ತನಿಖಾಧಿಕಾರಿ ಮೋನಿಕಾ ಶರ್ಮಾ ಮುಂದೆ ಹಾಜರಾಗಲಿರುವ ಡಿಕೆಶಿ.!!

0
255

ಡಿಕೆಶಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರವಾದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಮೋನಿಕಾ ಶರ್ಮಾ ಮುಂದೆ ಡಿಕೆಶಿ ಹಾಜರಾಗಬೇಕಿದೆ. ಹೌದು, ಮೋನಿಕಾ ಶರ್ಮಾ ಅವರು ಜಾರಿ ನಿರ್ದೇಶನಾಲಯ (ಇಡಿ) ಜಂಟಿ ನಿರ್ದೇಶಕರಾಗಿದ್ದು, ಡಿಕೆಶಿಗೆ ಪ್ರಶ್ನೆಗಳ ಸುರಿಮಳೆ ಹಾಕಲು ಸಜ್ಜಾಗಿದ್ದಾರೆ. ಈಗಾಗಲೇ ದೆಹಲಿಗೆ ಟಿಕೆಟ್ ಬುಕ್ ಮಾಡಿ ಪ್ರಯಾಣ ಆರಂಭಿಸಿರುವ ಡಿಕೆಶಿ ಇಂದು ಸಂಜೆ ಆರು ಗಂಟೆಯೊಳಗೆ ಮೋನಿಕಾ ಶರ್ಮಾ ಅವರ ಮುಂದೆ ಹಾಜರಾಗಬೇಕಾಗಿದೆ.

ಜಾರಿ ನಿರ್ದೇಶನಾಲಯದಲ್ಲಿ ಜಂಟಿನಿರ್ದೇಶಕರಾಗಿರುವ ಮೋನಿಕಾ ಅವರು ತನಿಖೆಯನ್ನು ನಿರ್ವಹಿಸಲಿದ್ದಾರೆ. ಮಧ್ಯಂತರ ರಕ್ಷಣೆಯನ್ನು ಕೋರಿದಂತೆ ಡಿಕೆಶಿವಕುಮಾರ್ ಅರ್ಜಿ ತಿರಸ್ಕಾರಗೊಂಡಿದ್ದು, ಇದರ ಹಿನ್ನೆಲೆಯಲ್ಲಿ ಈ ವಿಚಾರವನ್ನು ಎದುರು ನೋಡಬೇಕಾಗಿದೆ.

ದೆಹಲಿಗೆ ತಲುಪಿದ ಬಳಿಕ ಕಾನೂನು ತಜ್ಞರನ್ನು ಭೇಟಿ ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಮಾತುಕತೆ ನಡೆಸಲಿದ್ದಾರೆ. ಅನಂತರ ತನಿಖಾಧಿಕಾರಿ ಮೋನಿಕಾ ಅವರ ಮುಂದೆ ಹಾಜರಾಗಲಿದ್ದಾರೆ ಎಂಬುದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here