#ದಿನ_ಭವಿಷ್ಯ #09ನೇ_ಆಗಸ್ಟ್ _2019 | Ravi Shanker Guruji Astrologer

0
147

ಮೇಷ-ಇಂದು ನಿಮಗೆ ಖುಷಿಯ ದಿನ, ಸಂಭ್ರಮದ ದಿನ, ಒಂದು ಮಟ್ಟದ ತಳಮಳ ಇದೆ. ಆದರೂ ಕೂಡ ಯಾವ ತೊಂದರೆಯೂ ಇಲ್ಲ ಹೆದರಬೇಡಿ.ಇಂದು ಯಾರಾದರೂ ಆಚಾರ್ಯರ ಸೇವೆ ಮಾಡಿ ನಿಮ್ಮ ದೋಷಗಳೆಲ್ಲ ಪರಿಹಾರವಾಗುವುದು ಶುಭವಾಗಲಿ.

ವೃಷಭ-ಕಷ್ಟಪಟ್ಟು ಫಲವನ್ನು ನೋಡಕ್ಕಂತ ದಿನ, ತೃಪ್ತಿ, ಸಂತೃಪ್ತಿಯ ದಿನ. ಇಂದು ಯಾರಾದರೂ ವಯಸ್ಸಾದ ದಂಪತಿಗಳಿಗೆ ಪ್ರಸಾದ ನೀಡಿ ಒಳ್ಳೆಯದಾಗಲಿದೆ.

ಮಿಥುನ– ಇಂದು ಐದು ಜನ ಯುವತಿಯರಿಗೆ ಎಲೆ, ಅಡಿಕೆ, ಹಣ್ಣು,ಏನಾದರೂ ಅಲಂಕಾರಿಕ ವಸ್ತು ಇಟ್ಟು ಕೊಡಿ ಬಹಳ ಒಳ್ಳೆಯದು. ಲಕ್ಷ್ಮಿಗೆ ಪ್ರಿಯವಾದುದನ್ನು ಆ ಹೆಣ್ಣು ಮಕ್ಕಳಿಗೆ ನೀಡಿ ಒಳ್ಳೆಯದಾಗಲಿದೆ.

ಕಟಕ -ಯಾವಾಗಲೂ ಸಂಸಾರದಲ್ಲಿ ಒಂದು ಬಾರ ನಿಮಗೆ ಇದ್ದೇ ಇರುತ್ತದೆ. ಗುರುಗಳಿಗೆ ಪ್ರಸಾದವನ್ನು ನೀಡಿ ಒಳ್ಳೆಯದು. ನಿಮಗೆ ಹಣ ಸಾಲ, ಯಾವುದಾದರೂ ಒಂದು ಭಾದೆ ಇರಲಿದೆ. ಮಹಾಲಕ್ಷ್ಮಿ ಹಬ್ಬದ ದಿನ ಗುರುಗಳಿಗೆ ಪ್ರಸಾದವನ್ನು ನೀಡಿ ಒಳ್ಳೆಯದಾಗಲಿದೆ.

ಸಿಂಹ– ಇಂದು ಮದುವೆಯಾಗದ ಆಚಾರ್ಯರು ಅದರಲ್ಲೂ ಶಿವನ ಪೂಜೆ ಆರಾಧಕರಿಗೆ ಬಿಲ್ವ ಪತ್ರೆಯನ್ನು ನೀಡಿ ಅವರ ಸೇವೆ ಮಾಡಿದ್ದಲ್ಲಿ ಸಾಕಷ್ಟು ಒಳ್ಳೆಯದಾಗಲಿದೆ ಶುಭವಾಗಲಿ.

ಕನ್ಯಾ– ಇಂದು ವಿಶೇಷವಾಗಿ ಒಡಹುಟ್ಟಿದವರ ಸೋದರನ ಹೆಂಡತಿ,ನಾದಿನಿ ಈ ಹೆಣ್ಣು ಮಕ್ಕಳಿಗೆ ತಾಂಬೂಲವನ್ನು ವರಮಹಾಲಕ್ಷ್ಮಿ ಹಬ್ಬದ ದಿನದಂದು ಕೊಡುವುದರಿಂದ ಬಹಳ ಒಳ್ಳೆಯದು.

ತುಲಾ– ಗುರುಸ್ಥಾನದಲ್ಲಿ ಇರುವಂತವರು ವಿಷ್ಣು ಆಲಯ, ಶಿವಾಲಯದಲ್ಲಿರುವ ಆಚಾರ್ಯರಿಗೆ ಸಿಹಿ ಅರ್ಪಿಸುವುದರಿಂದ ತುಂಬಾ ಒಳ್ಳೆಯದಾಗಲಿದೆ. ವರಮಹಾಲಕ್ಷ್ಮಿ ಅನುಗ್ರಹ ನಿಮಗೆ ಹಾಗೂ ನಿಮ್ಮ ಕುಟುಂಬದವರ ಮೇಲಿರಲಿದೆ ಶುಭವಾಗಲಿ.

ವೃಶ್ಚಿಕ– ನಿಮಗೆ ಇಂದು ಏನೋ ಒಂದು ಕೊರತೆ ಇರುತ್ತದೆ. ನಿಮ್ಮ ತಂದೆ-ತಾಯಿ, ಅತ್ತೆ- ಮಾವ, ಅಥವಾ ಹಿರಿಯ ಮುತ್ತೈದೆ ಜೀವಕ್ಕೆ ಒಂದು ಸೀರೆ, ತಾಂಬೂಲ,ಹಣ್ಣು- ಹಂಪಲು ಇದನ್ನು ನೀಡಿ ನಿಮ್ಮ ದೋಷಗಳು ಪರಿಹಾರವಾಗಲಿದೆ ಶುಭವಾಗಲಿ.

ಧನಸ್ಸು– ನಿಮಗೆ ಹಣಕಾಸಿನ ಬಾಧೆ, ಉದ್ಯೋಗ ಬಾಧೆ, ಆರೋಗ್ಯ ಬಾಧೆ ಹೆಚ್ಚು ಕಾಡಲಿದೆ ಜಾಗೃತ. ಅದರಿಂದ ಇಂದು ೮,೯,೧೦ ವರ್ಷದ ಹೆಣ್ಣು ಮಕ್ಕಳಿಗೆ ಇಂದು ಬಳೆ, ಹಣ್ಣು, ಊಟ, ವಸ್ತ್ರ, ಬಂಗಾರ, ಬೆಳ್ಳಿ ಈ ತರಹದ ಏನಾದರೂ ಒಂದು ಉಪಚಾರ ಮಾಡುವುದರಿಂದ ನಿಮ್ಮ ದೋಷದಿಂದ ಹೊರಗೆ ಬರುತ್ತೀರಿ ಶುಭವಾಗಲಿ.

ಮಕರ– ನಿಮಗೆ ನೀವೇ ಶಾಪ. ಎಷ್ಟೇ ಬಲವಿದ್ದರೂ ಕೆಲವು ಸಮಯದಲ್ಲಿ ನಿಮಗೆ ನೀವೇ ತೊಂದರೆಯಾಗುತ್ತೀರಿ. ಆದ್ದರಿಂದ ತಪ್ಪದೇ ಅಣ್ಣ ಅತ್ತಿಗೆ ಇದ್ದರೆ ವರಮಹಾಲಕ್ಷ್ಮಿ ಹಬ್ಬದಂದು ಅವರನ್ನು ಮನೆಗೆ ಕರೆದು ಏನಾದ್ರೂ ಸಿಹಿ ನೀಡಿ ಒಳ್ಳೆಯದಾಗಲಿದೆ.

ಕುಂಭ– ನಿಮಗೆ ಇರುವಂಥ ದೊಡ್ಡ ಸಮಸ್ಯೆ ನಿಮ್ಮ ಕುಟುಂಬದವರೇ! ಎಷ್ಟೇ ಮಾಡಿದರೂ ಏನಾದರೂ ಒಂದು ವ್ಯಥೆ, ಚಿಂತೆ ಉಂಟಾಗುತ್ತದೆ. ಎಷ್ಟಿದ್ದರೂ ನಿಮ್ಮ ಯೋಗ್ಯತೆಗೆ ಅನುಗುಣವಾಗಿ ಮರ್ಯಾದೆ ಸಿಗುವುದಿಲ್ಲ. ಆದರೆ ಇಂದು ಮುಖ್ಯವಾಗಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ. ಅವರಿಗೆ ಸಿಹಿ, ಹಣ್ಣು ಅಥವಾ ತಾಂಬೂಲವನ್ನು ನೀಡುವುದರಿಂದ ಒಳ್ಳೆಯದಾಗಲಿದೆ.

ಮೀನ-ಅತಿ ವಿಶೇಷವಾಗಿ ವೈರಾಗ್ಯ ನಿಮಗೆ ಕಾಡಲಿದೆ.ಆದ್ದರಿಂದ ತಪ್ಪದೇ ಇಂದು ನಿಮ್ಮ ತಂದೆ ತಾಯಿ ಅವರಿಗೆ ಏನಾದರೂ ಸಿಹಿ, ತಾಂಬೂಲವನ್ನು ನೀಡಿ. ವರಮಹಾಲಕ್ಷ್ಮಿ ಪರಿಪೂರ್ಣ ಅನುಗ್ರಹ ನಿಮ್ಮ ಮೇಲೆ ಇರಲಿದೆ ಶುಭವಾಗಲಿ.

LEAVE A REPLY

Please enter your comment!
Please enter your name here