ಪಹರೆ, ಗಸ್ತು ಕರ್ತವ್ಯ ಮುಗಿಸಿದ `ಕಾಪ್ಟನ್ ಕೂಲ್’..!

0
202

ಟೀಂ ಇಂಡಿಯಾದ ಮಾಜಿ ನಾಯಕ, ಕಾಪ್ಟನ್ ಕೂಲ್ ಎಂ.ಎಸ್.ಧೋನಿ ಅವರು ಕಳೆದ ಒಂದು ತಿಂಗಳ ಹಿಂದೆ ಭಾರತ ಸೇನೆಗೆ ಸೇವೆ ಸಲ್ಲಿಸಲ್ಲು ಜಮ್ಮು, ಕಾಶ್ಮೀರಕ್ಕೆ ತೆರಳಿದ್ದರು. ಭಾರತ ತಂಡ ವೆಸ್ಟ್ ಇಂಡೀಸ್ ತಂಡದ ವಿರುದ್ದ ಸೆಣಸಾಡಲು ತಂಡದ ಆಯ್ಕೆ ರಚನೆಯ ಸಮಯದಲ್ಲಿ ಧೋನಿ ಅವರು ವೆಸ್ಟ್ ಇಂಡೀಸ್ ಟೂರ್ನಿಯಿಂದ ವಿಶ್ರಾಂತಿ ಪಡೆಯುವುದಾಗಿ ಹೊರ ಉಳಿದರು.

ಧೋನಿ ಅವರು ತಮ್ಮ ಸಮಯವನ್ನು ಭಾರತ ಸೇನೆಯೊಡನೆ ಕಳೆಯಬೇಕು ಎಂದು ತಮ್ಮ ಆಶಯವನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರು. ಅವರು ಅಂದುಕೊಂಡಂತಯೇ ಸೇನೆಯ ಯೋಧರ ಜೊತೆ ಸೇರಿಕೊಂಡು ಸತತ ಎರಡು ವಾರಗಳ ಕಾಲ ಪಹರೆ ಮತ್ತು ಗಸ್ತು ಕರ್ತವ್ಯವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ.

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಆಂಗವಾಗಿ ಧೋನಿ ಅವರು ಭಾರತೀಯ ಯೋಧರೊಂದಿಗೆ ಸಮಯವನ್ನು ಕಳೆದಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 106 ಬೆಟಾಲಿಯನ್ ತಂಡದೊಂದಿಗೆ ಅವರು ಗೌರವ ಲೆಫ್ಟಿನಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ತಿಂಗಳ ಕಡೆಯ ದಿನಾಂಕದಿಂದ ಆರಂಭ ಮಾಡಿದ ಧೋನಿ ಅವರು ಸ್ವಾತಂತ್ರ್ಯ ದಿನಾಚರಣೆ ಮುಗಿಯುವರೆಗೂ ಇದ್ದು ಸೇವೆ ಸಲ್ಲಿಸಿ, ದೆಹಲಿಗೆ ಮರಳಿ ಬಂದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಅವರು ಕಾಶ್ಮೀರದ ಲಡಾಕ್‍ನಲ್ಲಿ ಮಕ್ಕಳೊಂದಿಗೆ ಆಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ಧೋನಿ ತಮ್ಮ ಬಿಡುವಿನ ಸಮಯವನ್ನು ಸೇನೆಯ ಯೋಧರೊಂದಿಗೆ ಕಳೆದಿರುವುದು ಈಗ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಹಾಗೂ ಅವರ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here