿ ಪ್ರಗತಿ, ನೀವು ಮಾಡುವ ಎಲ್ಲಾ ಕೆಲಸದಲ್ಲಿ ಇವತ್ತು ಪ್ರಗತಿ ಕಾಣುವಂತಹ ಅದ್ಭುತ ದಿನವಾಗಿರಲಿದೆ ಚೆನ್ನಾಗಿದೆ. ಯೋಚಿಸಬೇಡಿ ಶುಭವಾಗಲಿ.

 

 

ಧನಸ್ಸು- ಪ್ರಮೋಷನ್, ಯಾವುದೊ ಸ್ಥಳ ಬದಲಾವಣೆ, ಉದ್ಯೋಗದಲ್ಲೊಂದು ಬದಲಾವಣೆ, ಡಾಕ್ಟರ್, ಲಾಯರ್, ಮೆಡಿಕಲ್ ಆಫೀಸರ್, ಜಡ್ಜ್, ಜಿಲ್ಲಾ ಕಲೆಕ್ಟರ್, ಗೆಜೆಟೆಡ್ ಆಫೀಸರ್ , ಲೆಕ್ಕ ಅಧಿಕಾರಿ ಸಣ್ಣ ಕೆಲಸದಲ್ಲಿ ಇದ್ದಲ್ಲಿ ಕೂಡ ನಿಮಗೆ ಒಂದು ಗೌರವ ಪಡೆಯುವಂಥ ಒಂದು ದಿನ.

 

 

ಮಕರ- ಹಿರಿಯರ ಜೊತೆ ಒಂದು ವಾಗ್ವಾದ, ನಾನು ಹೇಳಿದ್ದೆ ಸರಿ ಎಂದು ಆರೋಪ ಮಾಡಲು ಹೋಗಿ ಹಳ್ಳಕ್ಕೆ ಬೀಳುತ್ತಿರಿ. ಮಿಕ್ಕಂತೆ ತಂದೆ, ತಂದೆ ಸಮಾನರಾದವರಿಂದ ಭೂಮಿ, ಮನೆ ಯಾವುದೋ ವಿಚಾರದಲ್ಲಿ ಪ್ರಗತಿ ಶುಭಯೋಗ ನಡೆಯುವಂಥ ದಿನವಾಗುವುದು ಚೆನ್ನಾಗಿದೆ.

 

 

ಕುಂಭ- ಇವತ್ತು ನಿಮಗೆ ಕೋಪ, ಸಿಟ್ಟು ತೀವ್ರವಾಗಿರಲಿದೆ. ಆದಷ್ಟು ಕಂಟ್ರೋಲ್ ಮಾಡಿಕೊಳ್ಳುವುದು ಒಳ್ಳೆಯದು. ನಿಮಗೆ ರಾಜಯೋಗ ನಿಮ್ಮ ಶತ್ರುಗಳು ನಿಮ್ಮ ಕಾಲಿಗೆ ಬಂದು ಬಿದ್ದು, ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳುತ್ತಾರೆ ಅಂತ ಒಂದು ಸುಯೋಗ ಉಂಟು. ಆದರೆ ನಿಮ್ಮ ಮಾತು, ನಿಮ್ಮ ದುಡುಕು ಬುದ್ಧಿಯಿಂದ ಎಡವಟ್ಟು ಮಾಡಿಕೊಳ್ಳುತ್ತೀರಿ ಜಾಗರೂಕತೆ. ನಾಲ್ಕು ಜನರ ಜೊತೆ ಕೂತು ವಾದವನ್ನು ಮಂಡಿಸಿ ಒಳ್ಳೆಯದಾಗಲಿದೆ.

 

 

ಮೀನ- ಉದ್ಯೋಗ, ಸಂಗಾತಿ ವಿಚಾರದಲ್ಲಿ , ಮನೆ ಯಜಮಾನ, ಯಜಮಾನಿಯ ವಿಚಾರದಲ್ಲಿ ಒಂದು ತಳಮಳ. ಹಣಕಾಸಿನ ಗಂಟು ಬಿಡಿಸಲು ಇನ್ನೊಂದೆರಡು ಗಂಟಿಗೆ ಕೈ ಹಾಕುತ್ತೀರಿ ಜಾಗರೂಕತೆ. ಗಂಡ- ಹೆಂಡತಿ ಮಧ್ಯೆ ಜಟಾಪಟಿ ಇರಲಿದೆ ಸುಮ್ಮನಿದ್ದು ಬಿಡಿ ನಮ್ಮವರೆ ಅಲ್ಲವೇ ಯಾಕೆ ವಾದ. ಮಿಕ್ಕಂತೆ ಯಾವ ತೊಂದರೆಯು ಇಲ್ಲ ಶುಭವಾಗಲಿ.

LEAVE A REPLY

Please enter your comment!
Please enter your name here