ಅತ್ಯಾಚಾರಗಳು ದೇವಾಲಯಗಳಲ್ಲಿ ಆಗುತ್ತವೆ ಎಂದ ದಿಗ್ವಿಜಯ್ ಸಿಂಗ್..!

0
154

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ದಿಗ್ಗಿ, ಇದೀಗ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದು, ದಿಗ್ವಿಜಯ್ ಸಿಂಗ್ ವಿರುದ್ದ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಹೌದು, ಮಧ್ಯಪ್ರದೇಶದ ಅಧ್ಯಾತ್ಮ ಸಂಘಟನೆಯೊಂದು ಆಯೋಜಿಸಿದ್ದ ‘ಸಂತ್ ಸಮಾಗಮ್’ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದಿಗ್ವಿಜಯ್ ಸಿಂಗ್, ಅತ್ಯಾಚಾರಗಳು ಹಿಂದೂ ದೇವಾಲಯಗಳಲ್ಲಿ ಆಗುತ್ತವೆ. ಕೇಸರಿ ಅಥವಾ ಕಾಷಾಯ ವಸ್ತ್ರ ಧರಿಸಿರುವ ಜನರು ಅತ್ಯಾಚಾರ ಮಾಡುವುದು ಮಾಮೂಲಾಗಿದೆ. ಹೀಗಾಗಿಯೇ ದೇಶದಲ್ಲಿ ಹೆಚ್ಚಿನ ಅತ್ಯಾಚಾರಗಳು ದೇವಾಲಯಗಳಲ್ಲಿ ನಡೆಯುತ್ತವೆ ಎನ್ನುವ ಹೇಳಿಕೆ ನೀಡಿದ್ದು, ಈ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಇನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯ ವಿರುದ್ಧ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, “ಇಂಥ ಅಸಂಬದ್ದ ಹೇಳಿಕೆಗಳನ್ನು ನೀಡುವ ಮೂಲಕ ದಿಗ್ವಿಜಯ್ ಸಿಂಗ್ ಸನಾತನ ಹಿಂದೂ ಧರ್ಮಕ್ಕೆ ಮತ್ತು ನಮ್ಮ ಸಂತರಿಗೆ ಅವಮಾನ ಮಾಡುತ್ತಿದ್ದಾರೆ. ಯಾರೋ ಒಬ್ಬರು ಸಂತ ಅಪರಾಧ ಮಾಡಿದರೆ ಕಾವಿ ಬಟ್ಟೆ ಧರಿಸಿರುವ ಎಲ್ಲರನ್ನೂ ಅಪರಾಧಿಗಳು ಎಂದು ನೋಡುವ ದಿಗ್ವಿಜಯ್ ಸಿಂಗ್‍ಗೆ ಆ ದೇವರು ಒಂದಷ್ಡು ಒಳ್ಳೆಯ ಬುದ್ದಿ ನೀಡಲಿ. ಇಲ್ಲದಿದ್ರೆ ಜನರೇ ಆತನಿಗೆ ಬುದ್ದಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here