ದಿನ ಭವಿಷ್ಯ ಆಗಸ್ಟ್ ೨೭ ೨೦೧೯

0
1327

ಈ ಷಷ್ಠಗ್ರಹ ಸಿಂಹ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳಿ.
ತುಲಾ ರಾಶಿ ನೋಡಿ ನಿಮಗೆ ಹನ್ನೊಂದನೆ ಮನೆಯಲ್ಲಿ ಷಷ್ಠ ಗ್ರಹ ಕೂತಿದ್ದಾನೆ. ಅದರ ಮೇಲೆ ಗುರು ದೃಷ್ಟಿಯ ಪ್ರಭಾವ ಇರುವುದರಿಂದ ನಿಮ್ಮ ಮೇಲೆ ವಿಚಿತ್ರವಾದ ಸನ್ನಿವೇಶಗಳನ್ನು ತಂದಿಡುತ್ತದೆ.ಬಹಳ ಎಚ್ಚರಿಕೆಯಿಂದ ಇರಬೇಕು. ಅಧಿಕಾರದಲ್ಲಿ ಇದ್ದೇನೆ ಎಂಬ ಗರ್ವದಿಂದ ಇರುವವರಿಗೆ, ಅಧಿಕಾರ ಹೋಗುವಂತಹ ಪರಿಸ್ಥಿತಿಗಳು ಎದುರಾಗಲಿದೆ. ಅದರಲ್ಲೂ ಸಿಂಹರಾಶಿಯನ್ನು ಶಿವರಾಶಿ ಎಂದು ಕರೆಯುತ್ತಾರೆ. ಯಾಕೆಂದರೆ ಸಿಂಹ ರಾಶಿ ಶಿವನಿಗೆ ಪೂರ್ಣವಾದ ರಾಶಿ. ನಮಗೆ ಫಲ ಇದ್ದಾಗ ನಮ್ಮ ಮಾತಿನ ವರಸೆಯೇ ಬೇರೆ ರೀತಿ ಇರುತ್ತದೆ. ಆದರೆ ಅದು ಶಾಶ್ವತವಲ್ಲ. ದನವಿದ್ದಾಗ ನಮ್ಮ ಆಲೋಚನೆಯೇ ಬೇರೆ ರೀತಿಯಲ್ಲಿ, ಈ ರೀತಿಯ ಎಡವಟ್ಟುಗಳು ನಾವು ಮಾಡಿಕೊಳ್ಳುವುದು ಜಾಸ್ತಿ. ಕಾಲವು ಎಲ್ಲದಕ್ಕೂ ಉತ್ತರ ಕೊಟ್ಟೆ ಕೊಡುತ್ತದೆ. ನಾವು ಬಿದ್ದಾಗ ನಾವು ಮಾಡಿದ ಕೆಲಸವೆಲ್ಲ ಸರಿಯೆನ್ನಿಸುತ್ತದೆ. ತುಲಾ ರಾಶಿಯವರು ಸ್ವಲ್ಪ ಎಚ್ಚರದಿಂದ ಇರಬೇಕಾಗಿದೆ ಜಾಗೃತ.

ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ,

ಮೇಷ– ಇಂದು ಯಾವುದೊ ಹಳೇ ತಲೆನೋವು, ಗಾಯ, ಹಣಕಾಸಿನ ವಿಚಾರದಲ್ಲಿ ತೀರಾ ಯೋಚನೆ ಮಾಡುತ್ತಿದ್ದೀರಿ. ಇಂದು ಯಾವುದೇ ಕಾಗದ ಪತ್ರಗಳಿಗೆ ನಿಮ್ಮ ಸಹಿ ಹಾಕಲು ಹೋಗಬೇಡಿ.ವಿನಾಯಕನ ಆರಾಧನೆ ಸ್ತೋತ್ರಗಳನ್ನು ಜಪಿಸಿ ಒಳ್ಳೆಯದಾಗಲಿದೆ.

ವೃಷಭ – ಯಾವಾಗ್ಲೋ ಮಾಡಿಕೊಂಡ ನೋವು,ಮೋಸ, ನಿರ್ಧಾರದಿಂದ ಮಾಡಿಕೊಂಡ ಎಡವಟ್ಟು ಇಂದು ನಿಮ್ಮನ್ನು ಕಾಡಲಿದೆ. ಆದಷ್ಟು ಇಂದು ಗುರುವಿನ ಆಶೀರ್ವಾದ,ಗುರು ಕ್ಷೇತ್ರಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿ ಒಳ್ಳೆಯದಾಗಲಿದೆ.

ಮಿಥುನ– ಗುರು ಬೇರೆ ನಿಮಗೆ ಮಾರಕ. ಗುರು ಕೆಟ್ಟರೆ ಸಾರ್ವಜನಿಕ ಅವಮಾನ ನಿಮಗೆ ಎದುರಾಗಲಿದೆ. ಯಾವುದೋ ಒಂದು ದೊಡ್ಡ ಸ್ಕ್ಯಾಂಡಲ್ ಹಣಕಾಸಿನ ಸ್ಕ್ಯಾಂಡಲ್ ವ್ಯವಹಾರದ ಸ್ಕ್ಯಾಂಡಲ್ ಮಾಡಿಕೊಂಡಿದ್ದು, ಇಂದು ನಿಮ್ಮ ಕುತ್ತಿಗೆ ಉರುಳಾಗಿ ಕಾಡಲಿದೆ.

ಕಟಕ– ಪರವಾಗಿಲ್ಲ ಮನೆಯವರ ಚಿಂತೆ, ಕುಟುಂಬದವರ ಚಿಂತೆ’ ವ್ಯವಹಾರಗಳ ಚಿಂತೆಗಳು ಉಂಟಾಗಲಿದೆ. ವಿಷ್ಣು ಸಹಸ್ರನಾಮ ಪಠಿಸಿ, ವಿಷ್ಣು ಆಲಯಕ್ಕೆ ಭೇಟಿ ನೀಡಿ ಒಳ್ಳೆಯದಾಗಲಿದೆ.

ಸಿಂಹ– ಧರ್ಮಬದ್ಧವಾಗಿ, ನ್ಯಾಯಬದ್ಧವಾಗಿ ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿ ನೋಡುತ್ತೀರಿ. ಲಾಯರ್, ಪತ್ರಿಕೋದ್ಯಮ, ರೈಟರ್ಸ್ ಇಂಥ ಉದ್ಯೋಗ, ವ್ಯವಹಾರದಲ್ಲಿ ಇರುವವರಿಗೆ ಅನುಕೂಲಕರವಾದಂತಹ ದಿನ.

ಕನ್ಯಾ– ಇಂದು ಎಲ್ಲೋ ಒಂದು ತೊಳಲಾಡುವಂತ ಪರಿಸ್ಥಿತಿ, ಕುಟುಂಬ ವಿಚಾರ,ವ್ಯವಹಾರ ವಿಚಾರ, ಆತುರದಿಂದ ನಿರ್ಧಾರ ಕೈಗೊಳ್ಳಬೇಡಿ. ಕೆಲಸದ ಬಗ್ಗೆ ವಿಚಾರಿಸಿ,ಆಲೋಚಿಸಿ ಹೆಜ್ಜೆ ಇಡುವುದು ಒಳ್ಳೆಯದು. ಕುಟುಂಬ ಲೆಕ್ಕಾಚಾರ ಹಾಕಲು ಹೋಗಬೇಡಿ ಜಾಗೃತ ಶುಭವಾಗಲಿ.

ತುಲಾ– ಇಂದು ನಿಮ್ಮ ದಿನ ಪರವಾಗಿಲ್ಲ. ವ್ಯವಹಾರಗಳಲ್ಲಿ ಅನುಕೂಲವನ್ನು ನೋಡುವಂಥ ದಿನ. ವ್ಯವಹಾರ, ದಿನಸಿ ಅಂಗಡಿ,ಸರ್ವೀಸ್, ಎಲೆಕ್ಟ್ರಿಕಲ್ ಇಂಥ ವ್ಯವಹಾರಗಳು ತೊಡಗಿಸಿಕೊಂಡಿರುವವರಿಗೆ ಅನುಕೂಲಕರವಾದಂತಹ ದಿನ ಚೆನ್ನಾಗಿದೆ.

ವೃಶ್ಚಿಕ– ಇಂದು ಭಗವಂತ ನಿಮಗೆ ಯಾವುದೇ ರೀತಿಯಲ್ಲಿ ಖರ್ಚನ್ನು ತಂದಿಡುತ್ತಾನೆ. ಇಂದು ಗಣಪತಿಗೆ ಸಂಕಲ್ಪ, ಅರ್ಚನೆ ಮಾಡಿಕೊಳ್ಳಿ ಶುಭವಾಗಲಿದೆ.

ಧನಸ್ಸು– ಇಂದು ಕೊಡುವ, ತೆಗೆದುಕೊಳ್ಳುವ ವ್ಯವಹಾರಗಳಲ್ಲಿ ಜಾಗ್ರತ. ಮೈಮರೆತು, ಮನಸ್ಸು ಮರೆತು ಏನೋ ಒಂದು ಮಾತಾಡುವುದು, ಬೇರೆಯವರನ್ನು ನೋಯಿಸುವುದು ಇಂಥ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಗಡಿಬಿಡಿ, ಏರುಪೇರು ಮಾಡಿಕೊಳ್ಳುತ್ತೀರಿ. ವಿಶ್ವ ಸಹಸ್ರನಾಮ ಪಠಿಸಿ ಒಳ್ಳೆಯದಾಗಲಿದೆ.

ಮಕರ– ಇಂದು ಯಾರಿಗೋ ಸಾಲ ಕೊಟ್ಟಿದ್ದೀರಿ, ಅವನು ನಿಮ್ಮಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಅಥವಾ ನೀವು ಇನ್ನೊಬ್ಬರತ್ತ ಸಾಲ ಮಾಡಿ ಓಡಿ ಹೋಗುತ್ತೀರಿ.ಅಂಥ ಪರಿಸ್ಥಿತಿಗಳು ಇಂದು ಎದುರಾಗಲಿವೆ. ಪ್ರತಿಯೊಬ್ಬರೊಳಗೂ ಒಬ್ಬ ಕಳ್ಳ ಇದ್ದಾನೆ, ಇಂದು ನೀವು ಅದೇ ರೀತಿ ಮಾಡುತ್ತೀರಿ ಜಾಗೃತ.

ಕುಂಭ– ತುಂಬ ಜಾಣತನದಿಂದ ಬುದ್ಧಿಯನ್ನು ಉಪಯೋಗಿಸಿ, ನಿಮ್ಮ ವ್ಯವಹಾರಗಳಲ್ಲಿ ಚಾಕಚಕ್ಯತೆಯಿಂದ ಮಾಡುತ್ತೀರಿ. ಬರುವಂಥ ಆರ್ಥಿಕ ಸಮಸ್ಯೆಯಿಂದ ಹೊರಬರಲು ದಾರಿಯಾಗುತ್ತದೆ ಶುಭವಾಗಲಿ.

ಮೀನ-ಇಂದು ಭಾಗ್ಯ ವೃದ್ಧಿ, ವಿಶೇಷ ಧನ ಸಂಪಾದನೆ, ಬುದ್ಧಿಶಕ್ತಿ, ಕಸ್ಟಮರ್ ಸರ್ವೀಸ್,ಟೀಚರ್, ಟ್ರೈನಿಂಗ್ ಸೆಂಟರ್, ಪ್ಲೇ ಹೋಂ ಇಂಥ ಹುದ್ದೆಯಲ್ಲಿ ಇರುವವರಿಗೆ ತುಂಬಾ ಅನುಕೂಲವನ್ನು ನೋಡಕ್ಕಂತ ದಿನ ಎಲ್ಲರಿಗೂ ಒಳ್ಳೆಯದಾಗಲಿ.

LEAVE A REPLY

Please enter your comment!
Please enter your name here