ದಿನ ಭವಿಷ್ಯ ಆಗಸ್ಟ್ ೦೮ ೨೦೧೯

0
131

ಮೇಷ-ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ, ಹಣಕಾಸಿನ ವಿಚಾರದಲ್ಲಿ ಸ್ವಲ್ಪ ತೊಂದರೆ ಉಂಟಾಗಲಿದೆ ಜಾಗೃತ.

ವೃಷಭ– ಕುಟುಂಬದ ಜವಾಬ್ದಾರಿ, ಹಬ್ಬದ ವಾತಾವರಣ ಮನೆಯಲ್ಲಿ ಅದಕ್ಕಾಗಿ ಸ್ವಲ್ಪ ಹಣ ಖರ್ಚು ಹೆಚ್ಚಾಗಲಿದೆ. ಯಾರಿಗೂ ಶ್ಯೂರಿಟಿ ನೀಡಬೇಡಿ, ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಸೂಕ್ತ.

ಮಿಥುನ– ಪರವಾಗಿಲ್ಲ ಇಂದು ನಿಮಗೆ ಬೇವು-ಬೆಲ್ಲ ಎರಡೂ ಇರುವಂತ ದಿನ ನಿಮ್ಮದಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರಲಿ ಶುಭವಾಗಲಿದೆ.

ಕಟಕ -ಸ್ವಲ್ಪ ಸಾಲ, ವ್ಯವಹಾರದಲ್ಲಿ ತೊಂದರೆ ಉಂಟಾಗುತ್ತದೆ ಜಾಗೃತ. ಬಡ್ಡಿ, ಚಕ್ರ ಬಡ್ಡಿ, ಸಾರ್ವಜನಿಕ ಅವಮಾನ ಇಂಥ ಸನ್ನಿವೇಶಗಳು ಎದುರಾಗಲಿವೆ. ವರಮಹಾಲಕ್ಷ್ಮಿ ಹಬ್ಬದ ದಿನ ಒಂದು ಸಂಕಲ್ಪ ಮಾಡಿಕೊಳ್ಳಿ ಶುಭವಾಗಲಿದೆ.

ಸಿಂಹ– ಜವಾಬ್ದಾರಿಗಳನ್ನು ನಿಭಾಯಿಸುತ್ತೇನ.! ಎಂಬ ಅನುಮಾನ ನಿಮ್ಮಲ್ಲಿ ಮೂಡಲಿದೆ. ನಾಳೆ ವರಮಹಾಲಕ್ಷ್ಮಿ ಹಬ್ಬದ ದಿನದಂದು ಗೋಪೂಜೆ ಮಾಡಿಸಿ ಶುಭವಾಗಲಿದೆ.

ಕನ್ಯಾ– ಬಹು ವಿಶೇಷವಾದಂಥ ದಿನ,ಬುದ್ಧಿ ಉಪಯೋಗಿಸಿ ಮಾಡುವಂಥ ಕೆಲಸಗಳಲ್ಲಿ ಅದ್ಭುತ ಪ್ರಗತಿ ನೋಡುತ್ತೀರಿ. ಉತ್ತಮ ಅನುಕೂಲ ಪಡೆಯುವಂತ ದಿನ, ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಓದಬೇಕಾಗಿದೆ ಶುಭವಾಗಲಿ.

ತುಲಾ– ಯಾರಿಂದಲೊ ಅಪವಾದ ನಿಮಗೆ ಬರುತ್ತದೆ ಜಾಗೃತ.ಇಂದು ದೈಹಿಕ, ವ್ಯಾವಹಾರಿಕವಾಗಿ ಸಿಲುಕಿಕೊಳ್ಳುತ್ತೀರಿ ಇದರ ಬಗ್ಗೆ ಹೆಚ್ಚು ಜಾಗೃತರಾಗಿರಿ.! ಶುಭವಾಗಲಿ.

ವೃಶ್ಚಿಕ– ಕುಟುಂಬದ ಜವಾಬ್ದಾರಿ,ವ್ಯವಹಾರ ಜವಾಬ್ದಾರಿ ಸ್ವಲ್ಪ ಹೊರೆಯಾಗಲಿದೆ. ಗುರುಗಳ ಮಾರ್ಗದರ್ಶನ ಪಡೆದು ನಿಮ್ಮ ಜೀವನದಲ್ಲಿ ಉತ್ತಮ ನಡೆಯನ್ನು ನೋಡುತ್ತೀರಿ. ಸೆಪ್ಟೆಂಬರ್ ತಿಂಗಳಲ್ಲಿ ನಿಮಗೆ ಅದ್ಭುತ ದಿನಗಳು ಕಾದಿದೆ ಶುಭವಾಗಲಿ.

ಧನಸ್ಸು-ಇಂದು ನಿಮ್ಮ ದಿನ ಚೆನ್ನಾಗಿದೆ. ಆಕಸ್ಮಿಕ ದೈವದರ್ಶನ, ಗುರುದರ್ಶನ ಯಾವುದೋ ಪ್ರಸಾದ ನಿಮ್ಮ ಮನೆಗೇ ಬರಲಿದೆ. ಯಾರಿಂದಲೊ ನಿಮಗೆ ಒಳ್ಳೆ ಸುದ್ದಿ ಸಿಗಲಿದೆ ಶುಭವಾಗಲಿ.

ಮಕರ– ಕೆಲಸದಲ್ಲಿ, ವ್ಯವಹಾರದಲ್ಲಿ ಬದಲಾವಣೆ. ಮನಸ್ಸಿಗೆ ಸ್ವಲ್ಪ ತೊಳಲಾಟ ಉಂಟಾಗಲಿದೆ. ಹಣಕಾಸು ವಿಚಾರದಲ್ಲಿ ಗೊಂದಲ,ಇಂದು ಯಾರಾದರೂ ಮುತ್ತೈದೆಯರಿಗೆ ಅಕ್ಷತೆಕಾಳು ಕೊಟ್ಟು ಆಶೀರ್ವಾದ ಪಡೆದುಕೊಳ್ಳಿ ಒಳ್ಳೆಯದಾಗಲಿದೆ.

ಕುಂಭ- ಇಂದು ಏನೋ ತೊಳಲಾಟ ಉಂಟಾಗಲಿದೆ. ಬುದ್ಧಿ ಉಪಯೋಗಿಸಿ ಮಾಡತಕ್ಕಂತಹ ಕೆಲಸಗಳಲ್ಲಿ ಪ್ರಗತಿ ನೋಡುತ್ತೀರಿ. ಯಾರಿಗೂ ಸಾಲ ಕೊಡಬೇಡಿ, ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ ಶುಭವಾಗಲಿದೆ.

ಮೀನ-ಇಂದು ಇಲ್ಲ-ಸಲ್ಲದ ವ್ಯವಹಾರಗಳಿಂದ ಸ್ವಲ್ಪ ತೊಂದರೆ ಉಂಟಾಗಲಿದೆ. ಆದರೆ ಇಂದು ಸಾಯಿ ಬಾಬಾ ಅಥವಾ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಭೇಟಿ ನೀಡಿ ಸಣ್ಣ ಅರ್ಚನೆ ಮಾಡಿಸಿಕೊಳ್ಳಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here