ಶ್ರೀನಿವಾಸ ಮೂರ್ತಿ ಅವರಿಗೆ ಈ ಚಿತ್ರ ತಂಡ ಅವಮಾನ ಮಾಡಿತೆ ?

0
433

ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಹಿರಿಯ ಕಲಾವಿದರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಅನಿಸುತ್ತಿದೆ. ಒಂದು ಕಾಲದಲ್ಲಿ ಚಿತ್ರರಂಗವನ್ನು ಆಳಿದ್ದ ಅದೆಷ್ಟೋ ಪೋಷಕ ಪಾತ್ರದಾರಿಗಳು, ಕಾಮಿಡಿ ಕಲಾವಿದರು, ಖಳ ನಾಯಕರು ಇಂದು ಯಾವ ಸಿನಿಮಾದಲ್ಲಿ ಅವಕಾಶವಿಲ್ಲದೆ, ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉದಾಹರಣೆಗೆ ದಶಕಗಳ ಹಿಂದೆ ಕನ್ನಡ ಚಿತ್ರರಂಗವನ್ನು ಆಳಿ, ಕನ್ನಡಕ್ಕೆ ಹೆಮ್ಮೆ ತಂದು ಕೊಟ್ಟ ನಟ ಕೆ.ಎಸ್ ಆಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್ ಅವರು ಕೂಡ ಒಳ್ಳೆಯ ಕಲಾವಿದರೆ, ನಟನೆಯಲ್ಲಿ ನಿಪೂಣರೆ, ಆದರೆ ಸಿನಿಮಾದಲ್ಲಿ ಅವಕಾಶವಿಲ್ಲದೆ ಊಬರ್ ಕ್ಯಾಬ್ ಚಾಲಕನಾಗಿರುವುದು ಬೇಸರದ ಸಂಗತಿ.

 

 

 

ಇನ್ನು ಟೆನ್ನಿಸ್ ಕೃಷ್ಣ ಅವರ ಕಾಮಿಡಿಗೊಸ್ಕರನೇ ಜನ ಕಾದು ಕುಳಿತಿರುತ್ತಿದ್ದರು, ಆದರೆ ಅವರಿಗೆ ಈಗ ಅವಕಾಶವೇ ಇಲ್ಲ, ಇದರ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿರುವ ಅವರು, ತೆಲುಗು ಚಿತ್ರರಂಗದಲ್ಲಿ ನೋಡಿ, ಬ್ರಹ್ಮಾನಂದನ್ ಅವರಿಗೆ ಆರೋಗ್ಯ ಸರಿಯಿಲ್ಲ ಆದರೂ ವರ್ಷಕ್ಕೆ ಮೂರ್ನಾಲ್ಕು ಸಿನಿಮಾದಲ್ಲಿ ಅಭಿನಯಿಸುತ್ತಾರೆ, ಅವರ ಡೇಟ್ಸ್ ಗಾಗಿ ನಿರ್ಮಾಪಕರು ಕಾಯುತ್ತಾರೆ. ಆದರೆ ನಮ್ಮ ಚಿತ್ರರಂಗದಲ್ಲಿ ನಮ್ಮನ್ನು ಕೇಳುವವರೇ ಇಲ್ಲ ಹಾಗೂ ಗೌರವವೂ ಇಲ್ಲ ಎಂದು ಭಾವನಾತ್ಮಕ ಹೇಳಿಕೆ ನೀಡಿದ್ದರು.

 

 

ಇವರಂತೆಯೇ ಅದೆಷ್ಟೋ ಹಿರಿಯ ಕಲಾವಿದರು, ಪ್ರತಿಭೆಗಳು, ಖಳನಾಯಕರ ಮಕ್ಕಳು ಸಿನಿಮಾದಲ್ಲಿ ಅವಕಾಶವಿಲ್ಲದೆ, ಹೊಟ್ಟೆ ಪಾಡಿಗಾಗಿ ಬೇರೆ ಕೆಲಸ ನೋಡಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗ ಉತ್ತಮವಾಗಿ ಬೆಳೆಯುತ್ತಿದೆ ಸರಿ.. ಆದರೆ ಒಂದು ಕಾಲದಲ್ಲಿ ಚಿತ್ರರಂಗವನ್ನು ಆಳಿದ ಕಲಾವಿದರನ್ನು ಮೂಲೆ ಗುಂಪು ಮಾಡುವುದು ಯಾವ ಮಟ್ಟಿಗೆ ಸರಿ ಹೇಳಿ?

 

 

ಈಗ ಮತೊಮ್ಮೆ ಇದೇ ರೀತಿಯ ಅನ್ಯಾಯಾ ಭರಾಟೆ ಚಿತ್ರತಂಡದಿಂದ ಹಿರಿಯ ಕಲಾವಿದರಿಗೆ ಆಗಿದೆ.. ಮಾಡಿದ ಅನ್ಯಾಯವೇನು? ಆ ಕಲಾವಿದರು ಯಾರು ತಿಳಿದು ಕೊಳ್ಳಲು ಮುಂದೇ ಓದಿ..

ಈ ವರ್ಷ ತೆರೆಕಂಡ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಭರಾಟೆ ಭರ್ಜರಿಯಾಗಿ ಸೂಪರ್ ಹಿಟ್ ಏನೋ ಆಯ್ತು, ಮತ್ತು ಅಮೇಜಾನ್ ಪ್ರೈಮ್ ನಲ್ಲೂ ಕೂಡ ಈ ಸಿನಿಮಾ ಲಭ್ಯವಿದೆ. ಸುಮಾರು ಎರಡು ವರ್ಷಗಳ ನಂತರ ತೆರೆಯ ಮೇಲೆ ಮುರುಳಿ ಅವರನ್ನು ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದರು, ಅಲ್ಲದೇ ಇದೆ ಮೊದಲ ಬಾರಿ, ಈ ರೋರಿಂಗ್ ಸ್ಟಾರ್ ದ್ವಿ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರಶಂಸೆಯನ್ನು ಗಿಟ್ಟಿಸಿಕೊಂಡರು.

 

 

ಇನ್ನು ಅವರು ಅಭಿನಯಿಸಿದ್ದ ಹಿರಿಯ ಪಾತ್ರ ರತ್ನಾಕರ, ಅದೆಷ್ಟೋ ಜನರಿಗೆ ಈ ರತ್ನಾಕರ ಶ್ರೀ ಮುರುಳಿ ಯವರೇ ಎಂದು ತಿಳಿದಿಯೇ ಇರಲಿಲ್ಲ.. ಆ ರೀತಿಯ ಅಭಿನಯ ಮತ್ತು ಮೇಕಪ್ ಮಾಡಲಾಗಿತ್ತು.. ಆದರೆ ಮುರುಳಿಯವರ ರತ್ನಾಕರ ಪಾತ್ರವನ್ನು, ಹಿರಿಯ ಕಲಾವಿದ ಶ್ರೀನಿವಾಸ್ ಮೂರ್ತಿ ಅವರಿಂದ ಕಿತ್ತು ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ !

 

 

ಶ್ರೀನಿವಾಸ ಮೂರ್ತಿ, ಕನ್ನಡ ಚಲನಚಿತ್ರರಂಗದ, ಬಹು ದೊಡ್ಡ ಕಲಾವಿದರಾಗಿದ್ದು, ಗುರು ಶಿಷ್ಯರು, ಶ್ರೀರಸ್ತು ಶುಭಮಸ್ತು, ಚಂದ್ರಮುಖಿ ಪ್ರಾಣಸಖಿ, ದೊಡ್ಮನೆ ಹುಡ್ಗ, ನಟ ಸಾರ್ವಭೌಮ ಹೀಗೆ ಎರಡು ತಲೆಮಾರಿನ ನಾಯಕರ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಣ್ಣಾ ಬಸವಣ್ಣ, ಪಾಠಲಾ ಭೈರವಿ ಮತ್ತು ತ್ರಿವೇಣಿ ಸಂಗಮ ಹೀಗೆ ಹಲಾವರು ದೂರದರ್ಶನ ಸರಣಿಯಲ್ಲಿ ನಟಿಸಿ, ನಿರ್ದೇಶಿಸಿದ್ದಾರೆ ! ಹೀಗೆ ಚಿತ್ರರಂಗದಲ್ಲಿ ಕೆಲಸ ಮಾಡಿ, ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿರುವ ಅವರಿಗೆ ಭರಾಟೆ ಚಿತ್ರರಂಗದವರು ಅಗೌರವವನ್ನು ನೀಡಿದ್ದಾರೆ !

 

 

ಭರಾಟೆ ಸಿನಿಮಾದ ಸ್ಕ್ರಿಪ್ಟ್ ಪ್ರಾರಂಭವಾದಾಗ ನಿರ್ದೇಶಕ ಚೇತನ್ ಅವರು, ರತ್ನಾಕರ ಪಾತ್ರವನ್ನು ಶ್ರೀನಿವಾಸ್ ಮೂರ್ತಿ ಅವರು ಅಭಿನಯಿಸ ಬೇಕು ಎಂದು ಕೊಂಡಿದ್ದರಂತೆ. ಅಲ್ಲದೇ ಅವರ ಮನೆಗೆ ಚಿತ್ರತಂಡ ಹೋಗಿ ಕಥೆಯನ್ನು ಹೇಳಿ, ಶ್ರೀನಿಮಾಸ ಮೂರ್ತಿ ಅವರಿಂದ 12 ದಿನಗಳ ಡೇಟ್ ಪಡೆದುಕೊಂಡಿದ್ದರಂತೆ. ಅಂತೆಯೆ ಅವರು ಬೇರೆ ಯಾವ ಸಿನಿಮಾಗೂ ಡೇಟ್ಸ್ ನೀಡದೆ, ಭರಾಟೆ ಚಿತ್ರೀಕರಣಕ್ಕಾಗಿ ಕಾಯುತ್ತಿದ್ದರಂತೆ, ಆದರೆ ತಿಂಗಳುಗಳು ಉರುಳಿದರು, ಚಿತ್ರತಂಡದಿಂದ ಯಾವುದೇ ರೀತಿಯಾ ಸಂದೇಶ ಆಗಲಿ, ಕರೆ ಯಾಗಲಿ
ಬರಲಿಲ್ಲವಂತೆ.

 

 

ಸಾಮನ್ಯವಾಗಿ ಡೇಟ್ಸ್ ಫ್ರೀಜ್ ಮಾಡಿದ ಮೇಲೂ, ಚಿತ್ರದಲ್ಲಿ ಆ ಪಾತ್ರದ ಅವಶ್ಯಕತೆ ಇಲ್ಲವಾದಲ್ಲಿ ಕತ್ತರಿಸಲಾಗುತ್ತದೆ. ಹೀಗೆಯೇ ಆಗಿರಬಹುದು ಎಂದುಕೊಂಡ ಶ್ರೀನಿವಾಸ ಮೂರ್ತಿ ಅವರು ಸುಮ್ಮಾನಾಗಿದ್ದಾರೆ ಆದರೆ ಭರಾಟೆ ಸಿನಿಮಾ ಬಿಡುಗಡೆಯಾದ ಮೇಲೆ ಅವರಿಗೆ ತಿಳಿದು ಬಂದಿದೆ, ನನ್ನ ಪಾತ್ರವನ್ನು ಕತ್ತರಿಸಿಲ್ಲ ಬದಲಿಗೆ ರತ್ನಾಕರ ಪಾತ್ರವನ್ನು ಸ್ವತಃ ಶ್ರೀ ಮುರುಳಿಯವರೇ ನಿರ್ವಹಿಸಿದ್ದಾರೆಂದು.

 

 

ಈ ವಿಚಾರವನ್ನು ಶೀನಿವಾಸ ಮೂರ್ತಿಯವರು ತಮ್ಮ ಆತ್ಮೀಯರಿಗೆ ಹೇಳಿಕೊಂಡು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅವರ ಪ್ರಕಾರ,ರತ್ನಾಕರ ಪಾತ್ರವನ್ನು ಮುರುಳಿ ಯವರೇ ಮಾಡಲಿ ಪರವಾಗಿಲ್ಲ, ಆದರೆ ಮಾತುಕಥೆ ನಡಿಸಿ ಡೇಟ್ ಫಿಕ್ಸ್ ಆದಮೇಲೆ ಹೀಗೆ ಮಾಡಿದರೆ ಹೇಗೆ ಹೇಳಿ? ಹೋಗ್ಲಿ ಆ ಪಾತ್ರವನ್ನು ಅವರೇ ನಿರ್ವಹಿಸಲಿ, ಒಂದು ಮಾತು ಚಿತ್ರತಂಡದವರು ಅಥವಾ ಮುರುಳಿ ಅವರು ತಿಳಿಸಬಹುದಿತ್ತು, 12 ದಿನಗಳ ಕಾಲ, ಭರಾಟೆ ಸಿನಿಮಾಗೆ ಕಾಯುತ್ತ, ಬೇರೆ ಸಿನಿಮಾವನ್ನು ಒಪ್ಪಿಕೊಳ್ಳದೆ, ನಿರುದ್ಯೋಗಿಯನ್ನಾಗಿ ಮಾಡಿದ್ದು ಸರಿಯೇ ಎಂಬುದು ಶ್ರೀನಿವಾಸ್ ಮೂರ್ತಿ ಅವರ ಅಕ್ಷೇಪ.

 

 

ಹೇಳಿ ಶ್ರೀ ಮುರುಳಿ ಯವರೆ, ಹಿರಿಯ ಕಲಾವಿದರ ಪಾತ್ರವನ್ನು ಕಿತ್ತುಕೊಂಡಿದ್ದು ಸರಿಯೇ ? ಯಾಕೆ ನೀವು ಅವರಿಗೆ ತಿಳಿಸಲಿಲ್ಲ… ನೀವೆ ಉತ್ತರಿಸ ಬೇಕಾಗಿದೆ…

LEAVE A REPLY

Please enter your comment!
Please enter your name here