ಕೆಜಿಎಫ್ ಸಿನಿಮಾದ ಬಳಿಕ ಯಶ್ ಅವರ ಕಥೆ ಏನು ಊಹಿಸಿದ್ದೀರಾ?

0
192

ಕೆಜಿಎಫ್ ಕನ್ನಡದ ಹೆಮ್ಮೆಯ ಚಿತ್ರ ಅಂತಾನೇ ಹೇಳಬಹುದು. ಕಳೆದ ವರ್ಷ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಮಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತದ ಎಲ್ಲಾ ಚಿತ್ರರಂಗದಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗಿಂತ ಪರಭಾಷ ಚಿತ್ರದ ಹಾವಳಿಯೇ ಜಾಸ್ತಿ ಎನ್ನುತ್ತಿದ್ದವರೆಲ್ಲ ಬಾಯಲ್ಲಿ ಬೆರಳಿಟ್ಟುಕೊಂಡು ತೆಪ್ಪಗಿರುವಂತೆ ಮಾಡಿದೆ ಈ ಸಿನಿಮಾ.

 

 

ಪಂಚ ಭಾಷೆಯಲ್ಲಿ ಬಿಡುಗಡೆಯಾದೀ ಸಿನಿಮಾ ಯಶ್ ಅವರಿಗೆ ಅಪಾರ ಗೌರವ ತಂದುಕೊಟ್ಟಿದೆ ಜೊತೆಗೆ ಅಂತರಾಷ್ಟ್ರೀಯ ಸ್ಟಾರ್ ಆಗಿ ಮಾಡಿರುವುದು ವಿಶೇಷ. ದೇಶ ವಿದೇಶದಲ್ಲೂ ರಾಕಿಂಗ್ ಸ್ಟಾರ್ ಹೆಸರು ಕೇಳು ಬರುತ್ತಿದೆ. ಸಿನಿಮಾ ಬಿಡುಗಡೆಯಾಗಿ ವರ್ಷ ಕಳೆದರು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿಲೆ ಇದೆ ಮತ್ತು ಯಶ್ ಅವರಿಗೆ ಸನ್ಮಾನಗಳ ಮೇಲೆ ಸನ್ಮಾನ ಮತ್ತು ಸಾಲು ಸಾಲು ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಳ್ಳುತ್ತಿರುವುದನ್ನು ಮಾಧ್ಯಮಗಳು ಪ್ರಕಟಿಸುತ್ತಲೇ ಇವೆ.

 

 

ಅಬ್ಬಾ ಒಂದೇ ಒಂಂದು ಸಿನಿಮಾ ಒಬ್ಬ ನಟ, ನಿರ್ದೇಶಕ ಮತ್ತು ಚಿತ್ರರಂಗಕ್ಕೆ ಈ ಮಟ್ಟದ ಕೀರ್ತಿ ಯಶಸ್ಸು ತಂದು ಕೊಟ್ಟಿದೆ ಅಂದರೆ ಈ ವಿಚಾರ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡುವಂತಹ ವಿಷಯ. ಇನ್ನು ಕೆಜಿಎಫ್ ಚಾಪ್ಟರ್ ಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ. ಬಾಳಿವುಡ್ ನಟ ಸಂಜಯ್ ದತ್ ಅಭನಯಿಸುತ್ತಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಿನಿಮಾ ಬಿಡುಗಡೆಯಾದ ಮೇಲೆ ದಾಖಲೆಗಳ ಮೇಲೆ ದಾಖಲೆ ಬರೆಯುವದಂತು ಸತ್ಯ. ಆದರೆ ಕೆಜಿಎಫ್ ನಂತರ ಯಶ್ ಅವರ ಮುಂದಿನ ಹೆಜ್ಜೆ ಏನು ಎಂದು ಊಹಿಸಿದರೆ ಅನೇಕ ಅಚ್ಚರಿ ಮೂಡಿಸುವ ಪ್ರಶ್ನೆಗಳು ಉದ್ಭವವಾಗುತ್ತದೆ.

 

 

ಹೌದು ಕೆಜಿಎಫ್ ನ ಎರಡು ಅಧ್ಯಾಯಗಳು ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವುದರಿಂದ ಮುಂದಿನ ಸಿನಿಮಾಗಳು ಇದೇ ರೀತಿಯಲ್ಲಿರಬೇಕು ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿರುತ್ತಾರೆ.. ಆದರೆ ಪ್ರತಿಯೊಂದು ಸಿನಿಮಾಗೂ ರಾಶಿ ರಾಶಿ ಹಣವನ್ನು ಸುರಿಯಲು ಕನ್ನಡ ಚಿತ್ರರಂಗದಲ್ಲಿ ಮುಂದಾಗುತ್ತಾರೆ ಎಂಬ ಪ್ರಶ್ನೆಗಳು ಮೂಡುತ್ತಿವೆ.

 

 

ಇದರ ಜೊತೆಯಲ್ಲಿ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಯಶ್,ಕೆಜಿಎಫ್ ಚಾಪ್ಟರ್ ಟೂ ಬಳಿಕ ಯಾವ ಚಿತ್ರವನ್ನು ಮಾಡುತ್ತಾರೆ ಎಂಬ ಕುತೂಹಲಗಳು ತಾರಕ್ಕೇರಿರುತ್ತವೆ.. ಈಗಾಗಲೇ ಕಮರ್ಷಿಯಲ್ ಆಡಿಯನ್ಸ್ ಸೆಟ್ ಮಾಡಿಕೊಂಡಿರುವುದರಿಂದ ತಮ್ಮ ಮುಂದಿನ ಚಿತ್ರವು ಕಮರ್ಷಿಯಲ್ ಆಗಿಯೇ ಇರಬೇಕು ಎಂದು ಎಲ್ಲಾ ಚಿತ್ರರಂಗದ ಪ್ರೇಕ್ಷಕರ ನಿರೀಕ್ಷೆಯಾಗಿರುತ್ತದೆ.. ಆದರೆ ಪ್ರಶಾಂತ್ ನೀಲ್ ಅವರ ತರ ಮೇಕಿಂಗ್ ಮತ್ತು ಚಿತ್ರಕಥೆ ಹೊಡೆಯುವವರು ಸಿಗುತ್ತಾರಾ? ಎಂಬುದು ಯಕ್ಷ ಪ್ರಶ್ನೆ.

 

 

ಇದೇ ರೀತಿಯಾದ ಸಂಕಷ್ಟ ತೆಲುಗು ಚಿತ್ರರಂಗದಲ್ಲೂ ನಡೆದಿದೆ.. ಹೌದು ಬಾಹುಬಲಿ ಚಿತ್ರದ ಬಳಿಕ ಸಾಕಷ್ಟು ಕೀರ್ತಿಯನ್ನು ಪಡೆದಂತಹ ನಟ ಪ್ರಭಾಸ್ , ಮುಂದಿನ ಸಿನಿಮಾ ಯಾವುದು ಮಾಡುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತ್ತಿದ್ದರು.. ಆದರೆ ಎರಡು ವರ್ಷಗಳ ಕಾಲ ಕಾದಿದ್ದ ಪ್ರೇಕ್ಷಕರಿಗೆ ಪ್ರಭಾಸ್ ನಿರಾಸೆ ಉಂಟುಮಾಡಿದ್ದಾರೆ.. ಅವರ ಮುಂದಿನ ಸಿನಿಮಾ ಸಾಹೋ ಮಕ್ಕಳೇ ಮಲಗಿಕೊಂಡು ಸಾಕಷ್ಟು ಹಣವನ್ನು ಸಹಿತ ಪ್ರಭಾಸ್ ಅವರು ಕಳೆದುಕೊಂಡರು.

 

 

ಇದೀಗ ಕನ್ನಡದಲ್ಲಿ ಪ್ರಭಾಸ್ ಅವರಿಗಿಂತ ಸಿಕ್ಕಾಪಟ್ಟೆ ಹೈಪ್ ಎಸ್ ಅವರಿಗೆ ಇದೆ.. ಆದರೆ ಕೆಜಿಎಫ್ ಚಾಪ್ಟರ್ ೨ ಬಳಿಕ ಯಾವ ಚಿತ್ರವನ್ನು ಮಾಡುತ್ತಾರೆ? ಚಿತ್ರವನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೋ ದೇವರೆ ಬಲ್ಲ.. ಆದರೆ ಪ್ರಭಾಸ್ ರೀತಿ ಎಡವದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇನ್ನೂ ಒಳ್ಳೆ ಒಳ್ಳೆ ಸಿನಿಮಾವನ್ನು ನೀಡುತ್ತಾ ಇನ್ನೂ ಉನ್ನತ ಸ್ಥಾನಕ್ಕೆ ಇರಬೇಕೆಂಬುದು ನಮ್ಮ ಆಶಯ

LEAVE A REPLY

Please enter your comment!
Please enter your name here