ಹೈ ಸ್ಕೂಲ್‌ ಪಾಸಾಗದಿದ್ದರೂ ಈತ ಕೋಟಿ – ಕೋಟಿ ಸಂಪಾದನೆ ಮಾಡುವ ಒಡೆಯ!

0
369

ಕೋಟಿ ಸಂಪಾದನೆಗೆ ಜಾಸ್ತಿ ಓದ ಬೇಕು ಕಣೋ ಎಂದು ಮನೆಯಲ್ಲಿ ದಿನಲೂ ಪೋಷಕರು ಹೇಳುತ್ತಾರೆ. ಆದರೆ ಒಂದು ಡಿಗ್ರಿ ಸರ್ಟಿಫಿಕೇಟ್ ಕೂಡ ಇಲ್ಲದೆ ಅದು ಹೇಗೆ ದುಡಿಯುವುದಕ್ಕೆ ಸಾಧ್ಯವೇ ಎಂದು ಅಚ್ಚರಿ ಮೂಡುತ್ತದೆ. ಹೌದು, ಯಾವುದಾದರೊಂದು ಬ್ಯುಸಿನೆಸ್‌ ಆರಂಭಿಸಬೇಕಾದರೆ ಕನಿಷ್ಠ ಜ್ಞಾನವಾದರೂ ಇರಲೇಬೇಕು. ಆದರೆ ಯಾವುದೇ ಜ್ಞಾನವಿಲ್ಲದೇ ಕೋಟಿಯೊಡೆಯನಾಗಿದ್ದಾನೆ ಈ ಯುವಕ.

 


ಹೌದು, ಉತ್ತರಪ್ರದೇಶದ ಲಖನೌ ಅಂದರೆ ಚಿಕನ್ ಎಂಬ್ರಾಯಿಡರಿಗೆ ಬಹಳ ಹೆಸರುವಾಸಿ. 17ನೇ ಶತಮಾನದ ಮೊಘಲರ ಕಾಲಘಟ್ಟದಿಂದಲೂ ಇದು ಪ್ರಖ್ಯಾತಿ. ಅದೇ ಕಲೆಯನ್ನೇ ಆಧರಿಸಿ ಹಲವರು ವಿವಿಧ ರೀತಿಯಲ್ಲಿ ವ್ಯವಹರಿಸುತ್ತಾರೆ. ಅದರಲ್ಲಿ ಒಂದು ತ್ರಿವೇಣಿ ಚಿಕನ್ ಆರ್ಟ್ಸ್. ಅದನ್ನು ಆರಂಭಿಸಿದ್ದು ನಿತೇಶ್ ಅಗರ್ವಾಲ್ ಎಂಬ ಯುವಕ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ನಿತೇಶ್ ವ್ಯಾಪಾರಕ್ಕೆ ಬಂದಾಗ ಆತ ಓದುತ್ತಿದದ್ದು ಬರಬೇಕು ಅಂದುಕೊಂಡಾಗ ವಯಸ್ಸು 19 ವರ್ಷ. ಹಾಗಾಗಿ ನಿತೇಶ್‌ ಓದಿದ್ದು ಹೈಸ್ಕೂಲ್ ವರೆಗೆ ಎಂಬುದು ಅಚ್ಚರಿಯ ವಿಚಾರ.

 


ತನ್ನ ಕುಟುಂಬದಲ್ಲಿ ಕಷ್ಟದ ದಿನಗಳನ್ನು ನಿತೇಶ್ ಲಖನೌನಲ್ಲಿ ತ್ರಿವೇಣಿ ಚಿಕನ್ ಆರ್ಟ್ಸ್ ಆರಂಭಿಸಿದರು. 400 ವರ್ಷದ ಇತಿಹಾಸ ಇರುವ ಚಿಕಂಕರಿ ಕಲೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬುದು ಅವರ ಗುರಿ, ಉದ್ದೇಶ ಆಗಿತ್ತು. ಈ ಕಂಪೆನಿಯಲ್ಲಿ ಕೈಯಿಂದಲೇ ಎಂಬ್ರಾಯಿಡರಿ ಚಿಕಂಕರಿ ಕುರ್ತಾ, ಟುನಿಕ್ಸ್, ಸೀರೆ, ಪುರುಷರ ಕುರ್ತಾ, ಮಹಿಳೆಯರ ಲೆಹೆಂಗಾ ಮತ್ತಿತರ ಕರಕುಶಲ ಮತ್ತು ಬಟ್ಟೆಗಳನ್ನು ಉತ್ಪಾದಿಸಲಾಗುತ್ತಿದೆ.

 

ತ್ರಿವೇಣಿ ಚಿಕನ್ ಆರ್ಟ್ಸ್ ಆರಂಭವಾದದ್ದು ಕೇವಲ 13 ಸಾವಿರ ರುಪಾಯಿ ಹೂಡಿಕೆಯೊಂದಿಗೆ. ಆದರೆ ಈಗ ವ್ಯವಹಾರ ಮೂರು ಕೋಟಿ ಇದೆ. ಈ ಬಟ್ಟೆಗಳು ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಯುರೋಪ್, ಸಿಂಗಾಪೂರ್, ಇಂಡೋನೇಷ್ಯಾ, ಬರ್ಮಾ, ಯು.ಎಸ್., ಯು.ಕೆ. ಮತ್ತಿತರ ದೇಶಗಳಿಗೆ ರಫ್ತುಮಾಡಲಾಗುತ್ತಿದೆ.

 

 

ಜಾಗತಿಕ ಮಟ್ಟದಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನಕ್ಕೂ ಇದರಿಂದ ಅನುಕೂಲ ಆಗಿದೆ. ಸದ್ಯಕ್ಕೆ ನಿತೇಶ್ ಅವರ ತಂಡದಲ್ಲಿ ಹದಿನೈದು ಮಂದಿ ಇದ್ದಾರೆ. ಅದರಲ್ಲಿ ಕುಟುಂಬದ ನಾಲ್ವರು ಸದಸ್ಯರು ಕೂಡ ಇದ್ದಾರೆ. ಇದನ್ನು ಹೊರತು ಪಡಿಸಿದಂತೆ ಇನ್ನೂರರಷ್ಟು ಮಹಿಳೆಯರು, ಕೆಲವು ಪುರುಷರು ಪರೋಕ್ಷವಾಗಿ ಇವರ ಜತೆ ಕೆಲಸದಲ್ಲಿ ತೊಡಗಿದ್ದಾರೆ. ಈ ಕಲಾವಿದರು ಎಂಬ್ರಾಯಿಡರಿ ಸೇರಿದಂತೆ ಇತರ ಅಗತ್ಯ ಕೆಲಸಗಳನ್ನು ಮಾಡುತ್ತಾರೆ.
ಒಟ್ಟಾರೆ ಯಾವುದೇ ಡಿಗ್ರಿ ಪಡೆಯದೇ ಈಗಾಗಲೇ ನೂರಾರು ಮಂದಿಗೆ ಉದ್ಯೋಗ ದಾನ ಮಾಡಿರುವ ನಿತೇಶ್‌ ಈಗಿನ ಯುವ ಪೀಳಿಗೆಗೆ ಮಾದರಿದಾತನೇ ಎನ್ನಬಹುದು.

LEAVE A REPLY

Please enter your comment!
Please enter your name here