ಬರ್ತಾ ಇದೆ ಕನ್ನಡದಲ್ಲಿ “ಧೂಮ್ agian”!

0
173

‘ಧೂಮ್’, ಬಾಲಿವುಡ್ ನ ಈ ಸೀರಿಸ್ ಅನ್ನು ಯಾರು ತಾನೇ ಮರೆಯುತ್ತಾರೆ ಹೇಳಿ..? ಈ ಸೀರಿಸ್ ಬಿ ಟೌನ್ ನಲ್ಲಿ ಭಾರಿ ಸದ್ದು ಮಾಡಿದ್ದ ಸಿನಿಮಾ !

ಧೂಮ್ ಅಂದರೆ ಬ್ಯಾ೦ಗ್, ಹಿಂದಿ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರ ಸರಣಿಯಾಗಿದೆ .. ಈ ಚಿತ್ರವು ಎಸಿಪಿ ಜೈ ದೀಕ್ಷಿತ್ (ಅಭಿಷೇಕ್ ಬಚ್ಚನ್) ಅವರ ಸುತ್ತ ಹೆಣೆದಿರುವ ಕತೆಯಾಗಿದೆ.. ಕಳ್ಳರನ್ನು ಸೆರೆ ಹಿಡಿಯುವ ದಕ್ಷ ಪೊಲೀಸ್ ಅಧಿಕಾರಿಯಾಗಿ ಹಾಗೂ ಪಂಚಿಂಗ್, ಕಾಮಿಡಿ ಪಾತ್ರದಲ್ಲಿ ಉದಯ್ ಚೋಪ್ರಾ ಕಾಣಿಸಿಕೊಂಡಿದ್ದರು… ಬಾಕ್ಸ್ ಆಫೀಸ್ ಆದಾಯದ ದೃಷ್ಟಿಯಿಂದ , ಧೂಮ್ ಬಾಲಿವುಡ್ ನ ಎರಡನೇ ಅತಿ ದೊಡ್ಡ ಜಲನಗರ ಚಿತ್ರ ಫ್ರಾಂಚೈಸಿ ಆಗಿದೆ !

ಈಗ ಪ್ರೇಕ್ಷಕರನ್ನು ರಂಜಿಸಲು ಮತ್ತೆ ‘ಧೂಮ್’ again ಬರುತ್ತಿದೆ ..
ಆದರೆ ಈ ಬಾರಿ ಬಾಲಿವುಡ್ ನಲ್ಲಿ ಅಲ್ಲ ..ಸ್ಯಾಂಡಲ್ವುಡ್ನಲ್ಲಿ ಸಿನಿಮಾ ತಯಾರಾಗಿದೆ ..

ಇನ್ನು ಈ ಚಿತ್ರದ ವಿಶೇಷತೆ ಏನೆಂದರೆ ಕ್ರಿಕೆಟ್ ನ ಮಾಜಿ ಆಟಗಾರ ಶ್ರೀಶಾಂತ್ ಅಭಿನಯಿಸಿದ್ದಾರೆ.

ಹಾಗೂ ಅಂತಾರಾಷ್ಟ್ರೀಯ ರೂಪದರ್ಶಿ ಸ್ಪೇನ್ ನ ಜನಿರ ಐದರ್ ನಾಯಕಿಯಾಗಿ ಅಭಿನಯಿಸಿದ್ದಾರೆ ..

ಇನ್ನು ಶ್ರೀಶಾಂತ್ ಅವರಿಗೆ ಕನ್ನಡದಲ್ಲಿ ಇದು ಎರಡನೇ ಸಿನಿಮಾವಾಗಿದ್ದು,ತಮ್ಮ ಮೊದಲನೇ ಸಿನಿಮಾ ಕೆಂಪೇಗೌಡ ೨ ,ಮುಂದಿನ ವಾರ ಬಿಡುಗಡೆಯಾಗುತ್ತಿದೆ …

ಪರಮಾತ್ಮ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಸುಜಿತ್ ಶೆಟ್ಟಿ ಹಾಗೂ ರಾಜ್ ಶೆಟ್ಟಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ ..

ನಾಲ್ವರು ಬೈಕ್ ರೇಸ್ ಗಳ ಕಥೆಯನ್ನು ಒಳಗೊಂಡ ಸಿನಿಮಾವನ್ನು ರಾಜೇಶ್ ವರ್ಮಾ ನಿರ್ದೇಶನ ಮಾಡಿದ್ದಾರೆ ..

ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಿದ್ದಾರೆ .. ಇನ್ನು ಟೀಸರ್ ನಲ್ಲಿ ಶ್ರೀಶಾಂತ್, ಸ್ಪೆಷಲ್ ಸಿಐಡಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ..
ಧೂಮ್ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ಮಲಯಾಳಂ ಸೇರಿದಂತೆ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ

LEAVE A REPLY

Please enter your comment!
Please enter your name here