ದಿನ ಭವಿಷ್ಯ ಆಗಸ್ಟ್ ೦೭ ೨೦೧೯

0
178

ವರಮಹಾಲಕ್ಷ್ಮಿ ಹಬ್ಬ ಆಗಸ್ಟ್ ೦೯ ರಂದು ಇರುವುದರಿಂದ ನೀವು ಬಹಳ ಕಾತುರದಿಂದ ಕಾಯುತ್ತಿದ್ದೀರ ಎಂಬುದು ನನಗೆ ತಿಳಿದಿದೆ. ಗುರುಗಳು ಏನು ಟಿಪ್ಸ್ ಕೊಡಲಿದ್ದಾರೆ.? ಎಂಬ ಯೋಚನೆ ನಿಮ್ಮಲ್ಲಿ ಕಾಡುತ್ತಿದೆ ಎಂಬುದು ನನಗೆ ತಿಳಿದಿದೆ. ಬೆಳಗಿನ ಮುಂಜಾನೆಯಲ್ಲಿ ಲಕ್ಷ್ಮಿಯನ್ನು ಕೂರಿಸಬೇಕು. ಅದಕ್ಕೆ ಇವತ್ತಿನಿಂದಲೇ ಸಿದ್ಧತೆ ಮಾಡಿಕೊಳ್ಳಿ, ಯಾಕೆಂದರೆ ರಾಹುಕಾಲ ಶುರುವಾಗಲಿದೆ. ರಾಹುಕಾಲದ ಪೂಜೆ ಲಕ್ಷ್ಮಿಗೆ ಒಲ್ಲದು. ಲಕ್ಷ್ಮಿ ನೈವೇದ್ಯ ಪ್ರಿಯೆ, ಹಾಗಾಗಿ ಇವತ್ತೇ ಅದಕ್ಕೆ ಬೇಕಾದ ವಸ್ತು, ತರಕಾರಿ, ಸೊಪ್ಪು, ಹಣ್ಣು ಇವೆಲ್ಲವನ್ನೂ ಖರೀದಿ ಮಾಡುವುದು ಸೂಕ್ತ. ಗುರುವಾರ ಸಂಜೆಯೇ ನೀವು ಬೇಗನೆ ತಿಂದು ಮಲಗಬೇಕಾಗಿದೆ. ಶುಕ್ರವಾರ ಬೆಳಗ್ಗೆ ಬೇಗನೆ ಎದ್ದು ನೀವು ತಯಾರಿ ಮಾಡಿಕೊಳ್ಳಬೇಕು. ಅದರಿಂದ ನಾಳೆ ಸಂಜೆಯ ಒಳಗೆ ಏನೇನು ಸಿದ್ಧತೆಗಳು ಬೇಕು ಮಾಡಿಕೊಳ್ಳಿ. ಕೆಲವರು ಕಲಶಪೂಜೆ ಮಾಡುತ್ತೀರಿ, ಇನ್ನು ಕೆಲವರು ಮುಖವಾಡ ಇಟ್ಟು ಪೂಜೆ ಮಾಡುತ್ತೀರಿ ಹಾಗಾಗಿ ಮೊದಲು ಅದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು. ಅತಿ ಮುಖ್ಯವಾಗಿ ಗಣಪತಿಯನ್ನು ಇಟ್ಟು ಪೂಜೆ ಮಾಡುವುದು ಬಹಳ ಶ್ರೇಷ್ಠ. ವಿನಾಯಕನ ಉಪಸ್ಥಿತಿ ನಿಮಗೆ ಸಾಕಷ್ಟು ಲಾಭದಾಯಕ, ನೀವು ಅಂದುಕೊಂಡಂತಹ ಕೆಲಸಗಳನ್ನು ನೆರವೇರಿಸುತ್ತಾನೆ ವಿನಾಯಕ ಶುಭವಾಗಲಿ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ-ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ತೊಂದರೆ ಉಂಟಾಗಲಿದೆ. ಮನಸ್ಸಿಗೇನೋ ತಳಮಳ ಉಂಟಾಗಲಿದೆ.ಕೆಲಸದ ಬಗ್ಗೆ ಹೆಚ್ಚು ಗಮನವಿರಲಿ ಶುಭವಾಗಲಿದೆ.

ವೃಷಭ-ಪರವಾಗಿಲ್ಲ ಸಾಲದ ತೊಂದರೆ, ಕುಟುಂಬದ ತೊಂದರೆ ನಿಮಗೆ ಹೆಚ್ಚು ಕಾಡಲಿದೆ ಜಾಗೃತ. ಇಂದು ವಿನಾಯಕನ ಆರಾಧನೆ ಮಾಡಿಕೊಳ್ಳಿ ಶುಭವಾಗಲಿದೆ.

ಮಿಥುನ- ಸನ್ಮಾನ,ಗೌರವ, ಹೆಸರು, ಕೀರ್ತಿ ಒಂದು ರೀತಿಯ ತೃಪ್ತಿದಾಯಕ ದಿನವಾಗಲಿದೆ. ಆದರೂ ಮನಸ್ಸಿಗೆ ಯಾಕೋ ತಳಮಳ ಉಂಟಾಗಲಿದೆ. ಮನೆ ದೇವರಿಗೆ ಇಂದು ಪೂಜೆಯನ್ನು ಸಲ್ಲಿಸಿ ಶುಭವಾಗಲಿದೆ.

ಕಟಕ- ಮನೆಯಲ್ಲಿ ಎಲ್ಲೊ ಅನಾರೋಗ್ಯದ ಸಮಸ್ಯೆ, ಹಣಕಾಸಿನ ಸಮಸ್ಯೆ ಉಂಟಾಗಲಿದೆ ಜಾಗೃತ. ಮನಸ್ಸಿನಲ್ಲಿ ಏನೋ ಆತಂಕ ಸೃಷ್ಟಿಯಾಗಲಿದೆ.ಆದರೇ ಇಂದು ನರಸಿಂಹನ ಆಲಯಕ್ಕೆ ಭೇಟಿ ನೀಡಿ ತುಪ್ಪದ ದೀಪ ಹಚ್ಚಿ ಬನ್ನಿ ಶುಭವಾಗಲಿದೆ.

ಸಿಂಹ- ಇಂದು ಅದ್ಭುತ ಪ್ರಗತಿ ನೋಡುತ್ತೀರಿ. ಯಾವ ರೀತಿಯ ತೊಂದರೆಯೂ ಇಲ್ಲ! ನಿಮ್ಮ ಬುದ್ಧಿವಂತಿಕೆಯಿಂದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೀರಿ ಶುಭವಾಗಲಿದೆ.

ಕನ್ಯಾ- ಸ್ವಲ್ಪ ಮನಸ್ಸಿಗೆ ಇಂದು ತಳಮಳ ಉಂಟಾಗಲಿದೆ. ನಿಮ್ಮ ಕೆಲಸಗಳಲ್ಲಿ ಯಾವ ರೀತಿಯ ತೊಂದರೆಯೂ ಇಲ್ಲ! ಧೈರ್ಯದಿಂದ ಹೆಜ್ಜೆ ಇಡಿ. ಆದರೆ ಇಂದು ವೆಂಕಟೇಶ್ವರ ಸನ್ನಿಧಿಗೆ ಭೇಟಿ ನೀಡಿ ಒಳ್ಳೆಯದಾಗಲಿದೆ.

ತುಲಾ- ಯಾರೋದೊ ಮಾಟ, ಮಂತ್ರ ಪ್ರಚೋದನೆ, ಹಣಕಾಸಿನ ಪ್ರಚೋದನಗೆ ಒಳಗಾಗುತ್ತೀರಿ. ಸ್ವಲ್ಪ ಜಾಗೃತೆಯಿಂದ ಇರುವುದು ಸೂಕ್ತ. ಆದಷ್ಟು ತಾಳ್ಮೆಯಿಂದ ವರ್ತಿಸಿ ದುಡುಕಬೇಡಿ.
ಭೈರವಿ, ಕಾಳಿ ಆಲಯಗಳಿಗೆ ಭೇಟಿ ನೀಡಿ ದೀಪ ಹಚ್ಚಿ ಆಕೆಯನ್ನು ಸ್ಮರಿಸಿ ಒಳ್ಳೆಯದಾಗಲಿದೆ.

ವೃಶ್ಚಿಕ- ಹಬ್ಬದ ಸಡಗರ ನಿಮಗೆ ಇಂದೆ ಕಾಡಲಿದೆ, ಪ್ರಯಾಣಗಳಲ್ಲಿ ಸ್ವಲ್ಪ ವಿಳಂಬ ಉಂಟಾಗಲಿದೆ. ದೂರದ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಒತ್ತಡ ಉಂಟಾಗುತ್ತದೆ.ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಒಳ್ಳೆಯದಾಗಲಿದೆ.

ಧನಸ್ಸು- ಉದ್ಯೋಗದಲ್ಲಿ ಒಂದು ರೀತಿ ಪ್ರಚೋದಕ ದಾಳಿ ಉಂಟಾಗುತ್ತದೆ. ನಿಮ್ಮ ಕೆಲಸದ ಬಗ್ಗೆ ಇನ್ನೊಬ್ಬರು ಸಹಿಸುವುದಿಲ್ಲ. ನಿಮ್ಮ ಬಗ್ಗೆ ಅಸಡ್ಡೆ ತೋರುವವರೇ ಜಾಸ್ತಿ ಜಾಗೃತ. ಇಂದು ದುರ್ಗಾ ದೇವಿಯ ಸನ್ನಿಧಿಯಲ್ಲಿ ಒಂದು ತಂಬಿಟ್ಟು ದೀಪ ಹಚ್ಚಿ ಬನ್ನಿ ಒಳ್ಳೆಯದಾಗಲಿದೆ.

ಮಕರ-ಕಲಾವಿದರು, ಪೊಲೀಸ್ ವಿಭಾಗದಲ್ಲಿ,ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಅದ್ಭುತ ಪ್ರಗತಿ ನೋಡುತ್ತೀರಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಲಿದೆ ಜಾಗೃತ.

ಕುಂಭ-ಅಂದುಕೊಂಡಿರುವ ಕೆಲಸ ಕಾರ್ಯಗಳಲ್ಲಿ ವಿಶೇಷ ಪ್ರಗತಿ ಕಾಣುವಂತ ದಿನ. ಉದ್ಯೋಗದಲ್ಲಿ ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ಸ್ವಲ್ಪ ಕೈ ಸಾಲ, ಹಣಕಾಸಿನ ಸ್ಥಿತಿಗಳು ಸ್ವಲ್ಪ ಎಳೆದಾಟ ಅನ್ನಿಸುತ್ತದೆ ನಿಭಾಯಿಸಿಕೊಳ್ಳಿ ಶುಭವಾಗಲಿದೆ.

ಮೀನ -ಇಂದು ನಿಮ್ಮ ದಿನ ಚೆನ್ನಾಗಿದೆ. ವ್ಯವಹಾರ, ಭೂಮಿ, ಹಣಕಾಸು, ವಕೀಲ, ಮಂತ್ರಿ, ರಾಜಕಾರಣ ಇಂಥ ವಿಚಾರಗಳಲ್ಲಿ ಯಾವುದೊ ಒಂದು ಅಪವಾದ ನಿಮ್ಮನ್ನು ಕಾಡುತ್ತದೆ ಜಾಗೃತ. ಶಿವನ ಆರಾಧನೆ ಮಾಡಿಕೊಳ್ಳಿ ಶುಭವಾಗಲಿದೆ.

LEAVE A REPLY

Please enter your comment!
Please enter your name here