ಮೇಷ– ಆರ್ಕಿಟೆಕ್, ಎಂಜಿನಿಯರಿಂಗ್, ರಕ್ಷಣಾ ಇಲಾಖೆ, ಪೋಲೀಸ್ ಇಲಾಖೆಯಲ್ಲಿ ಅದ್ಭುತ ಪ್ರಗತಿ ಕಾಣತಕ್ಕಂತ ದಿನ. ಯಾವ ಯೋಚನೆಯುಯಿಲ್ಲ ಶುಭವಾಗಲಿದೆ.
ವೃಷಭ– ನಿಮ್ಮ ದಿನ ಚೆನ್ನಾಗಿದೆ. ಧೈರ್ಯವಾಗಿ ಯಾವ ಕೆಲಸ ಮಾಡುತ್ತೀರಿ, ಅದರಲ್ಲಿ ಅದ್ಭುತ ಪ್ರಗತಿ ಕಾಣುತ್ತೀರಿ,ಧೈರ್ಯವಾಗಿ ಮುನ್ನುಗ್ಗಿ. ಯಾವ ತೊಂದರೆಯೂ ಇಲ್ಲ ಜಾಗೃತ.
ಮಿಥುನ-ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಒಡಹುಟ್ಟಿದವರೊಡನೆ ಸೇರಿ ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ನಿಧಾನ ಪ್ರಗತಿಯಲ್ಲಿ ಲಾಭವನ್ನು ನೋಡುತ್ತೀರಿ ಶುಭವಾಗಲಿದೆ.
ಕಟಕ-ಸ್ವಲ್ಪ ಇವತ್ತು ನಿಮಗೆ ಬೇವು- ಬೆಲ್ಲ, ಆತುರ ಪಟ್ಟರೆ ಕುಟುಂಬ ಅಥವಾ ಉದ್ಯೋಗದಲ್ಲಿ ಒಂದು ಪೆಟ್ಟು ತಂದುಕೊಳ್ಳುತ್ತೀರಿ ಜಾಗೃತ.
ಸಿಂಹ-ವ್ಯವಹಾರದಲ್ಲಿ ಉದ್ಯೋಗ ನಿಮಿತ್ತ, ಒಂದು ಖರ್ಚು ಉಂಟಾಗಲಿದೆ. ಕುಟುಂಬ ನಿಮಿತ್ತ ಒಂದು ಯೋಚನೆ ಕಾಡಲಿದೆ. ಯಾವುದೇ ಜವಾಬ್ದಾರಿಯನ್ನು ಕೂಡ ನೀವು ನಿಭಾಯಿಸುತ್ತೀರಿ, ಆ ಶಕ್ತಿ ನಿಮ್ಮಲ್ಲಿದೆ, ಆತಂಕ ಪಡುಬೇಡಿ ಶುಭವಾಗಲಿದೆ.
ಕನ್ಯಾ-ಇಂದು ಉದ್ಯೋಗ ನಿಮಿತ್ತ, ವ್ಯವಹಾರ ನಿಮಿತ್ತ ಸಾಕಷ್ಟು ಒತ್ತಡ ಉಂಟಾಗಲಿದೆ. ಆದರೂ ಇಂದು ಜವಾಬ್ದಾರಿಯಿಂದ ನೀವು ನಿಭಾಯಿಸುತ್ತೀರಿ ಶುಭವಾಗಲಿದೆ.
ತುಲಾ– ಗರ್ಭಿಣಿ ಸ್ತ್ರೀಯರು ಹೆಚ್ಚು ಜಾಗ್ರತ. ಗಾಡಿ ವಾಹನ ಚಲಾಯಿಸುವವರು ಜಾಗರೂಕತೆ. ತೊಂದರೆ ಇರುವ ಜಮೀನು, ಭೂಮಿಯನ್ನು ಖರೀದಿ ಮಾಡಬೇಡಿ ಜಾಗೃತ.
ವೃಶ್ಚಿಕ– ಭೂಮಿ, ಮನೆ ವಿಚಾರ, ವ್ಯವಹಾರ ವಿಚಾರ, ಉದ್ಯೋಗ ವಿಚಾರ ತುಂಬಾ ಚೆನ್ನಾಗಿದೆ.ನಿಮಗೆ ಏನಾದರೂ ಪರ್ಚೇಸ್ ಮಾಡ್ಬೇಕು ಅಂದುಕೊಂಡಿದ್ದೀರಾ ಪ್ರಯತ್ನ ಮಾಡಿ ಯಶಸ್ಸು ಕಾಣುತ್ತೀರಿ.
ಧನಸ್ಸು– ಇಂದು ನಿಮ್ಮ ದಿನ ಚೆನ್ನಾಗಿದೆ. ಭಾಗ್ಯ ಸ್ಥಾನದಲ್ಲಿ ಕುಜ ಕುಳಿತಿದ್ದಾನೆ. ಗೌರವ, ಕಿರೀಟ, ಸನ್ಮಾನ, ಹೆಸರು, ಪ್ರತಿಷ್ಠೆ ಇವೆಲ್ಲವೂ ನಿಮಗೆ ದೊರೆಯಲಿದೆ. ಯಾವ ತೊಂದರೆಯೂ ಇಲ್ಲ ಶುಭವಾಗಲಿ.
ಮಕರ-ಪ್ರಯಾಣದಲ್ಲಿ ನಷ್ಟ, ಭೂಮಿ, ವ್ಯವಹಾರದಲ್ಲಿ ನಷ್ಟ, ಪಾರ್ಟ್ನರ್ಶಿಪ್ ಹಣವನ್ನು ಹೂಡಬೇಡಿ ಒಳ್ಳೆಯದಲ್ಲ.! ಮನೆಯಿಂದ ಹೊರ ಹೋಗುವ ಮುನ್ನ ಒಂದು ಸ್ಪೂನ್ ಜೇನುತುಪ್ಪ ಸೇವಿಸಿ ಒಳ್ಳೆಯದಾಗಲಿದೆ.
ಕುಂಭ– ನೀವು ಸಾಕಷ್ಟು ಗಟ್ಟಿಯಾಗಿ ನಿಲ್ಲುತ್ತೀರಿ. ತುಂಬಾ ಉತ್ಸಾಹದಿಂದ ಕೆಲಸ ಮಾಡುವಷ್ಟು ಯೋಚನೆ ಮಾಡುತ್ತಿದ್ದೀರಿ. ತುಂಬಾ ಉತ್ಸಾಹ ಒಳ್ಳೆಯದಲ್ಲ, ಆದಷ್ಟು ಇಂದು ದುಡಕಬೇಡಿ ಒಳ್ಳೆಯದಾಗಲಿದೆ.
ಮೀನ– ಉದ್ಯೋಗದಲ್ಲಿ, ಪ್ರಯಾಣದಲ್ಲಿ ಸಂಕಷ್ಟ ಒದಗಲಿದೆ. ಯಾರೂ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂಬ ಯೋಚನೆ ನಿಮ್ಮನ್ನು ಕಾಡಲಿದೆ. ಪಿಸ್ತೂಲ ಪ್ರಾಬ್ಲಂನಿಂದ ಬಳಲುತ್ತಿದ್ದೀರಿ, ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಿ. ನರಸಿಂಹನ ಆರಾಧನೆ ಮಾಡಿಕೊಳ್ಳಿ ಶುಭವಾಗಲಿದೆ.